ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 300 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 167 ಮಂದಿ ಗುಣಮುಖರಾಗಿದ್ದಾರೆ. 283 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ವಿದೇಶದಿಂದ ಬಂದ 9 ಮಂದಿ ಹಾಗು ಇತರ ರಾಜ್ಯಗಳಿಂದ ಬಂದ 8 ಮಂದಿಗೆ ಸೋಂಕು ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಪಾಸಿಟಿವ್ ಪಂಚಾಯತಿವಾರು ವಿವರ:
ನೀಲೇಶ್ವರ-17, ಪನತ್ತಡಿ-1, ಚೆರ್ವತ್ತೂರು-15, ವಲಿಯಪರಂಬ-6, ಚೆಂಗಳ-6, ಕಾಸರಗೋಡು-18, ತೃಕ್ಕರಿಪುರ-1, ಮುಳಿಯಾರು-5, ಬಳಾಲ್-1, ಕುಂಬಳೆ-14, ಪೈವಳಿಕೆ-1, ಮಧೂರು-12, ಉದುಮ-2, ಕೋಡೋಂ ಬೇಳೂರು-3, ಕುತ್ತಿಕೋಲ್-2, ಅಜಾನೂರು-61, ಕಾಂಞಂಗಾಡ್-39, ಮಡಿಕೈ-4, ಪಳ್ಳಿಕೆರೆ-10, ಪುಲ್ಲೂರು-8, ಬೇಡಡ್ಕ-2, ಕಯ್ಯೂರು-6, ಪಿಲಿಕೋಡು-5, ಮಂಜೇಶ್ವರ-7, ವೆಸ್ಟ್ ಎಳೇರಿ-7. ಮಂಗಲ್ಪಾಡಿ-9, ಎಣ್ಮಕಜೆ-2, ಚೆಮ್ನಾಡ್-16, ಪಡನ್ನ-4, ಬದಿಯಡ್ಕ-5, ಮೊಗ್ರಾಲ್ ಪುತ್ತೂರು-3, ಕಿನಾನೂರು-8 ಎಂಬಂತೆ ರೋಗ ಬಾಧಿಸಿದೆ.
167 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 167 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಪಂಚಾಯತಿವಾರು ಮಾಹಿತಿ:
ಕಾಸರಗೋಡು ನಗರಸಭೆ 7, ಮಧೂರು ಪಂಚಾಯತ್ 13, ಮಂಗಲ್ಪಾಡಿ ಪಂಚಾಯತ್ 13, ಪುತ್ತಿಗೆ ಪಂಚಾಯತ್ 4, ಕಾರಡ್ಕ ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 7, ಚೆಂಗಳ ಪಂಚಾಯತ್ 7, ಕುಂಬಳೆ ಪಂಚಾಯತ್ 3, ಮುಳಿಯಾರು ಪಂಚಾಯತ್ 3, ಬದಿಯಡ್ಕ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 10, ಮೀಂಜ ಪಂಚಾಯತ್ 1, ಪೈವಳಿಕೆ ಪಂಚಾಯತ್ 1, ಬೇಡಡ್ಕ ಪಂಚಾಯತ್ 4, ಮೊಗ್ರಾಲ್ ಪುತ್ತೂರು ಪಂಚಾಯತ್ 3, ಕುತ್ತಿಕೋಲು ಪಂಚಾಯತ್ 1, ಕಾಞಂಗಾಡ್ ನಗರಸಭೆ 17, ಪಿಲಿಕೋಡ್ ಪಂಚಾಯತ್ 4, ಪಡನ್ನ ಪಂಚಾಯತ್ 1, ಬಳಾಲ್ ಪಂಚಾಯತ್ 1, ಉದುಮಾ ಪಂಚಾಯತ್ 13, ಪಳ್ಳಿಕ್ಕರೆ ಪಂಚಾಯತ್ 10, ಅಜಾನೂರು ಪಂಚಾಯತ್ 11, ನೀಲೇಶ್ವರ ನಗರಸಭೆ 4, ಕೋಡೋಂ-ಬೇಳೂರು ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 10, ಪುಲ್ಲೂರು-ಪೆರಿಯ ಪಂಚಾಯತ್ 4, ತ್ರಿಕರಿಪುರ 1, ಚೆರುವತ್ತೂರು ಪಂಚಾಯತ್ 3, ಈಸ್ಟ್ ಏಳೇರಿ ಪಂಚಾಯತ್ 3 ಮಂದಿಗೆ ನೆಗೆಟಿವ್ ಆಗಿದೆ.
3966 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 3966 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 3046, ಸಾಂಸ್ಥಿಕವಾಗಿ 920 ಮಂದಿ ನಿಗಾದಲ್ಲಿರುವರು. ನೂತನವಾಗಿ 245 ಮಂದಿ ನಿಗಾ ಪ್ರವೇಶಿಸಿದ್ದಾರೆ. 245 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 1265 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 317 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 9147 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಸೆ.24: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 9147 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 7952 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ವಿದೇಶಗಳಿಂದ 682 ಮಂದಿ, 513 ಮಂದಿ ಇತರ ರಾಜ್ಯಗಳಿಂದ ಬಂದವರು. 7171 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 1906 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 903 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 70 ಆಗಿದೆ.
ಕೋವಿಡ್ 19 ಆದೇಶ ಉಲ್ಲಂಘನೆ : ಈ ವರೆಗೆ ಒಟ್ಟು 8807 ಮಂದಿಯ ಬಂಧನ
ಕೋವಿಡ್ 19 ಆದೇಶ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8807 ಮಂದಿಯನ್ನು ಬಂಧಿಸಲಾಗಿದೆ. ವಿವಿಧ ಠಾಣೆಗಳಲ್ಲಿ 5957 ಕೇಸುಗಳನ್ನು ದಾಖಲಿಸಲಾಗಿದೆ. 1338 ವಾಹನಗಳನ್ನು ವಶಪಡಿಸಲಾಗಿದೆ.
ಗುರುವಾರ ಕಾಸರಗೋಡು ಜಿಲ್ಲೆಯಲ್ಲಿ 56 ಕೇಸುಗಳನ್ನು ದಾಖಲಿಸಲಾಗಿದೆ. 103 ಮಂದಿಯನ್ನು ಬಂಧಿಸಲಾಗಿದೆ. 2 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 6, ಕಾಸರಗೋಡು 4, ವಿದ್ಯಾನಗರ 2, ಬದಿಯಡ್ಕ 1, ಆದೂರು 2, ಬೇಡಗಂ 1, ಮೇಲ್ಪರಂಬ 3, ಬೇಕಲ 4, ಅಂಬಲತ್ತರ 4, ಹೊಸದುರ್ಗ 4, ನೀಲೇಶ್ವರ 5, ಚಂದೇರ 3, ಚೀಮೇನಿ 3, ವೆಳ್ಳರಿಕುಂಡ್ 4, ಚಿತ್ತಾರಿಕಲ್ 4, ರಾಜಪುರಂ 4 ಕೇಸುಗಳು ದಾಖಲಾಗಿವೆ.
ಮಾಸ್ಕ್ ಧರಿಸದ ಒಟ್ಟು 35680 ಮಂದಿಗೆ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 35680 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಗುರುವಾರ 343 ಮಂದಿ ವಿರುದ್ಧ ಕೇಸು ದಾಖಲಾಗಿದೆ.