ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 321 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 163 ಮಂದಿ ಗುಣಮುಖರಾಗಿದ್ದಾರೆ. 299 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ತಲಾ 11 ಮಂದಿಗೆ ವಿದೇಶದಿಂದ ಹಾಗು ಇತರ ರಾಜ್ಯಗಳಿಂದ ಬಂದವರಿಗೆ ರೋಗ ಬಾಧಿಸಿದೆ.
ರೋಗ ಬಾಧಿತರ ಪಂಚಾಯತಿವಾರು ಮಾಹಿತಿ :
ಮಡಿಕೈ-15, ಚೆಂಗಳ-5, ಅಜಾನೂರು-10, ಪುಲ್ಲೂರು-5, ಕಾಸರಗೋಡು-22, ತೃಕ್ಕರಿಪುರ-11, ಮಂಜೇಶ್ವರ-4, ಮಧೂರು-16, ಚೆಮ್ನಾಡ್-21, ಉದುಮ-17, ಕುಂಞÂಮಂಗಲಂ-1, ಚೆರ್ವತ್ತೂರು-20, ಪಿಲಿಕೋಡು-10, ಮೊಗ್ರಾಲ್‍ಪುತ್ತೂರು-11, ಕಿನಾನೂರು-7, ಈಸ್ಟ್ ಎಳೇರಿ-1, ಬಳಾಲ್-1, ಪನತ್ತಡಿ-3, ಪಡನ್ನ-5, ಕಾರಡ್ಕ-1, ಕಳ್ಳಾರ್-1, ವಲಿಯಪರಂಬ-3, ಕೋಡೋಂ ಬೇಳೂರು-6, ಕಯ್ಯೂರು-15, ನೀಲೇಶ್ವರ-36, ಬದಿಯಡ್ಕ-2, ಕಾಂಞಂಗಾಡ್-20, ಪೈವಳಿಕೆ-4, ಮಂಗಲ್ಪಾಡಿ-25, ಬೇಡಡ್ಕ-1, ಮೀಂಜ-4, ಕುಂಬಳೆ-7, ಮುಳಿಯಾರು-3, ಎಂಬಂತೆ ರೋಗ ಬಾಧಿಸಿದೆ.
163 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 163 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಪಂಚಾಯತಿವಾರು ಮಾಹಿತಿ:
ಕಾಸರಗೋಡು ನಗರಸಭೆ 17, ಮಧೂರು ಪಂಚಾಯತ್ 5, ಚೆಂಗಳ ಪಂಚಾಯತ್ 3, ಮಂಜೇಶ್ವರ ಪಂಚಾಯತ್ 2, ಬದಿಯಡ್ಕ ಪಂಚಾಯತ್ 6, ಪೈವಳಿಕೆ ಪಂಚಾಯತ್ 4, ಮೀಂಜ ಪಂಚಾಯತ್ 8, ಬೇಡಡ್ಕ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 2, ಪುತ್ತಿಗೆ ಪಂಚಾಯತ್ 3, ಕುಂಬಳೆ ಪಂಚಾಯತ್ 7, ಚೆಮ್ನಾಡ್ ಪಂಚಾಯತ್ 9, ಕಾಞಂಗಾಡ್ ನಗರಸಭೆ 17, ಅಜಾನೂರು ಪಂಚಾಯತ್ 16, ಪಿಲಿಕೋಡ್ ಪಂಚಾಯತ್ 5, ಪಳ್ಳಿಕ್ಕರೆ ಪಂಚಾಯತ್ 4, ಉದುಮಾ ಪಂಚಾಯತ್ 7, ಪಡನ್ನ ಪಂಚಾಯತ್ 1, ಬಳಾಲ್ ಪಂಚಾಯತ್ 3, ನೀಲೇಶ್ವರ ನಗರಸಭೆ 14, ವಲಿಯಪರಂಬ ಪಂಚಾಯತ್ 3, ಕಯ್ಯೂರು-ಚೀಮೇನಿ ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 4, ವೆಸ್ಟ್ ಏಳೇರಿ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 6, ಪನತ್ತಡಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯತ್ 5, ಈಸ್ಟ್ ಏಳೇರಿ ಪಂಚಾಯತ್ 3 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4412 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 4412 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 3179 ಮಂದಿ, ಸಾಮಸ್ಥಿಕವಾಗಿ 1233 ಮಂದಿ ನಿಗಾದಲ್ಲಿರುವರು. ನೂತನವಾಗಿ 370 ಮಂದಿ ನಿಗಾ ಪ್ರವೇಶಿಸಿದ್ದಾರೆ. 291 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 2810 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 417 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 10787 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಸೆ.30: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 10787 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 9497 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 731 ಮಂದಿ ವಿದೇಶಗಳಿಂದ, 559 ಮಂದಿ ಇತರ ರಾಜ್ಯಗಳಿಂದ ಬಂದವರು. 7940 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 2763 ಮಂದಿ ಈ ವರೆಗೆ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಸ್ವಗೃಹಗಳಲ್ಲಿ 1397 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಚಿಪ್ಪಾರು ನಿವಾಸಿ ಪರಮೇಶ್ವರ ಆಚಾರ್ಯ ಅವರ ಮರಣಕ್ಕೆ ಕೋವಿಡ್ ಕಾರಣ ಎಂದು ದೃಢಪಡಿಸಲಾಗಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 84 ಆಗಿದೆ.