ನವದೆಹಲಿ: ಭಾರತ ಹೆಮ್ಮೆ ಪಡುವಂತಹ, ವಿಶ್ವಕ್ಕೇ ಮಾದರಿಯಾಗುವ, ದೇಶಿಯವಾಗಿ ತಯಾರಿಸಲಾಗಿರುವ "ಫೆಲುಡಾ" ಕೊರೋನಾ-19 ಟೆಸ್ಟಿಂಗ್ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ.
ಕೋವಿಡ್-19 ಗೆ ಕಾರಣವಾಗುವ SARS Cov-2 ವೈರಾಣುವನ್ನು ಪತ್ತೆ ಮಾಡುವುದಕ್ಕೆ ಈ ಪರೀಕ್ಷಾ ವಿಧಾನದಲ್ಲಿ ಸಿಆರ್ ಐಎಸ್ ಪಿ ಆರ್ (CRISPR) ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಟೆಸ್ಟಿಂಗ್ ವಿಧಾನವನ್ನು ವಾಣಿಜ್ಯವಾಗಿ ಬಳಕೆ ಮಾಡುವುದಕ್ಕೆ ಔಷಧ ನಿಯಂತ್ರಕ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಮಂಡಳಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ದೆಹಲಿ ಹಾಗೂ ಟಾಟಾ ಗ್ರೂಪ್ ನ ಫಲವಾಗಿ ಈ ಅದ್ಭುತ ಸಾಧನೆ ಹೊರಬಂದಿದ್ದು ಈ ವಿಧಾನಕ್ಕೆ ಫೆಲುಡಾ ಎಂದು ನಾಮಕರಣ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.