ತಿರುವನಂತಪುರ: ರಾಜ್ಯದಲ್ಲಿ ಇಂದು 4,696 ಮಂದಿಗಳಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ರಾಜ್ಯದಲ್ಲಿ ಇಂದು ಈವರೆಗಿನ ಗರಿಷ್ಠ ಬಾಧಿತರು ದೃಢಪಟ್ಟ ದಿನವಾಗಿದೆ. ಇಂದು ಸೋಂಕು ಬಾಧಿತರಾದವರಲ್ಲಿ ಹೆಚ್ಚಿನ ಮಂದಿಗೂ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಇಂದು 4425 ಜನರಿಗೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಜಿಲ್ಲಾವಾರು ಅಂಕಿಅಂಶಗಳು:
ತಿರುವನಂತಪುರ 892, ಎರ್ನಾಕುಳಂ 537, ಕೋಝಿಕ್ಕೋಡ್ 536, ಮಲಪ್ಪುರಂ 483, ಕೊಲ್ಲಂ 330, ತ್ರಿಶೂರ್ 322, ಪಾಲಕ್ಕಾಡ್ 289, ಕೊಟ್ಟಾಯಂ 274, ಕಣ್ಣೂರು 242, ಆಲಪ್ಪುಳ 219, ಕಾಸರಗೋಡು 208, ಪತ್ತನಂತಿಟ್ಟು 190, ವಯನಾಡ್ 97, ಇಡುಕ್ಕಿ 77 ಮಂದಿಗಳಲ್ಲಿ ಇಂದು ಕೋವಿಡ್ ದೃಢಪಡಿಸಲಾಗಿದೆ.
ಕೋವಿಡ್ ಬಾಧಿಸಿ ಮೃತಪಟ್ಟವರು:
ಇಂದು, 16 ಸಾವುಗಳು ಕೋವಿಡ್ -19 ಕಾರಣ ಎಂದು ದೃಢಪಟ್ಟಿದೆ. ಪಾಲಕ್ಕಾಡ್ ನ ಚಲವರ ಮೂಲದ ಕುಂಜಲನ್ (69), ತಿರುವನಂತಪುರಂನ ಕುಂತಲ್ಲೂರಿನಿಂದ ಬೈಜು (48),ಮಲಪ್ಪುರಂ ಮೀನತ್ತೂರಿನ ಉಮ್ಮರ್ ಹಾಜಿ (65), ತಿರುವಬನಂತಪುರ ಬಾಲರಾಮಪುರದ ಅಲಿಖಾನ್ (58), ಮಲಪ್ಪುರಂ ಕಲಿಪ್ಪರಂಬ್ ನ ಮರಿಯುಮ್ಮ(82), ಕಾಸರಗೋಡಿನ ಮೊಯಿದೀನ್ ಕುಂಞÂ (68),ತ್ರಿಶೂರ್ ಎಡಕಲತ್ತೂರ್ ನ ಪರಮೇಶ್ವರನ್ ನಾಯರ್ (76),ಮಲಪ್ಪುರಂ ಮಂಗಳಂ ನ ಬೀಕುಟ್ಟಿ (60), ಕೊಲ್ಲಂ ಕೋವಿಲಂ ನ ರಾಧಮ್ಮ (50), ತ್ರಿಶೂರ್ ನ ಓಮನಮ್ಮ (62) ಎರ್ನಾಕುಳಂ ಪಡಕ್ಕಾಟ್ ನ ಟಿ.ಕೆ.ಶಶಿ(67), ಕೋಟ್ಟಯಂ ಅರಿಪ್ಪರಂಬ್ ನ ಮರಿಯಂ(69), ಕೋಟ್ಟಯಂ ಚಂಗನ್ನಾಚ್ಚೇರಿಯ ಬಾಬು(52), ಕೋಟ್ಟಯಂ ಮೋನಿಪ್ಪಳ್ಳಿಯ ಬಿ.ಟಿ.ಎಬ್ರಹಾಂ(90), ಕೊಟ್ಟಾಯಂನ ಚೆಪುರ್ಂಗಲ್ ಮೂಲದ ವಿ.ಕೆ.ಗೋಪಿ(71), ಕೊಟ್ಟಾಯಂನ ಚಕುಂಗಲ್ ಮೂಲದ ಮರಿಯಮ್ಮ ಥಾಮಸ್ (82) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದು ಈ ಮೂಲಕ ರಾಜ್ಯಾದ್ಯಂತ ಕೋವಿಡ್ ಬಾಧಿಸಿ ಮೃತರಾದವರ ಸಂಖ್ಯೆ 535 ಕ್ಕೆ ಏರಿಕೆಯಾಗಿದೆ.