ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ 2020 ಚುನಾವಣೆ ಸಂಬಂಧ ಮೀಸಲು ವಾರ್ಡ್ ಗಳ ಆಯ್ಕೆ ಚೀಟಿ ಎತ್ತುವ ಮೂಲಕ ಸೆ.28,29, ಅ.5 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚೀಟಿ ಎತ್ತುವಿಕೆ 28,29ರಂದು, ಬ್ಲೋಕ್, ಜಿಲ್ಲಾ ಗ್ರಾಮ ಪಂಚಾಯಿತಿಗಳ, ಮೀಸಲು ವಿಧಾನಸಭೆ ಕ್ಷೇತ್ರಗಳ ಆಯ್ಕೆ ಅ.5ರಂದು ನಡೆಯಲಿದೆ.
ಸೆಪ್ಟಂಬರ್ 28ರಂದು(ನಾಳೆ) ಬೆಳಗ್ಗೆ 10 ಗಂಟೆಯಿಂದ 10.15 ವರೆಗೆ ಪಳ್ಳಿಕ್ಕರೆ, 10.15-10.30 ಅಜಾನೂರು, 10.30-10.45 ಉದುಮಾ, 10.45-11 ಪುಲ್ಲೂರು-ಪೆರಿಯ, 11-11.15 ಮಡಿಕೈ, 11.30-11.45 ವರ್ಕಾಡಿ, 11.45-12 ಪುತ್ತಿಗೆ, 12-12.15ಮಂಗಲ್ಪಾಡಿ, 12.15-12.30 ಮಂಜೆಶ್ವರ, 12.30-12.45 ಪೈವಳಿಕೆ, 12.45-1 ಎಣ್ಮಕಜೆ, 1-1.15 ಮೀಂಜ, 2-2.15ಕುತ್ತಿಕೋಲು,2.15-2.30 ದೇಲಂಪಾಡಿ, 2.30-2.45 ಮುಳಿಯಾರು, 2.45-3 ಬೆಳ್ಲೂರು, 3-3.15 ಕಾರಡ್ಕ, 3.15-3.30 ಬೇಡಡ್ಕ, 3.30-3.45ಕುಂಬ್ಡಾಜೆ ಪಂಚಾಯಿತಿಗಳ ಚೀಟಿ ಎತ್ತುವಿಕೆನಡೆಯಲಿದೆ.
ಸೆ.29ರಂದು ಬೆಳಗ್ಗೆ 10-10.15 ಪಿಲಿಕೋಡ್, 10.15-10.30 ಕಯ್ಯೂರು-ಚೀಮೇನಿ, 10.30-10.45 ತ್ರಿಕರಿಪುರ,10.45-11 ಚೆರುವತ್ತೂರು, 11-11.15 ಪಡನ್ನ, 11.30-11.45 ವಲಿಯ ಪರಂಬ, 11.45-12 ವೆಸ್ಟ್ ಏಳೇರಿ, 12-12.15 ಬಳಾಲ್,12.15-12.30 ಈಸ್ಟ್ ಏಳೇರಿ, 12.30-12.45 ಕಳ್ಳಾರ್, 12.45-1 ಕೋಡೋಂ-ಬೇಳೂರು, 1-1.15 ಕಿನಾನೂರು-ಕರಿಂದಳಂ,1.15-1.30 ಪನತ್ತಡಿ, 2-2.15 ಮಧೂರು, 2.15-2.30 ಕುಂಬಳೆ, 2.30-2.45 ಚೆಮ್ನಾಡ್, 2.45-3 ಚೆಂಗಳ, 3-3.15 ಬದಿಯಡ್ಕ,3.15-3.30 ಮೊಗ್ರಾಲ್ ಪುತ್ತೂರು ಪಂಚಾಯಿತಿಗಳ ಮೀಸಲಾತಿ ಚೀಟಿ ಎತ್ತುವಿಕೆ ನಡೆಯಲಿದೆ. ಅ.5ರಂದು ಬೆಳಗ್ಗೆ 10ರಿಂದ 10.20 ವರೆಗೆ ಮಂಜೇಶ್ವರ, 10.30-10.50 ಕಾರಡ್ಕ, 11-11.20 ಪರಪ್ಪ,11.30-11.50 ಕಾಸರಗೋಡು, 11.50-12.10 ಕಾಞಂಗಾಡ್, 12.30-12.50 ನೀಲೇಶ್ವರ ಬ್ಲೋಕ್ ಪಂಚಾಯಿತಿಗಳ ಹಾಗೂ ಸಂಜೆ 4ಗಂಟೆಗೆ ಜಿಲ್ಲಾ ಪಂಚಾಯಿತಿಯ ಮೀಸಲು ಕ್ಷೇತ್ರಗಳ ಆಯ್ಕೆಯ ಚೀಟಿ ಎತ್ತುವಿಕೆ ನಡೆಯಲಿದೆ.