ಕಾಸರಗೋಡು: ಕಿಫ್ ಬಿ ಯೋಜನೆ ನಿಧಿಬಳಕೆಯೊಂದಿಗೆ ಕಾಸರಗೋಡು ಜಿಲ್ಲೆಯ 5 ಶಿಕ್ಷಣಾಲಯಗಳು ಮುನ್ನಡೆ ಸಾಧಿಸಲಿವೆ. ಈ ಮೂಲಕ ರಾಜ್ಯ ಮಟ್ಟದಲ್ಲಿ 144 ಸಾರ್ವಜನಿಕ ಶಿಕ್ಷಣಾಲಯಗಳು ಮುನ್ನಡೆ ಸಾಧಿಸಿದ ಸಂಸ್ಥೆಗಳ ಸಾಲಿಗೆ ಸೇರಲಿವೆ.
ಈ ಸಂಬಂಧ ನೂತನವಾಗಿ ನಿರ್ಮಿಸಿರುವ 2 ಶಾಲೆಗಳ ಉದ್ಘಾಟನೆ ಮತ್ತು ಮೂರು ಶಾಲೆಗಳ ನಿರ್ಮಾಣಗೊಳ್ಳಲಿರುವ ಕಟ್ಟಡಗಳ ಶಿಲಾನ್ಯಾಸ ಅ.3ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನೆರವೇರಿಸುವರು. ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮುಖ್ಯ ಅತಿಥಿಯಾಗಿರುವರು. ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಪ್ರದಾನ ಭಾಷಣ ಮಾಡುವರು.
ಕಿಫ್ ಬಿಯ ಮೂರು ಕೋಟಿ ರೂ. ಆರ್ಥಿಕ ಸಹಾಯದೊಂದಿಗೆ ನಿರ್ಮಿಸಲಾದ ಕಾಸರಗೋಡು ಜಿಲ್ಲೆಯ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಯೋಜನೆ ನಿಧಿ ಬಳಸಿ ನಿರ್ಮಿಸಲಾದ ಸರಕಾರಿ ಅಂಧ ವಿದ್ಯಾಲಯದ ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಗಳ ಉದ್ಘಾಟನೆ ಮತ್ತು ಕಿಫ್ ಬಿಯ ಮೂರು ಕೋಟಿ ರೂ. ಆರ್ಥಿಕ ಸಹಾಯದೊಂದಿಗೆ ನಿರ್ಮಿಸುವ ಕಾಞಂಗಾಡ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರಕಾರಿ ಎಸ್.ಬಿ. ಶಾಲೆಯ ಕಟ್ಟಡಗಳ ನಿರ್ಮಾಣ ಶಿಲಾನ್ಯಾಸ ಅ.3ರಂದು ನಡೆಯಲಿದೆ.