ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಲಂಚಕ್ಕೆ ಸಂಬಂಧಿಸಿದ ಪ್ರಕರಣವನ್ನು ಹಿಂಪಡೆಯಬೇಕೆಂಬ ಸರ್ಕಾರದ ಬೇಡಿಕೆಯನ್ನು ತಿರುವನಂತಪುರ ಸಿಜೆಎಂ ನ್ಯಾಯಾಲಯ ತಿರಸ್ಕರಿಸಿದೆ. 2015 ರ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗಲಭೆಯ ನಂತರ ಸದನದಲ್ಲಿ ಗಲಾಟೆ ನಡೆದಿತ್ತು.
ಉಮ್ಮನ್ ಚಾಂಡಿ ಸರ್ಕಾರದ ಅವಧಿಯಲ್ಲಿ ನಡೆದ ಈ ಪ್ರಕರಣದಲ್ಲಿ ಹಾಲಿ ಸಂಸದರಾದ ಕೆ.ಟಿ.ಜಲಿಲ್, ಇ.ಪಿ.ಜಯರಾಜನ್ ಸೇರಿದಂತೆ ಆರು ಸಂಸದರು ಆರೋಪಿಗಳಾಗಿದ್ದಾರೆ. ಅವರು ಸ್ಪೀಕರ್ ಡಯಾಸ್ ನ್ನು ಭೇದಿಸಿ 2.5 ಲಕ್ಷ ರೂ. ನಷ್ಟ ಮಾಡಿರುವರೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.
2015ರ ಮಾರ್ಚ್ 13 ರಂದು, ಮಾಜಿ ಹಣಕಾಸು ಸಚಿವ ಮತ್ತು ಕೇರಳ ಕಾಂಗ್ರೆಸ್ ಮುಖಂಡ ದಿ.ಕೆ.ಎಂ.ಮಣಿ ಅವರು ಬಜೆಟ್ ಭಾಷಣ ಮಾಡಲು ಸ್ಪೀಕರ್ ಡಯಾಸ್ ಗೆ ತೆರಳುತ್ತಿದ್ದಾಗ ಅಂದಿನ ಪ್ರತಿಪಕ್ಷ ಸಂಸದರು ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಕಲಾಪ ನಡೆದಿತ್ತು. ಕಂಟೋನ್ಮೆಂಟ್ ಪೆÇಲೀಸರು ಅಂದಿನ ಆರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಯುಡಿಎಫ್ ಸರ್ಕಾರ ಆಡಳಿತಾವಧಿಯಲ್ಲೇ ಚಾರ್ಜ್‍ಶೀಟ್ ದಾಖಲಿಸಲಾಗಿತ್ತು. ಸಾರ್ವಜನಿಕ ವಿನಾಶ ಕಾಯ್ದೆಯಡಿ ಜಾಮೀನು ರಹಿತ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರ ನ್ಯಾಯಾಲಯಕ್ಕೆ ಸೂಚಿಸಿತ್ತು.
ಪ್ರಕರಣದ ಆರೋಪಿಗಳಾದ ಕೆ.ಟಿ.ಜಲೀಲ್, ವಿ.ಶಿವಂಕುಟ್ಟಿ, ಇ.ಪಿ.ಜಯರಾಜನ್, ಕೆ ಕುಂಞÂ ಮುಹಮ್ಮದ್, ಸಿ.ಕೆ ಸದಾಶಿವನ್ ಮತ್ತು ಕೆ ಅಜಿತ್. ವಿ ಶಿವಾಂಕುಟ್ಟಿ ಅವರು ಪ್ರಕರಣವನ್ನು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದನ್ನು ಅನುಸರಿಸಿ, ಪ್ರಕರಣವನ್ನು ಹಿಂಪಡೆಯಲು ಪ್ರಾಸಿಕ್ಯೂಷನ್ ನಿರ್ಧರಿಸಿತು. ಈ ಕ್ರಮದ ವಿರುದ್ಧ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಿಜೆಎಂ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಅವಕಾಶವಿದೆ.