ಬದಿಯಡ್ಕ: ತುಳುವೆರೆ ಆಯನೊ ಕೂಟ ಬದಿಯಡ್ಕದ ನೇತೃತ್ವದಲ್ಲಿ ಸೆ.20 ರಂದು ಭಾನುವಾರ ಬೆಳಿಗ್ಗೆ 10 ರಿಂದ ಬದಿಯಡ್ಕದ ಕ್ರಿಯೆಟಿವ್ ಕಾಲೇಜು ವಠಾರದಲ್ಲಿ "ನೀರ್ ನೀರ್ ನಿರ್ನಾಲ್" ವಿಶೇಷ ಕಾರ್ಯಕ್ರಮ ಮತ್ತು ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಉದ್ಘಾಟಿಸುವರು.
ಬಳಿಕ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಸುಂದರ ಬಾರಡ್ಕ ಅಧ್ಯಕ್ಷತೆ ವಹಿಸುವರು. ಹಿರಿಯ ಕವಿ, ಲೇಖಕ ಕೆ.ಸಿ.ಪಾಟಾಳಿ ಪಡುಮಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಕನ್ನಡ, ತುಳು, ಮಲೆಯಾಳ, ಸಂಸ್ಕøತ, ಬ್ಯಾರಿ, ಕೊಂಕಣಿ, ಉರ್ದು, ಹವ್ಯಕ ಕನ್ನಡ, ಕರ್ಹಾಡ, ಬೈರ ಕನ್ನಡ, ಗೌಡ ಕನ್ನಡ, ಹಿಂದಿ, ಆಂಗ್ಲ, ತಮಿಳು ಸಹಿತ ಹಲವು ಭಾಷೆಗಳ ಕವಿಗಳು ಭಾಗವಹಿಸುವರು.