ತಿರುವನಂತಪುರ: ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ನಾಲ್ಕನೇ ಹಂತದ ಅನ್ ಲಾಕ್‍ನ ಮಾರ್ಗಸೂಚಿಗಳು ಕೇರಳದಲ್ಲೂ ಅನ್ವಯವಾಗುತ್ತವೆ ಎಂದು ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅನ್‍ಲಾಕ್ 4 ನಿಬರ್ಂಧಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ. ಮುಖ್ಯ ಕಾರ್ಯದರ್ಶಿ ರಾಜ್ಯದಲ್ಲಿನ ನಿಯಮಗಳು ಇದಕ್ಕೆ ಅನುಗುಣವಾಗಿರುತ್ತವೆ ಎಂದು ಹೇಳಿದ್ದಾರೆ.
ಅನ್ಲಾಕ್ ಹಂತ 4 ರ ಅಡಿಯಲ್ಲಿರುವ ಕಂಟೈನ್ ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ಮುಂದುವರಿಯುತ್ತದೆ. ಮತ್ತು ಇತರ ಸ್ಥಳಗಳಲ್ಲಿ ಹಂತಗಳ ರಿಯಾಯಿತಿಗಳನ್ನು ನೀಡಲಾಗುತ್ತದೆ. ಹೊಸ ಆದೇಶವನ್ನು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ಮುಖ್ಯಸ್ಥರು ಹೊಸ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ಜಾರಿಗೊಳಿಸುವಂತೆ ನೋಡಿಕೊಳ್ಳುವರು.
ಕೋವಿಡ್ ವಿಸ್ತರಣೆಯ ಆಧಾರದ ಮೇಲೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಂಟೈನ್‍ಮೆಂಟ್ ವಲಯಗಳಿಗೆ ತಿಳಿಸುವ ಪ್ರಸ್ತುತ ಉಪಕ್ರಮಗಳನ್ನು ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಟೈನ್‍ಮೆಂಟ್ ವಲಯದಲ್ಲಿ ಹೆಚ್ಚುವರಿ ನಿಬರ್ಂಧಗಳು ಅಗತ್ಯವಿದ್ದರೆ ಕ್ರಮ ತೆಗೆದುಕೊಳ್ಳಲು ಕಲೆಕ್ಟರ್ ಗಳಿಗೆ ಅಧಿಕಾರ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪೆÇಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಜವಾಬ್ದಾರರಾಗಿರುವರು. ಶಾಲೆಗಳು ಮತ್ತು ಕಾಲೇಜುಗಳು ಇನ್ನೂ ಮುಚ್ಚಿರಲಿದೆ ಎಂದು ಕೇಂದ್ರದ ಅನ್ಲಾಕ್ ಹಂತ 4 ರ ಮಾರ್ಗಸೂಚಿ ಹೇಳುತ್ತದೆ. ಮೆಟ್ರೊ ರೈಲುಗಳು ಸೆಪ್ಟೆಂಬರ್ 7 ರಿಂದ ಪುನರಾರಂಭವಾಗುವುದು. ಸೇವೆಯು ಕಟ್ಟುನಿಟ್ಟಾದ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ರಾಜ್ಯದ ಹೊರಗಿನ ಪ್ರಯಾಣವನ್ನು ಇನ್ನು ಮುಂದೆ ನಿಬರ್ಂಧಿಸಲಾಗುವುದಿಲ್ಲ ಎಮದು ಸ್ಪಷ್ಟಪಡಿಸಲಾಗಿದೆ.