HEALTH TIPS

2020ನೇ ಸಾಲಿನ ವಿಶ್ವದ ಯುವ ನಾಯಕರು: ಭಾರತದ ಉದಿತ್ ಸಿಂಘಲ್ ರನ್ನು ಗುರುತಿಸಿದ ವಿಶ್ವಸಂಸ್ಥೆ

        ಯುನೈಟೆಡ್ ನೇಷನ್ಸ್: ಸ್ಥಿರ ಅಭಿವೃದ್ಧಿ ಗುರಿಯ(ಎಸ್ ಡಿಜಿ) ವಿಚಾರದಲ್ಲಿ ವಿಶ್ವದಲ್ಲಿ ಅತ್ಯಂತ ಭರವಸೆಯ ಯುವ ನಾಯಕರ ಸಾಲಿನಲ್ಲಿ ವಿಶ್ವಸಂಸ್ಥೆ 2020ನೇ ಸಾಲಿಗೆ ಭಾರತದ 18 ವರ್ಷದ ಯುವಕ ಉದಿತ್ ಸಿಂಘಲ್ ಅವರ ಹೆಸರನ್ನು ಸೂಚಿಸಿದೆ.

      2020ನೇ ಸಾಲಿನ ವಿಶ್ವದ 17 ಯುವ ನಾಯಕರ ಸಾಲಿನಲ್ಲಿ ಉದಿತ್ ಸಿಂಘಲ್ ಕೂಡ ಒಬ್ಬರಾಗಿದ್ದಾರೆ. ಉದಿತ್ ಅವರು ಗ್ಲಾಸ್ 2ಎಸ್ ಮತ್ತು ಶೂನ್ಯ ತ್ಯಾಜ್ಯ ಪರಿಸರ ವ್ಯವಸ್ಥೆಯ ಸ್ಥಾಪಕರಾಗಿದ್ದಾರೆ. ದೆಹಲಿಯಲ್ಲಿ ಗಾಜಿನ ತ್ಯಾಜ್ಯಗಳಿಂದ ಉಂಟಾಗುತ್ತಿರುವ ಆಪತ್ತುಗಳ ಬಗ್ಗೆ ಉದಿತ್ ಪ್ರಯೋಗ, ಪ್ರಾಜೆಕ್ಟ್ ಗಳನ್ನು ಮಾಡಿ ಗಮನ ಸೆಳೆದಿದ್ದಾರೆ. 

     ಖಾಲಿ ಗಾಜಿನ ಬಾಟಲಿಗಳನ್ನು ಭೂಮಿಗೆ ಎಸೆಯದಂತೆ ತಡೆಯಬೇಕೆಂದು ಅವರು ಹೇಳುತ್ತಾರೆ. ಗಾಜಿನ ಬಾಟಲಿಗಳು ಭೂಮಿಯಲ್ಲಿ ಒಂದು ದಶಲಕ್ಷ ವರ್ಷಗಳವರೆಗೆ ಕೊಳೆಯುವುದಿಲ್ಲ. ಇದನ್ನು ಅಮೂಲ್ಯವಾದ ಮರಳಿನಲ್ಲಿ ಪುಡಿಮಾಡಲ್ಪಡುತ್ತವೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಯುವಜನ ಪ್ರಧಾನ ಕಾರ್ಯದರ್ಶಿ ಕಚೇರಿ ನಿನ್ನೆ ಹೇಳಿಕೆಯಲ್ಲಿ ತಿಳಿಸಿದೆ .


    ಎಸ್‌ಡಿಜಿಗಳಿಗೆ ಯುವ ನಾಯಕನಾಗಿ, ನಾನು ಬದಲಾವಣೆಯ ಸಕ್ರಿಯ ಪ್ರತಿನಿಧಿಯಾಗುತ್ತೇನೆ. ಸುಸ್ಥಿರ ವಾಸಸ್ಥಳಗಳನ್ನು ಸೃಷ್ಟಿಸಲು ಸಮುದಾಯಗಳಲ್ಲಿ ಉತ್ತಮ ನಾಗರಿಕ ಪ್ರಜ್ಞೆಯನ್ನು ಮೂಡಿಸಲು ನನಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಭಾವಿಸುತ್ತೇನೆ ಎಂದು ಉದಿತ್ ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries