HEALTH TIPS

2019ರಲ್ಲಿ ಔಷಧ ಕಾರ್ಖಾನೆಯಲ್ಲಿ ಸೋರಿಕೆ: ಚೀನಾದ ಹಲವು ನಾಗರಿಕರಲ್ಲಿ ಬ್ಯಾಕ್ಟೀರಿಯಾ ಸೋಂಕು

     ಬೀಜಿಂಗ್: ಕಳೆದ ವರ್ಷ ಬಯೊಫಾರ್ಮಕ್ಯುಟಿಕಲ್ ಕಂಪೆನಿಯಲ್ಲಿ ಉಂಟಾದ ಸೋರಿಕೆಯಿಂದ ಈಶಾನ್ಯ ಚೀನಾದ ಹಲವರಲ್ಲಿ ಬ್ಯಾಕ್ಟೀರಿಯಾ ರೋಗ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

     ಚೀನಾದ ಗುನ್ಸು ಪ್ರಾಂತ್ಯದ ಲ್ಯಾಂಜೊ ಆರೋಗ್ಯ ವಕ್ತಾರ, ಬ್ರೂಸೆಲೋಸಿಸ್ ಎಂಬ ಬ್ಯಾಕ್ಟೀರಿಯಾ ಕಾಯಿಲೆಗೆ 3 ಸಾವಿರದ 245 ಮಂದಿ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ. ಬ್ರುಲೆಲ್ಲಾ ಬ್ಯಾಕ್ಟೀರಿಯಾಕ್ಕೆ ತುತ್ತಾದವರಲ್ಲಿ ಇದು ಕಂಡುಬಂದಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

      ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ಝೊಂಗ್ಮ್ ಲ್ಯಾಂಜೊ ಜೈವಿಕ ಫಾರ್ಮಕ್ಯುಟಿಕಲ್ ಫ್ಯಾಕ್ಟರಿಯಿಂದ ಬ್ಯಾಕ್ಟೀರಿಯಾ ಸೋರಿಕೆಯಾಗಿತ್ತು ಎಂದು ನಗರ ಆರೋಗ್ಯ ವಕ್ತಾರರು ತಿಳಿಸಿದ್ದಾರೆ.

     ಮತ್ತೆ 11,401 ಮಂದಿಯಲ್ಲಿ ಈ ಕಾಯಿಲೆ ಕಂಡುಬಂದಿದ್ದು ಆದರೆ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಒಟ್ಟಾರೆ ಈ ನಗರದ 2.9 ದಶಲಕ್ಷ ಜನಸಂಖ್ಯೆಯಲ್ಲಿ 21 ಸಾವಿರದ 847 ಮಂದಿಗೆ ಸೋಂಕು ತಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ಮಾಲ್ಟಾ ಜ್ವರ ಅಥವಾ ಮೆಡಿಟರೇನಿಯನ್ ಜ್ವರ ಎಂದು ಕರೆಯಲ್ಪಡುವ ಈ ರೋಗವು ತಲೆನೋವು, ಸ್ನಾಯು ನೋವು, ಜ್ವರ ಮತ್ತು ಆಯಾಸ ಸೇರಿದಂತೆ ಹಲವು ರೋಗಲಕ್ಷಣಗಳನ್ನು ಉಂಟುಮಾಡಬಹುದು.ಇವುಗಳಲ್ಲಿ ಕೆಲವು ಒಮ್ಮೆ ಬಂದರೆ ದೇಹದಿಂದ ಸಂಪೂರ್ಣವಾಗಿ ಹೋಗುವುದಿಲ್ಲ, ಪದೇ ಪದೇ ಮರುಕಳಿಸುತ್ತಿರುತ್ತದೆ ಎಂದು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್(ಸಿಡಿಸಿ) ಹೇಳಿದೆ.

     ಈ ಬ್ಯಾಕ್ಟೀರಿಯಾ ಸಾಂಕ್ರಾಮಿಕ ಮನುಷ್ಯರಿಂದ ಮನುಷ್ಯರಿಗೆ ಹರಡುವುದು ವಿರಳ. ಬದಲಾಗಿ, ಹೆಚ್ಚಿನ ಜನರು ಕಲುಷಿತ ಆಹಾರವನ್ನು ತಿನ್ನುವುದರ ಮೂಲಕ ಅಥವಾ ಬ್ಯಾಕ್ಟೀರಿಯಾವನ್ನು ಉಸಿರಾಡುವ ಮೂಲಕ ಸೋಂಕಿಗೆ ಒಳಗಾಗುತ್ತಾರೆ ಎಂದು ಸಿಡಿಸಿ ಹೇಳುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries