ಕಾಸರಗೋಡು: ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಬುಧವಾರ ವ್ಯಾಪಕ ಪ್ರಮಾಣದ ಏರಿಕೆಯಲ್ಲಿ ಕೊರೊನಾ ಸೋಂಕು ಮತ್ತೆ ಕಳವಳಕಾರಿಯಾಗಿ ವರದಿಯಾಗಿದೆ. ರಾಜ್ಯದಲ್ಲಿಂದು ಒಟ್ಟು 3830 ಹೊಸ ಸೋಂಕಿತರನ್ನು ಪತ್ತೆಹಚ್ಚಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 119 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಈ ಪೈಕಿ 113 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಐವರು ವಿದೇಶದಿಂದ ಹಾಗು ಒಬ್ಬರು ಇತರ ರಾಜ್ಯದಿಂದ ಬಂದವರು. ಇದೇ ಸಂದರ್ಭದಲ್ಲಿ 83 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ಅಜಾನೂರು-15, ಪಳ್ಳಿಕರೆ-6, ಪುಲ್ಲೂರು-1, ಮಡಿಕೈ-11, ಪಡನ್ನ-3, ಬೆಳ್ಳೂರು-1, ಮುಳಿಯಾರು-3, ಚೆಂಗಳ-12, ಈಸ್ಟ್ ಎಳೇರಿ-4, ಚೆರ್ವತ್ತೂರು-5, ಪಿಲಿಕ್ಕೋಡು-1, ಮೊಗ್ರಾಲ್ ಪುತ್ತೂರು-1, ಕಾಸರಗೋಡು-3, ವರ್ಕಾಡಿ-2, ಮಧೂರು-3, ಚೆಮ್ನಾಡ್-7, ಉದುಮ-4, ಕಾಂಞಂಗಾಡ್-9, ನೀಲೇಶ್ವರ-1, ತೃಕ್ಕರಿಪುರ-4, ಕಿನಾನೂರು-4, ಮಂಜೇಶ್ವರ-2, ಮಂಗಲ್ಪಾಡಿ-6, ಬಳಾಲ್-2, ಮೀಂಜ-1, ಪೈವಳಿಕೆ-2, ಕುಂಬಳೆ-2, ಬೇಡಡ್ಕ-1, ದೇಲಂಪಾಡಿ-1, ಕಾರಡ್ಕ-1, ಕರುನಾಗಪಳ್ಳಿ-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 3830 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಬುಧವಾರ 3830 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 14 ಮಂದಿ ಸಾವಿಗೆ ಕೊರೊನಾ ಕಾರಣವೆಂಬುದಾಗಿ ಖಾತರಿಗೊಂಡಿದೆ. ಈ ವರೆಗೆ ಒಟ್ಟು 480 ಮಂದಿ ಸಾವಿಗೀಡಾಗಿದ್ದಾರೆ. ರೋಗ ಬಾಧಿತರಲ್ಲಿ 49 ಮಂದಿ ವಿದೇಶದಿಂದ, 153 ಮಂದಿ ಇತರ ರಾಜ್ಯಗಳಿಂದ ಬಂದವರು. 3562 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 66 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. 2263 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಜಿಲ್ಲಾವಾರು ವಿವರ : ತಿರುವನಂತಪುರ-675, ಕಲ್ಲಿಕೋಟೆ-468, ಆಲಪ್ಪುಳ-323, ಎರ್ನಾಕುಳಂ-319, ಕೊಲ್ಲಂ-300, ಮಲಪ್ಪುರಂ-298, ತೃಶ್ಶೂರು-263, ಕಣ್ಣೂರು-247, ಪತ್ತನಂತಿಟ್ಟ-236, ಪಾಲ್ಘಾಟ್-220, ಕೋಟ್ಟಯಂ-187, ಕಾಸರಗೋಡು-119, ವಯನಾಡು-99, ಇಡುಕ್ಕಿ-76 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-418, ಕೊಲ್ಲಂ-26, ಪತ್ತನಂತಿಟ್ಟ-157, ಆಲಪ್ಪುಳ-120, ಕೋಟ್ಟಯಂ-131, ಇಡುಕ್ಕಿ-21, ಎರ್ನಾಕುಳಂ-371, ತೃಶ್ಶೂರು-220, ಪಾಲ್ಘಾಟ್-117, ಮಲಪ್ಪುರಂ-257, ಕಲ್ಲಿಕೋಟೆ-155, ವಯನಾಡು-12, ಕಣ್ಣೂರು-179, ಕಾಸರಗೋಡು-83 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಾಗಿ 32,709 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. ಈಗಾಗಲೇ 84,608 ಮಂದಿ ಗುಣಮುಖರಾಗಿದ್ದಾರೆ.