ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 252 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ರೋಗ ಬಾಧಿತರಲ್ಲಿ ಮೂವರು ಇತರ ರಾಜ್ಯಗಳಿಂದ ಹಾಗು ಇಬ್ಬರು ವಿದೇಶದಿಂದ ಬಂದವರು. 247 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 210 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಜಿಲ್ಲಾವಾರು ವಿವರ:
ಈಸ್ಟ್ ಎಳೇರಿ-4, ಉದುಮ-18, ತೃಕ್ಕರಿಪುರ-5, ಚೆಂಗಳ-11, ಮೀಂಜ-1, ಮಧೂರು-11, ಚೆಮ್ನಾಡ್-14, ಮಂಗಲ್ಪಾಡಿ-7, ವೆಸ್ಟ್ ಎಳೇರಿ-5, ಪಳ್ಳಿಕೆರೆ-10, ಅಜಾನೂರು-28, ಚೆರ್ವತ್ತೂರು-2, ಕುಂಬಳೆ-13, ಕಾಸರಗೋಡು-30, ಕುಂಬ್ಡಾಜೆ-1, ಪುಲ್ಲೂರು-10, ಕಾಂಞಂಗಾಡ್-20, ಪಿಲಿಕೋಡು-2, ವಲಿಯಪರಂಬ-11, ಪೈವಳಿಕೆ-5, ಪಡನ್ನ-3, ಕಿನಾನೂರು-7, ಮೊಗ್ರಾಲ್ ಪುತ್ತೂರು-4, ಪುತ್ತಿಗೆ-2, ಕಾರಡ್ಕ-1, ಕೋಡೋಂ ಬೇಳೂರು-3, ಮಂಜೇಶ್ವರ-4, ಕುತ್ತಿಕ್ಕೋಲು-2, ಬೇಡಡ್ಕ-10, ಪನತ್ತಡಿ-1, ಕಳ್ಳಾರ್-1, ದೇಲಂಪಾಡಿ-2, ಮುಳಿಯಾರು-2 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ 4443 ಮಂದಿ ಇದೀಗ ಕ್ವಾರಂಟೈನ್ ನಲ್ಲಿದ್ದಾರೆ. ಇದರಲ್ಲಿ ಮನೆಗಳಲ್ಲಿ 3407 ಮಂದಿ ಮತ್ತು ವಿವಿಧ ಸಂಸ್ಥೆಗಳಲ್ಲಿ 1036 ಮಂದಿ ಇದ್ದಾರೆ. ಹೊಸದಾಗಿ 299 ಮಂದಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1342 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ (ಆರ್‍ಟಿಪಿಸಿಆರ್ 294, ಆಂಟಿಜೆನ್ 1048). 330 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಲು ಬಾಕಿಯಿದೆ. 215 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದು 225 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಎಂಭತ್ತೊಂದು ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 9891 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 699 ಮಂದಿ ವಿದೇಶದಿಂದ ಬಂದವರು, 529 ಮಂದಿ ಇತರ ರಾಜ್ಯಗಳಿಂದ ಬಂದವರು. 8660 ಮಂದಿಗೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. ಇಲ್ಲಿಯವರೆಗೆ, ಕೋವಿಡ್ 7566 ಜನರಿಗೆ ನಕಾರಾತ್ಮಕವಾಗಿದೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 78 ಕ್ಕೆ ಏರಿದೆ. ಪ್ರಸ್ತುತ ಜಿಲ್ಲೆಯಲ್ಲಿ 2247 ಜನರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 1130 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.