ತಿರುವನಂತಪುರ: ಕೇರಳದಲ್ಲಿ ಇಂದು 4125 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಇಂದು, 19 ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ಸಂಪರ್ಕದ ಮೂಲಕ 3463 ಜನರಿಗೆ ಸೋಂಕು ತಗಲಿದೆ. ಇವುಗಳಲ್ಲಿ 412 ರ ಮೂಲ ಸ್ಪಷ್ಟವಾಗಿಲ್ಲ.
ಕೋವಿಡ್ ಧನಾತ್ಮಕ ಪ್ರಕರಣಗಳು ಜಿಲ್ಲಾವಾರು ವಿವರ:
ಹೆಚ್ಚಿನ ಕೋವಿಡ್ ಪ್ರಕರಣಗಳು ಇಂದು ತಿರುವನಂತಪುರ ಜಿಲ್ಲೆಯಲ್ಲಿ ದಾಖಲಾಗಿವೆ. ತಿರುವನಂತಪುರ 681, ಮಲಪ್ಪುರಂ 444, ಎರ್ನಾಕುಳಂ 406, ಆಲಪ್ಪುಳ 403, ಕೋಝಿಕ್ಕೋಡ್ 394, ತ್ರಿಶೂರ್ 369, ಕೊಲ್ಲಂ 347, ಪಾಲಕ್ಕಾಡ್ 242, ಪತ್ತನಂತಿಟ್ಟು 207, ಕಾಸರಗೋಡು 197, ಕೊಟ್ಟಾಯಂ 169, ಕಣ್ಣೂರು 143, ವಯನಾಡ್ 81 ಮತ್ತು ಇಡುಕ್ಕಿ 42 ಮಂದಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ.
ಕೋವಿಡ್ ನೆಗೆಟಿವ್ ಆದವರ ವಿವರ:
ಇಂದು, 3007 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 469, ಕೊಲ್ಲಂ 215, ಪತ್ತನಂತಿಟ್ಟು 117, ಆಲಪ್ಪುಳ 231, ಕೊಟ್ಟಾಯಂ 114, ಇಡುಕ್ಕಿ 42, ಎರ್ನಾಕುಳಂ 250, ತ್ರಿಶೂರ್ 240, ಪಾಲಕ್ಕಾಡ್ 235, ಮಲಪ್ಪುರಂ 468, ಕೋಝಿಕ್ಕೋಡ್ 130, ವಯನಾಡ್ 61, ಕಣ್ಣೂರು 214, ಕಾಸರಗೋಡು 221 ಎಂಬಂತೆ ಪರಿಶೋಧನಾ ಫಲ ನೆಗೆಟಿವ್ ಆಗಿದೆ.
ಇಂದು ಒಟ್ಟು 19 ಕೋವಿಡ್ ಸಾವುಗಳು:
ಇಂದು 19 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದಾಗಿ ಸರ್ಕಾರ ಘೋಶಿಸಿದೆ. ಕೊಲ್ಲಂನ ಕೊಟ್ಟಿಯಂ ಮೂಲದ ಆನಂದನ್ (76) ತಿರುವನಂತಪುರಂನ ಕಡಕ್ಕಾವೂರು ಮೂಲದ ಲತಾ (40), ತಿರುವನಂತಪುರ ನೆಡುಮಾಂಗಾಡ್ ನ ಧರ್ಮದಾಸನ್(67), ತಿರುವನಂತಪುರ ವೆಂಜಾರ್ ಮೂಡ್ ನ ಅರವಿಂದ ನಾಯರ್(68), ಕಣ್ಣೂರು ಶಿವಪುರದ ಸತ್ಯವತಿ(70), ತಿರುವನಂತಪುರ ಅರುವಿಕ್ಕಾರ ರಾಧಾಕೃಷ್ಣನ್ (68), ಮಲಪ್ಪುರಂ ತಣಲೂರ್ ನ ಫಾತಿಮಾ (67), ಪಾಲಕ್ಕಾಡ್ ಒಟ್ಟಪಾಲಂನ ರಾಜನ್ (58), ತೃಶೂರ್ ಇರಿಂಗಲಕುಡದ ಗೋಪಾಲ ಮೆನನ್(79), ತಿರುವನಂತಪುರ ಕರಿಮಡಂ ಕಾಲನಿಯ ಸೈದಲಿ(30), ಮಲಪ್ಪುರಂ ಪುತ್ತುಪೆÇೀನ್ನಾನಿ ಅಬು (72), ಕೊಲ್ಲಂ ಕರುನಾಗಪಳ್ಳಿಯ ಬೀವಿಕುಂಜಿ (68), ತಿರುವನಂತಪುರ ಪಾರಶಾಲಾದ ಪ್ರೀಜಿ (38), ತಿರುವನಂತಪುರದ ಪಳ್ಳಿಕ್ಕಡವು ನಿವಾಸಿ ಶಮೀರ್ (38), ತಿರುವನಂತಪುರ ಪೆರುಂಕುಳಿಯ ಅಪ್ಪು (70), ತಿರುವನಂತಪುರ ಚಿರಳಿಲ್ ಕುಳಿಯ ಬಾಲಕೃಷ್ಣನ್ (81) ಮತ್ತು ಎರ್ನಾಕುಳಂನ ಪಿ.ಬಾಲನ್(86) ತಿರುವನಂತಪುರದ ವಟ್ಟಿಯೂರ್ ಕಾವ್ ನ ಸುರೇಂದ್ರನ್(54), ಮೃತಪಟ್ಟವರಾಗಿದ್ದಾರೆ. ಈವರೆಗೆ ಒಟ್ಟು ಸಾವಿನ ಸಂಖ್ಯೆ 572 ಕ್ಕೆ ತಲಪಿದೆ.
87 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್:
ಕೋವಿಡ್ ರೋಗವು ರಾಜ್ಯದ ಆರೋಗ್ಯ ಕಾರ್ಯಕರ್ತರನ್ನು ಬಾಧಿಸಿದೆ. ಇಂದು, 87 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಳೆದ 24 ಗಂಟೆಗಳಲ್ಲಿ 38,574 ಮಾದರಿಗಳನ್ನು ಪರೀಕ್ಷಿಸಲಾಯಿತು. 3007 ಜನರನ್ನು ಗುಣಪಡಿಸಲಾಗಿದೆ. 3463 ಜನರಿಗೆ ಸಂಪರ್ಕದಿಂದ ಸೋಂಕು ಉಂಟಾಗಿದೆ. ಪ್ರಸ್ತುತ ಸುಮಾರು 40,382 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಸೋಂಕು:
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಸಂಪರ್ಕ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವ ಜನರ ಸಂಖ್ಯೆ ಹೆಚ್ಚುತ್ತಿದೆ. ರೋಗಿಗಳ ಸಂಖ್ಯೆಯು ಹೆಚ್ಚಾದಂತೆ, ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಿಸಲಾಗಿದೆ.