ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 145 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 130 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ 5 ಮಂದಿಗೆ ಮತ್ತು ವಿದೇಶದಿಂದ ಬಂದ 10 ಮಂದಿಗೆ ರೋಗ ಬಾಧಿಸಿದೆ. ಇದೇ ವೇಳೆ 121 ಮಂದಿ ಗುಣಮುಖರಾಗಿದ್ದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಪಂಚಾಯತಿವಾರು ವಿವರ:
ಕೋಡೋಂ ಬೇಳೂರು-4, ಕುಂಬಳೆ-3, ಪುತ್ತಿಗೆ-1, ಈಸ್ಟ್ ಎಳೇರಿ-2, ಪಡನ್ನ-2, ಚೆಮ್ನಾಡ್-1, ಮಧೂರು-2, ಕಾಸರಗೋಡು-9, ನೀಲೇಶ್ವರ-2, ಕಯ್ಯೂರು-4, ವಲಿಯಪರಂಬ-1, ಅಜಾನೂರು-7, ಪುಲ್ಲೂರು-6, ಪಳ್ಳಿಕೆರೆ-7, ಮುಳಿಯಾರು-10, ಕಾಂಞಂಗಾಡ್-9, ಎಣ್ಮಕಜೆ-2, ಮಂಜೇಶ್ವರ-11, ಚೆರ್ವತ್ತೂರು-5, ಚೆಂಗಳ-5, ಪಿಲಿಕೋಡು-4, ಕಿನಾನೂರು-1, ಮೀಂಜ-8, ಮಂಗಲ್ಪಾಡಿ-17, ಬದಿಯಡ್ಕ-2, ಪೈವಳಿಕೆ-4, ತೃಕ್ಕರಿಪುರ-7, ಮಡಿಕೈ-6, ಕಳ್ಳಾರ್-1, ಮೊಗ್ರಾಲ್‍ಪುತ್ತೂರು-2 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 4167 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 4167 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 12 ಮಂದಿಯ ಸಾವಿಗೆ ಕೊರೊನಾ ವೈರಸ್ ಸೋಂಕು ಎಂಬುದಾಗಿ ದೃಢೀಕರಿಸಲಾಗಿದೆ. ರೋಗ ಬಾಧಿತರಲ್ಲಿ 48 ಮಂದಿ ವಿದೇಶದಿಂದ, 165 ಮಂದಿ ಇತರ ರಾಜ್ಯಗಳಿಂದ ಬಂದವರು. 3849 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 102 ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಮೂವರು ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 2744 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ತಿರುವನಂತಪುರ-926, ಕಲ್ಲಿಕೋಟೆ-404, ಕೊಲ್ಲಂ-355, ಎರ್ನಾಕುಳಂ-348, ಕಣ್ಣೂರು-330, ತೃಶ್ಶೂರು-326, ಮಲಪ್ಪುರಂ-297, ಆಲಪ್ಪುಳ-274, ಪಾಲ್ಘಾಟ್-268, ಕೋಟ್ಟಯಂ-225, ಕಾಸರಗೋಡು-145, ಪತ್ತನಂತಿಟ್ಟ-101, ಇಡುಕ್ಕಿ-100, ವಯನಾಡು-68 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-488, ಕೊಲ್ಲಂ-345, ಪತ್ತನಂತಿಟ್ಟ-128, ಆಲಪ್ಪುಳ-146, ಕೋಟ್ಟಯಂ-112, ಇಡುಕ್ಕಿ-73, ಎರ್ನಾಕುಳಂ-221, ತೃಶ್ಶೂರು-142, ಪಾಲ್ಘಾಟ್-118, ಮಲಪ್ಪುರಂ-265, ಕಲ್ಲಿಕೋಟೆ-348, ವಯನಾಡು-79, ಕಣ್ಣೂರು-169, ಕಾಸರಗೋಡು-110 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 35,724 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 90,089 ಮಂದಿ ಗುಣಮುಖರಾಗಿದ್ದಾರೆ.