ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುವ ತಾಲೂಕು ಮಟ್ಟದ ಅದಾಲತ್ ಗಳ ಅಂಗವಾಗಿ ಮಂಜೇಶ್ವರ ತಾಲೂಕು ಮಟ್ಟದ ಅದಾಲತ್ ಅ.5ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಈ ಸಂಬಂಧ ದೂರುಗಳಿದ್ದರೆ ಸೆ.28ರಂದು ರಾತ್ರಿ 12 ಗಂಟೆ ವರೆಗೆ ಸಲ್ಲಿಸಬಹುದು. ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಸ್ಥಳೀಯಾಡಳಿತ-ಆರೋಗ್ಯ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಲ್ಲಿಸಬಹುದು. ಸಿ.ಎಂ.ಡಿ.ಆರ್.ಎಫ್ ಚಿಕಿತ್ಸಾ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳು, ಎಲ್.ಎಂ.ಆರ್. ಕೇಸುಗಳು, ಸ್ಟಾಟಿಯೂಟರಿ ರೂಪದಲ್ಲಿ ಲಭಿಸಬೇಕಾದ ಪರಿಹಾರ, ಭೂಹಕ್ಕು ಪತ್ರ ಸಂಬಂಧ ದೂರುಗಳನ್ನು ಪರಿಶೀಲಿಸುವುದಿಲ್ಲ.ತಿತಿತಿ.eಜisಣಡಿiಛಿಣ.ಞeಡಿಚಿಟಚಿ.gov.iಟಿಎಂಬ ವೆಬ್ ಸೈಟ್ ನಲ್ಲಿ ಆನ್ ಲೈನ್ ಆಗಿ, ಅಕ್ಷಯ ಕೇಂದ್ರಗಳ ಮೂಲಕವೂ ದೂರು ಸಲ್ಲಿಸಬಹುದು. ಮಂಜೇಶ್ವರ ತಾಲೂಕು ಕಚೇರಿಗಳಲ್ಲೂ, ಸಂಬಂಧಪಟ್ಟ ಗ್ರಾಮ ಕಚೇರಿಗಳಲ್ಲೂ ನೇರವಾಗಿ ದೂರು ಸಲ್ಲಿಸಬಹುದು. ಆನ್ ಲೈನ್ ಆಗಿ ಸಲ್ಲಿಸುವ ಎಲ್ಲ ದೂರುಗಳನ್ನು ಮಂಜೇಶ್ವರ ತಾಲೂಕು ಕಚೇರಿಗೆ ಸಲ್ಲಿಸಬೇಕು.