ಕಣ್ಣೂರು: ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿಯಾಗಿದ್ದ 'ಏರ್ ಅರೇಬಿಯಾ' ಚಾರ್ಟರ್ಡ್ ವಿಮಾನದಲ್ಲಿ ಶಾರ್ಜಾದಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಂದ ಸುಮಾರು 47 ಲಕ್ಷ ರೂಪಾಯಿ ಮೌಲ್ಯದ 937 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಏರ್ ಇಂಟೆಲಿಜೆನ್ಸ್ ಘಟಕದ ಮೂಲಗಳ ಪ್ರಕಾರ, ಕಸ್ಟಮ್ಸ್ ಸಹಾಯಕ ಆಯುಕ್ತ ಎಸ್ ಮಧುಸೂದನ ಭಟ್ ನೇತೃತ್ವದ ತಂಡವು ಚಿನ್ನವನ್ನು ವಶಪಡಿಸಿಕೊಂಡಿದೆ. ಘಟನೆಗೆ ಸಂಬಂಧಿಸಿ ಸೋಮವಾರ ರಾತ್ರಿ ವಿಮಾನದಲ್ಲಿ ಆಗಮಿಸಿದ ಕಾಸರಗೋಡಿನ ಒಬ್ಬ ವ್ಯಕ್ತಿಯನ್ನು ಈ ಸಂಬಂಧ ವಶಕ್ಕೆ ಪಡೆದಿದೆ. ವ್ಯಕ್ತಿಯು ಚಿನ್ನವನ್ನು ತನ್ನ ಒಳ ಉಡುಪಿನಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.