ತಿರುವನಂತಪುರ: ಅಕ್ಟೋಬರ್ 1 ರಿಂದ ರಾಜ್ಯದ ಪಡಿತರ ಅಂಗಡಿಗಳ ಕೆಲಸದ ಸಮಯವನ್ನು ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿರುವರು. ಪಡಿತರ ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ 7 ರವರೆಗೆ ತೆರೆದಿರುತ್ತವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಆಹಾರ ಕಿಟ್‍ಗಳ ವಿತರಣೆ ಸೆಪ್ಟೆಂಬರ್‍ನಿಂದ ಡಿಸೆಂಬರ್ ವರೆಗೆ ನಾಲ್ಕು ತಿಂಗಳವರೆಗೆ ಪ್ರಾರಂಭವಾಗಿದೆ ಎಂದು ಸಿಎಂ ಹೇಳಿದರು. ಇದು 88.42 ಲಕ್ಷ ಕುಟುಂಬಗಳಿಗೆ ನೆರವಾಗಲಿದೆ ಎಂದರು. ಲಾಕ್ ಡೌನ್ ಸಮಯದಲ್ಲಿ ಆಹಾರ ಕಿಟ್ ಗಳಿಗಾಗಿ 1,000 ಕೋಟಿ ರೂ. ಕೇಂದ್ರವು ಘೋಷಿಸಿದ ಯೋಜನೆಗಳಿಗೆ ಹೆಚ್ಚುವರಿಯಾಗಿ ಇದು ಇದೆ ಎಂದು ಅವರು ಹೇಳಿದರು.
ಕೋವಿಡ್ ಕಾರಣ ಓಣಂ ಗಿಂತ ಮೊದಲೇ ಆಹಾರ ಕಿಟ್‍ಗಳನ್ನು ಉಚಿತವಾಗಿ ನೀಡಲಾಯಿತು. ಕಿಟ್‍ನಲ್ಲಿ ಬಟಾಣಿ, ಸಕ್ಕರೆ, ಗೋಧಿಹುಡಿ ಮತ್ತು ತೆಂಗಿನ ಎಣ್ಣೆ ಸೇರಿದಂತೆ ಎಂಟು ವಸ್ತುಗಳು ಇದ್ದವು. ಸಾರ್ವಜನಿಕ ವಿತರಣಾ ಕ್ಷೇತ್ರದಲ್ಲಿ ಹೆಮ್ಮೆಯ ಸಾಧನೆ ಇದಾಗಿದೆ. ಪ್ರಣಾಳಿಕೆಯಲ್ಲಿಲ್ಲದ ಹೊಸ ಯೋಜನೆಗಳನ್ನು ಸರ್ಕಾರೀ ಮೂಲಕ ಜಾರಿಗೆ ತಂದಿದೆ. ಪಡಿತರ ಅಂಗಡಿಗಳ ಮೂಲಕ ವಿತರಣೆಯಲ್ಲಿನ ಭ್ರಷ್ಟಾಚಾರ ಈಗಿಲ್ಲವಾಗಿದೆ. ಮತ್ತು ಜನರಿಗೆ ಯಾವುದೇ ದೂರುಗಳಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.