HEALTH TIPS

2021ರ ಆರಂಭದಲ್ಲಿ ಕೊರೊನಾ ಲಸಿಕೆ ಬರುವ ನಿರೀಕ್ಷೆಯಿದೆ: ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್

     ನವದೆಹಲಿ: ಕೊರೋನಾ ವೈರಸ್ ಇಡೀ ವಿಶ್ವವನ್ನೇ ನಡುಗಿ ಹೋಗುವಂತೆ ಮಾಡಿದ್ದು, ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿದೆ. ಭಾರತದಲ್ಲಿ ಪ್ರತೀನಿತ್ಯ ಸರಾಸರಿ 90 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ ಲಸಿಕೆ ಕಂಡು ಹಿಡಿಯಲು ಸಂಶೋಧನೆಗಳೂ ಕೂಡ ತೀವ್ರಗೊಂಡಿದ್ದು, ಬಹುತೇಕ ರಾಷ್ಟ್ರಗಳು ಸತತ ಯತ್ನಗಳನ್ನು ನಡೆಸುತ್ತಿದ್ದು, ಇದೇ ವೇಳೆ ಭಾರತದಲ್ಲಿ ಲಸಿಕೆ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಸುಳಿವು ನೀಡಿದೆ. 

      ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ 51 ಲಕ್ಷ ಗಡಿದಾಟಿದ್ದುಸ ಸಾವಿನ ಸಂಖ್ಯೆ ಕೂಡ 83 ಸಾವಿರ ಗಡಿ ದಾಟಿದೆ. ಕೊರೋನಾ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನತೆ ಇದೀಗ ಲಸಿಕೆಗಾಗಿ ಎದುರು ನೋಡುತ್ತಿದ್ದಾರೆ. 

       ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ರಾಜ್ಯಸಭೆಯಲ್ಲಿ ದೇಶದ ಕೊರೋನಾ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. 

       ಲಸಿಕೆ ಕಂಡು ಹಿಡಿಯಲು ಇತರೆ ರಾಷ್ಟ್ರಗಳಂತೆ ಭಾರತ ಕೂಡ ಸತತ ಪ್ರಯತ್ನಗಳನ್ನು ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ತಜ್ಞರ ತಂಡ ಸಂಶೋಧನೆ ನಡೆಸುತ್ತಿದೆ. ನಮ್ಮಲ್ಲಿ ಸುಧಾರಿತ ಯೋಜನೆಗಳಿದ್ದು, ಮುಂದಿನ ವರ್ಷದ ಆರಂಬದ ವೇಳೆಗೆ ಭಾರತದಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries