HEALTH TIPS

ರಾಜ್ಯದಲ್ಲಿ ತೀವ್ರಗತಿಯ ಕೊರೊನಾ ಏರಿಕೆ-ಕೇರಳದಲ್ಲಿ 2655-ಕಾಸರಗೋಡು : 276 ಮಂದಿಗೆ ಸೋಂಕು ದೃಢ

 

         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ತೀವ್ರ ಕಳವಳಕಾರಿಯಾದ ಕೋವಿಡ್ ವರದಿ ನಿಖರಗೊಳಿಸಿದ ವರದಿಯನ್ನು ಸಂಬಂಧಪಟ್ಟವರು ಪ್ರಕಟಿಸಿದ್ದಾರೆ. ಇಂದು 276 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 83 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಾಗಿ 1651 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 4197 ಮಂದಿ ಗುಣಮುಖರಾಗಿದ್ದಾರೆ. ಇದು ವರೆಗೆ ಜಿಲ್ಲೆಯಲ್ಲಿ 5890 ಮಂದಿಗೆ ರೋಗ ಬಾಧಿಸಿದೆ. 

      ಯುವಕನ ಸಾವು : 22 ರ ಹರೆಯದ ಪಳ್ಳಿಕೆರೆ ಬೇಕಲಕುನ್ ನಿವಾಸಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದರು. ಮೃತರು ರಕ್ತ ಅರ್ಬುದ ರೋಗದಿಂದ ಬಳಲುತ್ತಿದ್ದು, ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

     ಮೃಗಾಸ್ಪತ್ರೆಯ ವೈದ್ಯರಿಗೆ ಕೋವಿಡ್ : ತಾಯಲಂಗಾಡಿಯ ಆನಿಮಲ್ ಬರ್ತ್ ಕಂಟ್ರೋಲ್ ಕೇಂದ್ರದ ಡಾಕ್ಟರ್ ಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಸಿಬ್ಬಂದಿಗಳು ಕ್ವಾರಂಟೈನ್‍ಗೆ ತೆರಳಿದ್ದಾರೆ. ಕೇಂದ್ರವನ್ನು ಮುಚ್ಚಲಾಗಿದೆ. 

       ಕೋವಿಡ್ ಪಾಸಿಟಿವ್ ಆದವರ ಪಂಚಾಯತಿ ಮಟ್ಟದ ವಿವರ:                                                

    ಕಾಸರಗೋಡು ನಗರಸಭೆ 7, ಮಧೂರು ಪಂಚಾಯತ್ 3, ಚೆಂಗಳ ಪಂಚಾಯತ್ 22, ಮುಳಿಯಾರು ಪಂಚಾಯತ್ 25, ಕಾರಡ್ಕ ಪಂಚಾಯತ್ 6, ವರ್ಕಾಡಿ ಪಂಚಾಯತ್ 1, ಬದಿಯಡ್ಕ ಪಂಚಾಯತ್ 3, ಮೀಂಜ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 5, ಎಣ್ಮಕಜೆ ಪಂಚಾಯತ್ 12, ಬೇಡಡ್ಕ ಪಂಚಾಯತ್ 12, ಚೆಮ್ನಾಡ್ ಪಂಚಾಯತ್ 18, ಕುಂಬಳೆ ಪಂಚಾಯತ್ 12, ಕಾಞಂಗಾಡ್ ನಗರಸಭೆ 20, ಉದುಮಾ ಪಂಚಾಯತ್ 2, ಅಜಾನೂರು ಪಂಚಾಯತ್ 13, ಪಿಲಿಕೋಡ್ ಪಂಚಾಯತ್ 8, ಪಡನ್ನ ಪಂಚಾಯತ್ 3, ಮಡಿಕೈ ಪಂಚಾಯತ್ 5, ನೀಲೇಶ್ವರ ನಗರಸಭೆ 13, ಕಿನಾನೂರು-ಕರಿಂದಳಂ ಪಂಚಾಯತ್ 17, ಕಯ್ಯೂರು-ಚೀಮೇನಿ ಪಂಚಾಯತ್ 7, ಪುಲ್ಲೂರು-ಪೆರಿಯ ಪಂಚಾಯತ್ 7, ಬಳಾಲ್ ಪಂಚಾಯತ್ 2, ವಲಿಯಪರಂಬ ಪಂಚಾಯತ್ 9, ತ್ರಿಕರಿಪುರ ಪಂಚಾಯತ್ 15, ಕೋಡೋಂ-ಬೇಳೂರು ಪಂಚಾಯತ್ 2, ಚೆರುವತ್ತೂರು ಪಂಚಾಯತ್ 3, ಈಸ್ಟ್ ಏಳೇರಿ ಪಂಚಾಯತ್ 2, ಆಲಕ್ಕೋಡು ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 

       83 ಮಂದಿಗೆ ಕೋವಿಡ್ ನೆಗೆಟಿವ್:

     ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 83 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

        ನೆಗೆಟಿವ್ ಆದವರ ಪಂಚಾಯತಿ ಮಟ್ಟದ ಗಣನೆ:

    ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 8, ಮಂಗಲ್ಪಾಡಿ ಪಂಚಾಯತ್ 5, ಮುಳಿಯಾರು ಪಂಚಾಯತ್ 1, ಚೆಂಗಳ ಪಂಚಾಯತ್ 6, ಕಾರಡ್ಕ ಪಂಚಾಯತ್ 5, ಪುತ್ತಿಗೆ ಪಂಚಾಯತ್ 1, ಮಂಜೇಶ್ವರ 1,ಕಾಞಂಗಾಡ್ ನಗರಸಭೆ 4, ಪಳ್ಳಿಕ್ಕರೆ ಪಂಚಾಯತ್ 4, ಅಜಾನೂರು ಪಂಚಾಯತ್ 8, ಪಿಲಿಕೋಡ್ ಪಂಚಾಯತ್ 4, ಪಡನ್ನ ಪಂಚಾಯತ್ 4, ಮಡಿಕೈ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 1, ವಲಿಯಪರಂಬ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯತ್ 4, ಕಯ್ಯೂರು-ಚೀಮೇನಿ ಪಂಚಾಯತ್ 4, ಕೋಡೋಂ-ಬೇಳೂರು ಪಂಚಾಯತ್ 2 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.  


5981 ಮಂದಿ ನಿಗಾದಲ್ಲಿ 

      ಕಾಸರಗೋಡು ಜಿಲ್ಲೆಯಲ್ಲಿ 5981 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 

        ಮನೆಗಳಲ್ಲಿ 4951 ಮಂದಿ, 1030 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 279 ಮಂದಿ ನಿಗಾ ಪ್ರವೇಶಿಸಿದ್ದಾರೆ. 356 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

       ನೂತನವಾಗಿ 1305 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 659 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1651 ಮಂದಿಗೆ ಕೋವಿಡ್ ಪಾಸಿಟಿವ್ ಸೋಂಕು 

ಕಾಸರಗೋಡು, ಸೆ.5:ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1651 ಮಂದಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

        4197 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 42 ಮಂದಿ ಕೋವಿಡ್ ಸಂಬಂಧ ಮೃತಪಟ್ಟಿದ್ದಾರೆ.


                 ಕೇರಳದಲ್ಲಿ 2655 ಮಂದಿಗೆ ಸೋಂಕು :

    ಕೇರಳ ರಾಜ್ಯದಲ್ಲಿ ಶನಿವಾರ 2655 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 11 ಮಂದಿ ಕೊರೊನಾ ವೈರಸ್‍ನಿಂದ ಸಾವಿಗೀಡಾಗಿರುವುದಾಗಿ ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. 2111 ಮಂದಿ ಗುಣಮುಖರಾಗಿದ್ದಾರೆ. 2433 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 61 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.

     ರೋಗ ಬಾಧಿತರು : ತಿರುವನಂತಪುರ-590, ಕೊಲ್ಲಂ-170, ಪತ್ತನಂತಿಟ್ಟ-148, ಆಲಪ್ಪುಳ-131, ಇಡುಕ್ಕಿ-31, ಕೋಟ್ಟಯಂ-119, ಎರ್ನಾಕುಳಂ-186, ತೃಶ್ಶೂರು-169, ಪಾಲ್ಘಾಟ್-100, ಮಲಪ್ಪುರಂ-249, ಕಲ್ಲಿಕೋಟೆ-244, ವಯನಾಡು-20, ಕಣ್ಣೂರು-222, ಕಾಸರಗೋಡು-276 ಎಂಬಂತೆ ರೋಗ ಬಾಧಿಸಿದೆ. 

        ರೋಗ ಮುಕ್ತ : ತಿರುವನಂತಪುರ-512, ಕೊಲ್ಲಂ-134, ಆಲಪ್ಪುಳ-32, ಪತ್ತನಂತಿಟ್ಟ-140, ಇಡುಕ್ಕಿ-60, ಕೋಟ್ಟಯಂ-121, ಎರ್ನಾಕುಳಂ-128, ತೃಶ್ಶೂರು-110, ಪಾಲ್ಘಾಟ್-112, ಮಲಪ್ಪುರಂ-338, ಕಲ್ಲಿಕೋಟೆ-193, ವಯನಾಡು-29, ಕಣ್ಣೂರು-124, ಕಾಸರಗೋಡು-78 ಎಂಬಂತೆ ಗುಣಮುಖರಾಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries