ಕಣ್ಣೂರು: ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರ ವಿರುದ್ದ ತಲಶೇರಿ ಮಾರ್ಜಾನ್ ಜ್ಯುವೆಲ್ಲರಿ ಮಾಲೀಕ ಕೆ.ಕೆ.ಹನೀಫಾ ಎಂಬವರೂ ಆರೋಪಗಳೊಂದಿಗೆ ಮುಂದೆ ಬಂದಿದ್ದು ತನ್ನ ಜುವೆಲ್ಲರಿಯ 25 ಕೆಜಿ ಚಿನ್ನವನ್ನು ಕದ್ದು ಫ್ಯಾಶನ್ ಗೋಲ್ಡ್ ನ್ನು ಪ್ರಾರಂಭಿಸಿದನೆಂದು ಅವರು ಆರೋಪಿಸಿದ್ದಾರೆ. ಸುದ್ದಿ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಹನೀಫಾ ಈ ಆರೋಪಗಳನ್ನು ಮಾಡಿದ್ದಾರೆ.
ಹಾಡುಹಗಲೇ ಕಾಸರಗೋಡಿನಿಂದ ಗೂಂಡಾ ತಂಡಗಳೊಂದಿಗೆ ಆಗಮಿಸಿ ತನ್ನ ಜುವೆಲ್ಲರಿಯಿಂದ ಆಭರಣಗಳನ್ನು ಲಪಟಾಯಿಸಿದ. 2007ರ ಅಕ್ಟೋಬರ್ 26 ರಂದು ಇಂತಹ ವಿದ್ಯಮಾನ ನಡೆಯಿತು. ಇಂದಿನ ಮಾರುಕಟ್ಟೆಯಲ್ಲಿ ಅಂದು ಕದ್ದ ಚಿನ್ನಕ್ಕೆ ಸುಮಾರು 13 ಕೋಟಿ ರೂ. ಮೌಲ್ಯವಾಗಿದೆ ಎಂದು ಹನೀಫಾ ಆರೋಪಿಸಿದ್ದಾರೆ.
ತಾನು ಸಹಿತ ಇತರ ಶೇರುದಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಮರುದ್ದೀನ್ ಸೇರಿದಂತೆ 20 ಜನರ ವಿರುದ್ಧ ತಲಶೇರಿ ಪೆÇಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಇತ್ಯರ್ಥಪಡಿಸಲು ಖಮರುದ್ದೀನ್ 17 00000 ರೂ.ಗೆ ಒಪ್ಪಂದ ಮಾಡಿಕೊಂಡರು. ಆದರೆ ಬಳಿಕ ಖಮರುದ್ದೀನ್ ಚೆಕ್ ನೀಡಿ ಮೋಸ ಮಾಡಿದರು. ದರೋಡೆಯ ಬಳಿಕ ಆರ್ಥಿಕ ಹಿಂಜರಿಕೆ ಉಂಟಾಯಿತು. ಇದರಿಂದ ಮಾರ್ಜನ್ ಜ್ಯುವೆಲ್ಲರಿ ಮುಚ್ಚಲಾಯಿತು. ಚಿನ್ನದ ವ್ಯಾಪಾರವನ್ನೇ ಕೊನೆಗೊಳಿಸಬೇಕಾಯಿತೆಂದು ಹನೀಫಾ ಹೇಳಿದ್ದಾರೆ.