ತಿರುವನಂತಪುರ: ಕೇರಳದಲ್ಲಿ ತೀವ್ರ ಕಳವಳಕಾರಿಯಾಗಿ ದೈನಂದಿನ ಕೋವಿಡ್ ಏರಿಕೆ ಇಂದು ಕಂಡುಬಂದಿದ್ದು ಇಂದು ಕೋವಿಡ್ ಪರಿಶೋಧನೆ ನಡೆಸಲಾದ ಜುಲ್ಲು ಸಂಗ್ರಹದ ಸಂಖ್ಯೆಯ ಏರಿಕೆ ಇದಕ್ಕೆ ಕಾರಣವೆಂದು ವಿಶ್ಲೇಶಿಸಲಾಗಿದೆ. ಇಂದು ರಾಜ್ಯದಲ್ಲಿ 3402 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಇಂದಿನ ವರದಿ ನೀಡಲ್ಪಟ್ಟಿದೆ.
ಇಂದು 12 ಕೋವಿಡ್ ಸಾವುಗಳು:
ರಾಜ್ಯದಲ್ಲಿ ಇಂದು 12 ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ತಿರುವನಂತಪುರದ ವಿಳಿಂಞದ ಅಹ್ಮದ್ ರಿಫೈ (65), ತ್ರಿಶೂರಿನ ಮಿನಾಲೂರ್ ನ ಶ್ರೀಜಿತ್ (21), ದೇವಕಿ (97), ಮನಕ್ಕಾಡ್‍ನ ನೀಲಕಂಠ ಶರ್ಮಾ (68), ಕಾಸರಗೋಡಿನ ಪನೆಯಾಲದ ರಾಜನ್(60), ಮರಿಯಮ್ಮ(66), ಚೆಂಗಳದ ಹಸೈನಾರ್(61),ತಿರುವನಂತಪುರದ ಶ್ರೀಜಿತ್(21)ತೃಶೂರ್ ಮಿನಲೂರಿನ ದೇವಕಿ(97), ಕಾಸರಗೋಡಿನ ಸಿ.ಎ.ಹಸೈನಾರ್(66),ತಿರುವನಂತಪುರದ ಶಾಂತಾ (70), ತಿರುವನಂತಪುರ ವಳ್ಳಕ್ಕಡವಿನ ಮೋಹನನ್(7), ತಿರುವನಂತಪುರ ವಲಿಯತ್ತುರದ ಫೆÇ್ಲೀರಮ್ಮ (76), ಎರ್ನಾಕುಳಂ ಕಳಮಶ್ಚೇರಿಯ ಲಿಲ್ಲಿ (57) ರ ಸಾವಿಗೆ ಕೊರೊನಾ ಕಾರಣವೆಂದು ದೃಢಪಟ್ಟಿದ್ದು ಈ ಮೂಲಕ ರಾಜ್ಯಾದ್ಯಂತ ಕೋವಿಡ್ ಮರಣದ ಸಂಖ್ಯೆ 384 ಕ್ಕೆ ಏರಿಕೆಯಾಗಿದೆ.
ಕೋವಿಡ್ ಧನಾತ್ಮಕ ಜಿಲ್ಲಾವಾರು ವಿವರ:
ಇಂದು ಕೋವಿಡ್ ದೃಢಪಟ್ಟ 3402 ಬಾಧಿತರಲ್ಲಿ ಹೆಚ್ಚಿನ ಬಾಧಿತರು ತಿರುವನಂತಪುರ ಜಿಲ್ಲೆಯಲ್ಲಿ ದಾಖಲಾಗಿವೆ. ತಿರುವನಂತಪುರ 531 , ಕೊಲ್ಲಂ 362 , ಕೊಝಿಕ್ಕೋಡ್ 330 , ತ್ರಿಶೂರ್ 323 , ಎರ್ನಾಕುಳಂ 276 , ಕಾಸರಗೋಡು 270 , ಕಣ್ಣೂರು 251 , ಆಲಪ್ಪುಳ 240 , ಮಲಪ್ಪುರಂ 201, ಕೊಟ್ಟಾಯಂ 196, ಪತ್ತನಂತಿಟ್ಟು 190 , ಪಾಲಕ್ಕಾಡ್ 131 , ವಯನಾಡ್ 77 ಮತ್ತು ಇಡುಕ್ಕಿ ಜಿಲ್ಲೆಯ 24 ಜನರಿಗೆ ಇಂದು ಕೋವಿಡ್ ಪಾಸಿಟಿವ್ ಆಗಿರುವುದುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ನೆಗೆಟಿವ್ ಆದವರ ವಿವರ:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2058 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 613 , ಕೊಲ್ಲಂ 323 , ಪತ್ತನಂತಿಟ್ಟು 116 , ಆಲಪ್ಪುಳ 83 , ಕೊಟ್ಟಾಯಂ 91 , ಇಡುಕ್ಕಿ 24 , ಎರ್ನಾಕುಳಂ 105, ತ್ರಿಶೂರ್ 145, ಪಾಲಕ್ಕಾಡ್ 87, , ಮಲಪ್ಪುರಂ 150, ಕೋಝಿಕ್ಕೋಡ್ 88 , ವಯನಾಡ್ 25 , ಕಣ್ಣೂರು 67, ಕಾಸರಗೋಡು 141 ಮಂದಿಗಳ ಫಲಿತಾಂಸ ಇಂದು ನಕಾರಾತ್ಮಕವಾಗಿದೆ.
ರಾಜ್ಯದ ಪರಿಸ್ಥಿತಿ ಗಂಭೀರ:
ಕೋವಿಡ್ ಬಾಧಿತರ ಸಂಖ್ಯೆ ಶೀಘ್ರವಾಗಿ ಹೆಚ್ಚುತ್ತಿರುವ ಬಗ್ಗೆ ರಾಜ್ಯದಲ್ಲಿ ಕಳವಳಗಳು ಮುಂದುವರೆದಿದೆ. ಸಂಪರ್ಕ ಮೂಲಕ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತು ರೋಗನಿರ್ಣಯ ಮಾಡದ ಪ್ರಕರಣಗಳ ಸಂಖ್ಯೆಯಿಂದಾಗಿ ಕಳವಳಗಳು ಹೆಚ್ಚಾಗುತ್ತಿವೆ. ಕೋವಿಡ್ ಮರಣ ಪ್ರಮಾಣ ಕೂಡ ರಾಜ್ಯದಲ್ಲಿ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಉಂಟಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯಲ್ಲಿ ಬದಲಾವಣೆಗಳಾಗಿವೆ.
ದೇಶದಲ್ಲಿ ಕೋವಿಡ್ ಬಾಧಿತರಲ್ಲೂ ಏರಿಕೆ:
ಅನ್ಲಾಕ್ ಪ್ರಕ್ರಿಯೆ ಮುಂದುವರೆದಂತೆ ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 43,70,129 ಕ್ಕೆ ಏರಿದೆ. ಈವರೆಗೆ 73,890 ಜನರು ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಪ್ರಕಾರ, ದೇಶದಲ್ಲಿ ಶೇ 70 ರಷ್ಟು ಕೋವಿಡ್ ಸಾವುಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೇಂದ್ರೀಕೃತವಾಗಿವೆ. ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ.