ತಿರುವನಂತಪುರ: ರಾಜ್ಯದಲ್ಲಿ ಇಂದು 3139 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. 1855 ಮಂದಿ ಗುಣಮುಖರಾಗಿರುವರು.
ದೇಶದಲ್ಲಿ ಬಾಧಿತರ ಕೋವಿಡ್ ಬಾಧಿತರ ಸಂಖ್ಯೆ 47,54,357 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 94,372 ಜನರಲ್ಲಿ ಸೋಂಕು ಪತ್ತೆಯಾಗಿದೆ. ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ಇಂದು ವರದಿಯಾಗಿ ಹುಬ್ಬೇರುವಂತೆ ಮಾಡಿದೆ. ದೇಶದಲ್ಲಿ 9,73,175 ಸಕ್ರಿಯ ಪ್ರಕರಣಗಳಿವೆ. ಈವರೆಗೆ 37,02,596 ಜನರನ್ನು ಗುಣಪಡಿಸಲಾಗಿದೆ. ದೇಶದಲ್ಲಿ ಕೋವಿಡ್‍ನಿಂದಾಗಿ ಇದುವರೆಗೆ 78,586 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,114 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ 5,62,60,928 ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 25 ರಷ್ಟು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಆಗಿದೆ.
ಕೋವಿಡ್ ಪಾಸಿಟಿವ್ ಜಿಲ್ಲಾವಾರು ವಿವರ:
ತಿರುವನಂತಪುರ ಜಿಲ್ಲೆಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇಂದೂ ದಾಖಲಾಗಿವೆ. ತಿರುವನಂತಪುರ 412, ಮಲಪ್ಪುರಂ 378, ಕೊಲ್ಲಂ 205, ಎರ್ನಾಕುಳಂ 326, ಕೋಝಿಕ್ಕೋಡ್ 399, ಕಣ್ಣೂರು 234, ಕೊಟ್ಟಾಯಂ 196, ಆಲಪ್ಪುಳ 252, ತ್ರಿಶೂರ್ 182, ಪಾಲಕ್ಕಾಡ್ 233, ಕಾಸರಗೋಡು 124, ಪತ್ತನಂತಿಟ್ಟು 102, ವಯನಾಡ್ 56, ಇಡುಕ್ಕಿ 40 ಮಂದಿಗಳಲ್ಲಿ ಕೋವಿಡ್ ದೃಢಪಡಿಸಲಾಗಿದೆ.
14 ಕೋವಿಡ್ ಮರಣ:
ರಾಜ್ಯದಲ್ಲಿ ಇಂದು 14 ಮಂದಿಗಳ ಮರಣವನ್ನು ಕೋವಿಡ್ ಕಾರಣದಿಂದ ಎಂದು ದೃಢಪಡಿಸಲಾಗಿದೆ. ತೃಶೂರ್ ಪಾರಂತರವಳ್ಳಿಯ ತಂಗಚ್ಚನ್(67), ತಿರುವನಂತಪುರದ ಕೃಷ್ಣನ್(69), ಕೊಲ್ಲಂ ನ ಬಾಬು(55), ತಿರುವನಂತಪುರ ತೇಂಗಾಟ್ ನ ಲೀಲಾ(75), ಕೊಲ್ಲಂ ಮುಕುಂದಪುರದ ಓಮನೆ ಅಮಮ್(71), ತಿರುವನಂತಪುರ ಕಕ್ಕಾಮೂಲದ ವೆನ್ನಾಲ್ ನಾಡಾರ್(73), ತಿರುವನಂತಪುರ ವಿತೂರದ ರತ್ನಕುಮಾರ್(66), ತಿರುವನಂತಪುರ ಪಳ್ಳಕಡವಿನ ಗ್ಲೋರಿ(74), ಎರ್ನಾಕುಳಂ ಕೋದಮಂಗಲದ ಒ.ವಿ.ಮೋಹನನ್(68), ತಿರುವನಂತಪುರ ಕಾಂಞÂರಕುಳದ ವಿಲ್ಪ್ರೆಡ್(56), ತಿರುವನಂತಪುರ ಪಾರಶಾಲಾದ ಸುಧಾಕರನ್(62), ತಿರುವನಂತಪುರ ವರ್ಕಲದ ರಾಮಚಂದ್ರನ್(42), ಪಾಲಕ್ಕಾಡ್ ಅಟ್ಟಪ್ಪಾಲದ ಚಾಮಿಯಾರ್(94) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರೆಂದು ಭಾನುವಾರ ಆರೋಗ್ಯ ಇಲಾಖೆ ತಿಳಿಯಪಡಿಸಿದೆ. ರಾಜ್ಯದಲ್ಲಿ ಈ ಮೂಲಕ ಕೋವಿಡ್ ಮರಣದ ಸಂಖ್ಯೆ 439 ಕ್ಕೆ ಏರಿಕೆಯಾಗಿದೆ.
ಇಂದು ಬಾಧಿತರಾದವರಲ್ಲಿ 36 ಮಂದಿ ವಿದೇಶದಿಂದ, 126 ಮಂದಿ ಇತರ ರಾಜ್ಯಗಳಿಂದ ಬಂದವರು. 2921 ಮಂದಿಗೆ ಇಂದು ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಈ ಪೈಕಿ 251 ಮಂದಿಗಳ ಸಂಪರ್ಕಮೂಲ ಪತ್ತೆಯಾಗಿಲ್ಲ. ತಿರುವನಂತಪುರ 395, ಕೋಝಿಕ್ಕೋಡ್ 392, ಮಲಪ್ಪುರಂ 365, ಎರ್ನಾಕುಳಂ 298, ಆಲಪ್ಪುಳ 229, ಪಾಲಕ್ಕಾಡ್ 219. ಕಣ್ಣೂರು 207, ಕೋಟ್ಟಯಂ 191, ಕೊಲ್ಲಂ 188, ತೃಶೂರ್ 172, ಕಾಸರಗೋಡು 121, ಪತ್ತನಂತಿಟ್ಟು 75, ವಯನಾಡ್ 51, ಇಡುಕ್ಕಿ 18 ಎಂಬಂತೆ ಸಂಪರ್ಕ ಮೂಲಕ ಇಂದು ಕೋವಿಡ್ ಬಾಧಿತರಾದವರ ಅಂಕಿಅಂಶಗಳಾಗಿವೆ.
ಇಂದು 56 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಉಂಟಾಗಿದೆ. ತಿರುವನಂತಪುರ 16, ಕಣ್ಣೂರು 13, ತೃಶೂರ್ 7, ಎರ್ನಾಕುಳಂ 6, ಕೊಲ್ಲಂ, ಮಲಪ್ಪುರಂ 5, ಆಲಪ್ಪುಳ 2, ಪಾಲಕ್ಕಾಡ್, ವಯನಾಡ್ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಬಾಧಿಸಿದೆ.
ಸೋಂಕು ಕಂಡುಬಂದ 1855 ಮಂದಿಗಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ. ತಿರುವನಂತಪುರ 291, ಕೊಲ್ಲಂ 140, ಪತ್ತನಂತಿಟ್ಟು 191, ಆಲಪ್ಪುಳ 46, ಕೊಟ್ಟಾಯಂ 125, ಇಡುಕ್ಕಿ 20, ಎರ್ನಾಕುಳಂ 232, ತ್ರಿಶೂರ್ 115, ಪಾಲಕ್ಕಾಡ್ 66, ಮಲಪ್ಪುರಂ 202, ಕೋಝಿಕ್ಕೋಡ್ 128, ವಯನಾಡ್ 33, ಕಣ್ಣೂರು 88 ಮತ್ತು ಕಾಸರಗೋಡು 178 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಇದರೊಂದಿಗೆ 30,072 ಜನರಿಗೆ ಸೋಂಕು ದೃಢಪಡಿಸಲಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 77,703 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. 2,04,489 ಮಂದಿ ರಾಜ್ಯಾದ್ಯಂತ ನಿರೀಕ್ಷಣೆಯಲ್ಲಿದ್ದಾರೆ.2684 ಮಂದಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಳೆದ 24 ಗಂಟೆಗಳಲ್ಲಿ 34,786 ಜೊಲ್ಲು ಸಂಗ್ರಹಗಳನ್ನು ಪರೀಕ್ಷಿಸಲಾಯಿತು. ಈ ವರೆಗೆ 21,32,795 ಮಾದರಿಗಳನ್ನು ಪರಿಶೀಲಿಸಲಾಗಿದೆ.