HEALTH TIPS

ಕಾಸರಗೋಡು : 236 ಮಂದಿಗೆ ಸೋಂಕು ದೃಢ

 

        ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 236 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 72 ಮಂದಿ ಗುಣಮುಖರಾಗಿದ್ದಾರೆ. 225 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 6 ಮಂದಿ ವಿದೇಶದಿಂದ, 5 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

     ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಗಣನೆ :

    ಕಾಸರಗೋಡು ನಗರಸಭೆ-28, ಕುಂಬಳೆ ಪಂಚಾಯತ್-4, ಮೊಗ್ರಾಲ್ ಪುತ್ತೂರು-5, ಮಧೂರು-4, ಮಂಗಲ್ಪಾಡಿ-4, ಚೆಮ್ನಾಡ್-21, ಚೆಂಗಳ-3, ದೇಲಂಪಾಡಿ-10, ಕುತ್ತಿಕೋಲು-2, ಮುಳಿಯಾರು-39, ಬದಿಯಡ್ಕ-3, ಮೀಂಜ-1, ಪೈವಳಿಕೆ-1, ಪುತ್ತಿಗೆ-2, ಕಾಂಞಂಗಾಡ್ ನಗರಸಭೆ-13, ಪಿಲಿಕೋಡ್-6, ಉದುಮ-17, ಪಳ್ಳಿಕ್ಕರೆ-14, ಅಜಾನೂರು-10, ಬಳಾಲ್-3, ಮಡಿಕೈ-1, ಪಡನ್ನ-2, ಕಳ್ಳಾರ್-15, ನೀಲೇಶ್ವರ ನಗರಸಭೆ-4, ಕಯ್ಯೂರು-ಚೀಮೇನಿ-7, ಕೋಡೋಂ-ಬೇಳೂರು-4, ಪುಲ್ಲೂರು-ಪೆರಿಯ-1, ವೆಸ್ಟ್ ಏಳೇರಿ-1, ಈಸ್ಟ್ ಏಳೇರಿ-2, ಚೆರುವತ್ತೂರು-6, ಕಿನಾನೂರು-ಕರಿಂದಳಂ-1, ಪನತ್ತಡಿ-1, ಕಡನ್ನಪಳ್ಳಿ-1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 

6058 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ 6058 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 5147 ಮಂದಿ ಮನೆಗಳಲ್ಲಿ, 911 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 269 ಮಂದಿ ನಿಗಾ ಪ್ರವೇಶಿಸಿದ್ದಾರೆ. 685 ಮಂದಿ ಶುಕ್ರವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1490 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 973 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5614 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 4636 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 571 ಮಂದಿ ವಿದೇಶದಿಂದ, 411 ಮಂದಿ ಇತರ ರಾಜ್ಯಗಳಿಂದ ಬಂದವರು. 4114 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕೋವಿಡ್ ಸಂಬಂಧ 42 ಮಂದಿ ಸಾವಿಗೀಡಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries