ಅಬುದಾಬಿ: ಕೋವಿಡ್ -19 ಆತಂಕದ ನಡುವೆಯೂ ಇಲ್ಲಿನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಐಪಿಎಲ್ 2020 ಟೂರ್ನಿ ಭರ್ಜರಿಯಾಗಿ ಆರಂಭವಾಗಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಉದ್ಘಾಟನಾ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ ಇಂತಿದೆ: ರೋಹಿತ್ ಶರ್ಮಾ ( ನಾಯಕ ) ಕ್ವಿಂಟನ್ ಡಿ ಕಾಕ್ ( ವಿಕೆಟ್ ಕೀಪರ್) ಸೂರ್ಯ ಕುಮಾರ್ ಯಾದವ್, ಸೌರಬ್ ತಿವಾರಿ, ಕೃಣಾಲ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕಿರೋನ್ ಪೋಲಾರ್ಡ್, ಜೆಮ್ಸ್ ಪ್ಯಾಟಿನ್ ಸನ್, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ. ಇದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂತಿದೆ.ಎಂ.ಎಸ್. ಧೋನಿ, ಮುರಳಿ ವಿಜಯ್, ಶೇನ್ ವಾಟ್ಸನ್, ಪಾಪ್ ಡು ಪ್ಲೆಸಿಸ್, ಅಂಬಟಿ ರಾಯುಡು, ಕೇದಾರ್ ಜಾದವ್, ರವೀಂದ್ರ ಜಡೇಜಾ, ಸ್ಯಾಮ್ ಕುರಾನ್, ದೀಪಕ್ ಚಾಹರ್, ಪಿಯೂಷ್ ಚಾವ್ಲಾ ಮತ್ತು ಲುಂಗಿ ನಿಗಿಡಿ ಇದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪೀತ್ ಬೂಮ್ರಾ ಕಳೆದ ಮೂರು ಆವೃತ್ತಿಗಳಲ್ಲಿ 57 ವಿಕೆಟ್ ಪಡೆಯುವ ಮೂಲಕ ಪರಿಣಾಮಕಾರಿ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಏಳು ಅರ್ಧ ಶತಕಗಳನ್ನು ಗಳಿಸಿರುವ ರೋಹಿತ್ ಶರ್ಮಾ ಅವರು ಈ ಐಪಿಎಲ್ ನಲ್ಲಿ ಮತ್ತಷ್ಟು ದಾಖಲೆಗಳನ್ನು ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.