ಅಬುದಾಬಿ: ಅಬುದಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ 13 ನೇ ಆವೃತ್ತಿಯ 11 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 15 ರನ್ ಗಳ ಅಮೋಘ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು.
ಹೈದರಾಬಾದ್ ಪರ ಜೋನಿ ಬೇರ್ಸ್ಟ್(53), ಡೇವಿಡ್ ವಾರ್ನರ್(45), ಕೇನ್ ವಿಲ್ಲಿಯಮ್ಸನ್ (41) ಉತ್ತಮ ಪ್ರದರ್ಶನ ನೀಡಿದ್ದರು.
ಗೆಲುವಿಗಾಗಿ 163 ರನ್ ಕಲೆಹಾಕಬೇಕಿದ್ದ ಡೆಲ್ಲಿ ಪರ ಶಿಖರ್ ಧವನ್ (34), ರಿಷಬ್ ಪಂತ್ (28), ಹೆಟ್ಮೈರ್ (21) ರನ್ ಗಳಿಸಿದ್ದೂ ನಿಗದಿತ ಇಪ್ಪತ್ತು ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಹೈದರಾಬಾದ್ ಪರ ರಶೀದ್ ಕಾನ್ 3, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು. ಡೆಲ್ಲಿ ಪರ ಕಗಿಸೊ ರಬಾಡಾ ಹಾಗೂ ಮಿತ್ ಮಿಶ್ರಾ ತಲಾ 2 ವಿಕೆಟ್ ಪಡೆದರು.