ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ 9ನೇ ಪಂದ್ಯದಲ್ಲಿ ರಾಜಾಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 4ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ರಾಜಾಸ್ಥಾನ್ ರಾಯಲ್ಸ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎನಿಸಿಕೊಂಡಿದೆ.
224 ರನ್ ಬೃಹತ್ ರನ್ ಗುರಿ ಬೆನ್ನತ್ತುದ ರಾಜಾಸ್ಥಾನ್ ಸ್ಟೀವನ್ ಸ್ಮಿತ್(50), ಸಂಜು ಸ್ಯಾಮ್ಸನ್(85) ಹಾಗೂ ರಾಹುಲ್ ತೆವಾಟಿಯಾ (53) ಉತ್ತಮ ಪ್ರದರ್ಶನದಿಂದ 19.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ.
ಇದಕ್ಕೆ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ (106),ಕೆ.ಎಲ್. ರಾಹುಲ್ (69) ಅದ್ಭುತ ಪ್ರದರ್ಶನ ನೀಡಿದ್ದರು.
ರಾಜಸ್ಥಾನ ಪರ ಅಂಕಿತ್ ರಜಪೂರ್ ಹಾಗೂ ಟಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆಇದ್ದರೆ ಪಂಜಾಬ್ ಪರ ಮೊಹಮದ್ ಶಮಿ 3 ಕೊಟ್ರೇಲ್, ನೀಶಮ್ ಹಾಗೂ ಮುರುಗನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದರು.