ನವದೆಹಲಿ: ಕೊರೋನಾ ಮಹಾಮಾರಿ ನಡುವೆ ಯುಎಇಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ನಡೆಯುತ್ತಿದ್ದು, ಐಪಿಎಲ್ ಆರಂಭಿಕ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ವೀಕ್ಷಕತ್ವದಲ್ಲಿ ಹೊಸ ದಾಖಲೆ ಬರೆದಿದೆ.
ಸೆಪ್ಟೆಂಬರ್ 19ರಂದು ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಆರಂಭಿಕ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಚೆನ್ನೈ ತಂಡ ಗೆದ್ದು ಬೀಗಿತ್ತು. ಈ ಪಂದ್ಯವನ್ನು ಬರೋಬ್ಬರಿ 20 ಕೋಟಿ ಜನರು ವೀಕ್ಷಿಸಿದ್ದಾರೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡಿದ್ದು ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ)ಯ ಪ್ರಕಾರ, ಅಭೂತಪೂರ್ವ 20 ಕೋಟಿ ಜನರು ಪಂದ್ಯವನ್ನು ವೀಕ್ಷಿಸಲು ಟ್ಯೂನ್ ಮಾಡಿದ್ದಾರೆ. ಯಾವುದೇ ದೇಶದ ಯಾವುದೇ ಕ್ರೀಡಾ ಲೀಗ್ ನಲ್ಲಿ ಇದು ಆರಂಭಿಕ ದಿನದ ವೀಕ್ಷಣೆಯಲ್ಲಿ ದಾಖಲಾಗಿರುವುದರಲ್ಲಿ ಇದೇ ಹೆಚ್ಚು ಟ್ವೀಟ್ ಮಾಡಿದ್ದಾರೆ.
ಈ ಪಂದ್ಯ ಗೆಲ್ಲುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಒಟ್ಟಾರೆ 100 ಪಂದ್ಯಗಳ ಗೆದ್ದ ದಾಖಲೆಗೆ ಎಂಎಸ್ ಧೋನಿ ಭಾಜನರಾಗಿದ್ದಾರೆ.