ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 270 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 141 ಮಂದಿ ಗುಣಮುಖರಾಗಿದ್ದಾರೆ. 242 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆಯೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
6214 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ 6214 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 4937 ಮಂದಿ, ಸಾಂಸ್ಥಿಕವಾಗಿ 1347 ಮಂದಿ ನಿಗಾದಲ್ಲಿರುವರು. 245 ಮಂದಿ ನೂತನವಾಗಿ ನಿಗಾ ಪ್ರವೇಶಿಸಿದ್ದಾರೆ. 540 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1059 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 430 ಮಂದಿತ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6678 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 5609 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 617 ಮಂದಿ ವಿದೇಶದಿಂದ, 452 ಮಂದಿ ಇತರ ರಾಜ್ಯಗಳಿಂದ ಬಂದವರು. 4642 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 46 ಮಂದಿ ಕೋವಿಡ್ ಸಂಬಂಧ ಸಾವಿಗೀಡಾಗಿದ್ದಾರೆ.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 16, ಮಧೂರು ಪಂಚಾಯತ್ 13, ಚೆಂಗಳ ಪಂಚಾಯತ್ 8, ಕುಂಬಳೆ ಪಂಚಾಯತ್ 9, ಮಂಜೇಶ್ವರ ಪಂಚಾಯತ್ 9, ಮುಳಿಯಾರು ಪಂಚಾಯತ್ 3, ದೇಲಂಪಾಡಿ ಪಂಚಾಯತ್ 4, ಮೀಂಜ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 6, ಪೈವಳಿಕೆ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 6, ಎಣ್ಮಕಜೆ ಪಂಚಾಯತ್ 3, ಬದಿಯಡ್ಕ ಪಂಚಾಯತ್ 8, ಬೇಡಡ್ಕ ಪಂಚಾಯತ್ 6, ಕಾಞಂಗಾಡ್ ನಗರಸಭೆ 21, ಅಜಾನೂರು ಪಂಚಾಯತ್ 17, ಪಿಲಿಕೋಡ್ ಪಂಚಾಯತ್ 2, ಪಡನ್ನ ಪಂಚಾಯತ್ 3, ಕಳ್ಳಾರ್ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 19, ಉದುಮಾ ಪಂಚಾಯತ್ 24, ನೀಲೇಶ್ವರ ನಗರಸಭೆ 10, ಈಸ್ಟ್ ಏಳೇರಿ ಪಂಚಾಯತ್ 14, ವೆಸ್ಟ್ ಏಳೇರಿ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 12, ಚೆರುವತ್ತೂರು ಪಂಚಾಯತ್ 8, ಕೋಡೋಂ-ಬೇಳೂರು ಪಂಚಾಯತ್ 7, ಪುಲ್ಲೂರು-ಪೆರಿಯ ಪಂಚಾಯತ್ 7, ಕಿನಾನೂರು-ಕರಿಂದಳಂ ಪಂಚಾಯತ್ 3 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಕೋವಿಡ್ ಆದೇಶ ಉಲ್ಲಂಘನೆ: ಒಟ್ಟು 7168 ಮಂದಿಯ ಬಂಧನ : ಕೋವಿಡ್ 19 ಆದೇಶ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 7168 ಮಂದಿಯ ಬಂಧಿಸಲಾಗಿದೆ. ವಿವಿಧ ಪೆÇಲೀಸ್ ಠಾಣೆಗಳಲ್ಲಿ 5033 ಕೇಸುಗಳು ದಾಖಲಾಗಿವೆ. 1335 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 30628 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 30268 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
144 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 144 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 12, ಮಧೂರು 5, ಕಾರಡ್ಕ ಪಂಚಾಯತ್ 3, ಕುಂಬಳೆ ಪಂಚಾಯತ್ 7, ಪುತ್ತಿಗೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 15, ಬೇಡಡ್ಕ ಪಂಚಾಯತ್ 5, ಕುತ್ತಿಕೋಲು ಪಂಚಾಯತ್ 1, ದೇಲಂಪಾಡಿ ಪಂಚಾಯತ್ 1, ಬದಿಯಡ್ಕ ಪಂಚಾಯತ್ 1, ಪೈವಳಿಕೆ ಪಂಚಾಯತ್ 3, ಚೆಂಗಳ ಪಂಚಾಯತ್ 3, ಕಾಞಂಗಾಡ್ ನಗರಸಭೆ 17, ಮಡಿಕೈ ಪಂಚಾಯತ್ 2, ಪಿಲಿಕೋಡ್ ಪಂಚಾಯತ್ 2, ಕಳ್ಳಾರ್ ಪಂಚಾಯತ್ 3, ಅಜಾನೂರು ಪಂಚಾಯತ್ 14, ಉದುಮಾ ಪಂಚಾಯತ್ 7, ಪಳ್ಳಿಕ್ಕರೆ ಪಂಚಾಯತ್ 6, ನೀಲೇಶ್ವರ ನಗರಸಭೆ 16, ಕಯ್ಯೂರು-ಚೀಮೇನಿ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 2, ಕೋಡೋಂ-ಬೇಳೂರು ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
6214 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 6214 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 4937 ಮಂದಿ, ಸಾಂಸ್ಥಿಕವಾಗಿ 1347 ಮಂದಿ ನಿಗಾದಲ್ಲಿರುವರು. 245 ಮಂದಿ ನೂತನವಾಗಿ ನಿಗಾ ಪ್ರವೇಶಿಸಿದ್ದಾರೆ. 540 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 1059 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 430 ಮಂದಿತ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6678 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಸೆ.9: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6678 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 5609 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 617 ಮಂದಿ ವಿದೇಶದಿಂದ, 452 ಮಂದಿ ಇತರ ರಾಜ್ಯಗಳಿಂದ ಬಂದವರು. 4642 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 46 ಮಂದಿ ಕೋವಿಡ್ ಸಂಬಂಧ ಮೃತಪಟ್ಟಿದ್ದಾರೆ.