HEALTH TIPS

ಕೇರಳದಲ್ಲಿ 3349 ಮಂದಿಗೆ ಸೋಂಕು -ಕಾಸರಗೋಡು : 140 ಮಂದಿಗೆ ಸೋಂಕು ದೃಢ

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 140 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 138 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ತಲಾ ಒಬ್ಬರಂತೆ ವಿದೇಶದಿಂದ ಹಾಗು ಇತರ ರಾಜ್ಯದಿಂದ ಬಂದವರು. 128 ಮಂದಿ ಗುಣಮುಖರಾಗಿದ್ದಾರೆ. 

      ರೋಗ ಬಾಧಿತರ ಪಂಚಾಯತಿವಾರು ವಿವರ:

    ಚೆಮ್ನಾಡ್-7, ಅಜಾನೂರು-7, ವರ್ಕಾಡಿ-1, ಮಂಗಲ್ಪಾಡಿ-5, ಕುಂಬಳೆ-4, ಕಾಸರಗೋಡು-6, ಮಧೂರು-13, ನೀಲೇಶ್ವರ-9, ಮಂಜೇಶ್ವರ-7, ಕಾಂಞಂಗಾಡ್-13, ಪಿಲಿಕೋಡು-3, ಕಿನಾನೂರು-11, ಪಡನ್ನ-3, ಚೆರ್ವತ್ತೂರು-1, ಮೀಂಜ-2, ಉದುಮ-20, ಈಸ್ಟ್ ಎಳೇರಿ-6, ಪಳ್ಳಿಕೆರೆ-2, ಬದಿಯಡ್ಕ-1, ಚೆಂಗಳ-9, ಮಡಿಕೈ-1, ಕುತ್ತಿಕ್ಕೋಲ್-1, ಬೇಡಡ್ಕ-1, ಕಾರಡ್ಕ-1, ತೃಕ್ಕರಿಪುರ-1, ಕೋಡೋಂ ಬೇಳೂರು-1, ಪೈವಳಿಕೆ-1, ಮೊಗ್ರಾಲ್‍ಪುತ್ತೂರು-1, ಪುತ್ತಿಗೆ-2 ಎಂಬಂತೆ ರೋಗ ಬಾಧಿಸಿದೆ. 

                 128 ಮಂದಿಗೆ ಕೋವಿಡ್ ನೆಗೆಟಿವ್: 

         ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 128 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

    ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ:

    ಕಾಸರಗೋಡು ನಗರಸಭೆ 19, ಮಧೂರು ಪಂಚಾಯತ್ 4, ಕುಂಬಳೆ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 5, ಬದಿಯಡ್ಕ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 2, ಚೆಂಗಳ ಪಂಚಾಯತ್ 3, ಮಂಜೇಶ್ವರ ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಮುಳಿಯಾರು ಪಂಚಾಯತ್ 19, ಬೇಡಡ್ಕ ಪಂಚಾಯತ್ 3, ಕಾಞಂಗಾಡ್ ನಗರಸಭೆ 11, ಮಡಿಕೈ ಪಂಚಾಯತ್ 1, ಉದುಮಾ ಪಂಚಾಯತ್ 7, ಪಿಲಿಕೋಡ್ ಪಂಚಾಯತ್ 2, ಅಜಾನೂರು ಪಂಚಾಯತ್ 7, ಪಳ್ಳಿಕ್ಕರೆ ಪಂಚಾಯತ್ 2, ಕಳ್ಳಾರ್ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 8, ನೀಲೇಶ್ವರ ನಗರಸಭೆ 10, ವಲಿಯ ಪರಂಬ ಪಂಚಾಯತ್ 7, ಪುಲ್ಲೂರು-ಪೆರಿಯ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 4 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.   

           6284 ಮಂದಿ ನಿಗಾದಲ್ಲಿ: 

   ಕಾಸರಗೋಡು ಜಿಲ್ಲೆಯಲ್ಲಿ 6284 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 

      ಮನೆಗಳಲ್ಲಿ 4775 ಮಂದಿ, ಸಾಂಸ್ಥಿಕವಾಗಿ 1393 ಮಂದಿ ನಿಗಾದಲ್ಲಿರುವರು. ನೂತನವಾಗಿ 315 ಮಂದಿ ನಿಗಾ ಪ್ರವೇಶಿಸಿದ್ದಾರೆ. 431 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

       ನೂತನವಾಗಿ 1205 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 102 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6818 ಮಂದಿಗೆ ಕೋವಿಡ್ ಪಾಸಿಟಿವ್ 

ಕಾಸರಗೋಡು, ಸೆ.10: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6818 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

     ಇವರಲ್ಲಿ 5747 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 618 ಮಂದಿ ವಿದೇಶದಿಂದ, 453 ಮಂದಿ ಇತರ ರಾಜ್ಯಗಳಿಂದ ಬಂದವರು. 4770 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 47 ಮಂದಿ ಕೋವಿಡ್ ಸಂಬಂಧ ಮೃತಪಟ್ಟಿದ್ದಾರೆ.


          ಕೇರಳದಲ್ಲಿ 3349 ಮಂದಿಗೆ ಸೋಂಕು : 

   ಕೇರಳ ರಾಜ್ಯದಲ್ಲಿ ಗುರುವಾರ 3349 ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 12 ಮಂದಿ ಸಾವಿಗೀಡಾಗಿರುವುದಾಗಿ ಖಾತರಿಪಡಿಸಲಾಗಿದೆ. ರೋಗ ಬಾಧಿತರಲ್ಲಿ 50 ಮಂದಿ ವಿದೇಶದಿಂದ ಮತ್ತು 165 ಮಂದಿ ಇತರ ರಾಜ್ಯಗಳಿಂದ ಬಂದವರು. 3058 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 1657 ಗುಣಮುಖರಾಗಿದ್ದಾರೆ.

     ರೋಗ ಬಾಧಿತರ ಜಿಲ್ಲಾವಾರು ವಿವರ: 

  ತಿರುವನಂತಪುರ-558, ಮಲಪ್ಪುರಂ-330, ತೃಶ್ಶೂರು-300, ಕಣ್ಣೂರು-276, ಆಲಪ್ಪುಳ-267, ಕಲ್ಲಿಕೋಟೆ-261, ಕೊಲ್ಲಂ-224, ಎರ್ನಾಕುಳಂ-227, ಕೋಟ್ಟಯಂ-217, ಪಾಲ್ಘಾಟ್-194, ಕಾಸರಗೋಡು-140, ಪತ್ತನಂತಿಟ್ಟ-135, ಇಡುಕ್ಕಿ-105, ವಯನಾಡು-95 ಎಂಬಂತೆ ರೋಗ ಬಾಧಿಸಿದೆ. 

        ರೋಗ ಮುಕ್ತ : ತಿರುವನಂತಪುರ-483, ಕೊಲ್ಲಂ-103, ಪತ್ತನಂತಿಟ್ಟ-53, ಆಲಪ್ಪುಳ-87, ಕೋಟ್ಟಯಂ-106, ಇಡುಕ್ಕಿ-15, ಎರ್ನಾಕುಳಂ-116, ತೃಶ್ಶೂರು-83, ಪಾಲ್ಘಾಟ್-33, ಮಲಪ್ಪುರಂ-119, ಕಲ್ಲಿಕೋಟೆ-178, ವಯನಾಡು-10, ಕಣ್ಣೂರು-144, ಕಾಸರಗೋಡು-127 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 26,229 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 72,578 ಮಂದಿ ಗುಣಮುಖರಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries