ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 453 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 120 ಮಂದಿ ಗುಣಮುಖರಾಗಿದ್ದಾರೆ. 424 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 13 ಮಂದಿ ಇತರ ರಾಜ್ಯಗಳಿಂದ ಹಾಗು 16 ಮಂದಿ ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ರೋಗ ಬಾಧಿತರು : ಮಧೂರು-18, ಈಸ್ಟ್ ಎಳೇರಿ-5, ಚೆರ್ವತ್ತೂರು-14, ಪಳ್ಳಿಕೆರೆ-21, ಕಾಂಞಂಗಾಡ್-64, ಅಜಾನೂರು-38, ಪನತ್ತಡಿ-3, ಕಾಸರಗೋಡು-19, ನೀಲೇಶ್ವರ-20, ದೇಲಂಪಾಡಿ-2, ಚೆಮ್ನಾಡ್-42, ಮಂಗಲ್ಪಾಡಿ-6, ಮೊಗ್ರಾಲ್ ಪುತ್ತೂರು-6, ಪೈವಳಿಕೆ-4, ಕಯ್ಯಾರು-6, ಪಡನ್ನ-7, ಮುಳಿಯಾರು-5, ಕುಂಬಳೆ-16, ಕುತ್ತಿಕ್ಕೋಲ್-2, ಚೆಂಗಳ-39, ತೃಕ್ಕರಿಪುರ-7, ಮಡಿಕೈ-5, ಪಿಲಿಕ್ಕೋಡು-6, ಕೋಡೋಂ ಬೇಳೂರು-7, ಬಳಾಲ್-9, ಬದಿಯಡ್ಕ-1, ವಲಿಯಪರಂಬ-1, ವೆಸ್ಟ್ ಎಳೇರಿ-6, ಮಂಜೇಶ್ವರ-3, ಕಿನಾನೂರು-5, ಪುಲ್ಲೂರು-14, ಮೀಂಜ-1, ಕಾರಡ್ಕ-2, ಪುತ್ತಿಗೆ-2, ಉದುಮ-16, ಬೇಡಡ್ಕ-11, ಕಳ್ಳಾರ್-15 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 82 ಕ್ಕೆ : ಕೊರೊನಾ ವೈರಸ್ ಸೋಂಕಿನಿಂದ ಕಾಸರಗೋಡು ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 82 ಕ್ಕೇರಿದೆ. ಪೆರ್ಲ ಕಾಟುಕುಕ್ಕೆಯ 56 ವರ್ಷದ ನಿವಾಸಿ, ಬದಿಯಡ್ಕದ 75 ರ ಹರೆಯದ ವ್ಯಕ್ತಿ, ಕಾಂಞಂಗಾಡ್ ಪಡಿಂಞõÁರ್‍ನ 80 ರ ಹರೆಯದ ವೃದ್ಧೆ, ಉಪ್ಪಳ ಪತ್ವಾಡಿಯ 66 ರ ಹರೆಯದ ವ್ಯಕ್ತಿ, ನೀಲೇಶ್ವರ ಮೈನ್ ಬಜಾರ್‍ನ 67ರ ಹರೆಯದ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವಿಗೀಡಾದರು.
ಜಿಲ್ಲೆಯಲ್ಲಿ 4333 ಮಂದಿ ನಿರೀಕ್ಷಣೆಯಲ್ಲಿ:
ಜಿಲ್ಲೆಯಲ್ಲಿ ಒಟ್ಟು 4333 ಮಂದಿ ಪ್ರಸ್ತುತ ನಿರೀಕ್ಷಣೆಯಲ್ಲಿದ್ದಾರೆ. ಮನೆಗಳಲ್ಲಿ 3233 ಮತ್ತು ಸಂಸ್ಥೆಗಳಲ್ಲಿ 1100 ಮಂದಿ ಇದ್ದಾರೆ. ಹೊಸದಾಗಿ 212 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1558 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 399 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಬೇಕಾಗಿದೆ. 557 ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 133 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಸುಮಾರು 100 ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 10,466 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 720 ವಿದೇಶಗಳಿಂದ, 548 ಇತರ ರಾಜ್ಯಗಳಿಂದ ಮತ್ತು 9198 ಸಂಪರ್ಕದ ಮೂಲಕ ಸೋಂಕು ದೃಢಪಟ್ಟವರಾಗಿದ್ದಾರೆ. ಇಲ್ಲಿಯವರೆಗೆ 7777 ಜನರು ಕೋವಿಡ್ ಋಣಾತ್ಮಕವಾಗಿದ್ದಾರೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 82 ಕ್ಕೆ ಏರಿದೆ. ಪ್ರಸ್ತುತ, 2607 ಜನರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 1207 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.