ದುಬೈ: ದುಬೈನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ತಂಡವನ್ನು ಸೂಪರ್ ಓವರ್ ನಲ್ಲಿ ಮಣಿಸಿದೆ.
ಆರ್‌ಸಿಬಿ ನೀಡಿದ್ದ 202 ರನ್ಗಳ ಗುರಿ ಬೆನ್ನತ್ತಿದ ಮುಂಬೈ 201 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.ಆ ನಂತರ ಸೂಪರ್ ಓವರ್ ನಲ್ಲಿ ಬೆಂಗಳೂರಿಗೆ 8 ರನ್ ಗುರಿ ನೀಡಿತ್ತು.
ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ(5*) ಹಾಗೂ ಎಬಿ ಡಿ ವಿಲಿಯರ್ಸ್(6*) ರನ್ ಗಳಿಸಿ ತಂಡಕ್ಕೆ ಜಯ ದೊರಕಿಸಿದ್ದಾರೆ.
ಈ ಮುನ್ನ ಮುಂಬೈನ ಇಶನ್ ಕಿಶನ್(99) ಹಾಗೂ ಕಿರನ್ ಪೋಲಾರ್ಡ್(60) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವು 5 ವಿಕೆಯ್ ಗೆ 201 ರನ್ ಕಲೆಹಾಕುವಂತೆ ಮಾಡಿದ್ದರು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಬೆಂಗಳೂರು ದೇವದತ್ ಪಡಿಕ್ಕಲ್, ಅರಮ್ ಪಿಂಚ್, ಎಬಿ ಡಿ ವಿಲಿಯರ್ಸ್ ಮತ್ತು ಶಿವಬ್ ದುಬೆ ಅವರ ನೆರವೆನಿಂದ20 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.
ಮುಂಬೈ ಪರ ಟ್ರೆಂಟ್ ಬೌಲ್ಟ್ ಎರಡು ವಿಕೆಟ್ ಪಡೆದು ಮಿಂಚಿದ್ದರೆ ಬೆಂಗಳೂರು ಪರ ಇಸುರು ಉದಾನ ಎರಡು ವಿಕೆಟ್ ಕಬಳಿಸಿದ್ದರು.