ನವದೆಹಲಿ: ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿದೆ.
400 ಕಿ.ಮೀ ಗೂ ಮೀರಿದ ಟಾರ್ಗೆಟ್ ನ್ನು ತಲುಪಿ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಇದಾಗಿದ್ದು ಭಾರತದ ರಕ್ಷಣಾ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ. ಡಿಆರ್ ಡಿಒದ ಪಿಜೆ-10 ಪ್ರಾಜೆಕ್ಟ್ ನ ಅಡಿಯಲ್ಲಿ ಈ ಸ್ಥಳೀಯ ಬೂಸ್ಟರ್ ನ್ನು ಹೊಂದಿರುವ ಕ್ಷಿಪಣಿಯನ್ನು ತಯಾರಿಸಲಾಗಿದೆ.
ಸೆ.30 ರಂದು ಪರೀಕ್ಷೆ ಮಾಡಲಾಗಿರುವುದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಎರಡನೇ ವಿಸ್ತರಿತ ಶ್ರೇಣಿ ಆವೃತ್ತಿಯಾಗಿದೆ. ಕ್ಷಿಪಣಿಯ ಏರ್‌ಫ್ರೇಮ್ ಹಾಗೂ ಬೂಸ್ಟರ್ ನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ರಷ್ಯಾ ಹಾಗೂ ಭಾರತದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಬ್ರಹ್ಮೋಸ್ ಕ್ಷಿಪಣಿ ಪ್ರಾರಂಬಹ್ದಲ್ಲಿ 290- ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.
ಲಡಾಖ್ ನಲ್ಲಿ ಚೀನಾ ಗಡಿ ಕ್ಯಾತೆಯ ಹಿನ್ನೆಲೆಯಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿರುವ ಬೆನ್ನಲ್ಲೇ ಈ ವಿಸ್ತರಿತ ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿರುವುದು ಮಹತ್ವ ಪಡೆದುಕೊಂಡಿದೆ.