ನವದೆಹಲಿ: ಹಣ ಹೂಡಿಕೆಗಾಗಿ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದು ಅತ್ಯುತ್ತಮ ಆಯ್ಕೆ. ಇದ್ರಲ್ಲಿ ನೀವು ಕೇವಲ 500 ರೂಪಾಯಿಗಳೊಂದಿಗೆ ಪಿಪಿಎಫ್ ಖಾತೆಯನ್ನ ತೆರೆಯಬಹುದು. ಇನ್ನು ವರ್ಷಕ್ಕೊಂದು ಬಾರಿ ಈ ಖಾತೆಯಲ್ಲಿ 500 ರೂಪಾಯಿ ಠೇವಣಿ ಇಟ್ಟರೂ ಸಾಕು. ಅದ್ರಂತೆ, ಪ್ರಸ್ತುತ, ಇದು ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಇದು ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚಾಗಿದೆ. ಇನ್ನು ವರ್ಷದಲ್ಲಿ ಹೆಚ್ಚೆದ್ರೆ, 1.5 ಲಕ್ಷ ರೂಪಾಯಿಗಳವರೆಗೆ ಜಮಾ ಮಾಡಬಹುದು.
ಶೇಕಡಾ 7.1 ರಷ್ಟು ಬಡ್ಡಿ ಪಡೆಯುವ ಪಿಪಿಎಫ್ ಖಾತೆ ತೆರೆಯುವುದು ಹೇಗೆ..?
* ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಮೂಲಕ ನೀವು ಈ ಖಾತೆಯನ್ನ ತೆರೆಯಬಹುದು.
* ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಲಿನಲ್ಲಿಯು ಕೂಡ ಪಿಪಿಎಫ್ ಖಾತೆಯನ್ನ ತೆರೆಯಬಹುದು. * ಆದರೆ, ನಿಯಮಗಳ ಪ್ರಕಾರ, ಹಿಂದೂ ಅವಿಭಜಿತ ಕುಟುಂಬ (HUF) ಹೆಸರಿನಲ್ಲಿ PPF ಖಾತೆಯನ್ನ ತೆರೆಯಲು ಸಾಧ್ಯವಿಲ್ಲ.
ಖಾತೆ ತೆರೆಯಲು ಇರಬೇಕಾದ ಮೊತ್ತವೆಷ್ಟು.?
* ಪಿಪಿಎಫ್ ಖಾತೆ ತೆರೆಯಲು ಬೇಕಾದ ಕನಿಷ್ಠ ಮೊತ್ತ 500 ರೂಪಾಯಿ.
* ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಠೇವಣಿ 500 ರೂ. ಆಗಿದ್ದರೆ, ಗರಿಷ್ಠ ಹೂಡಿಕೆಯ ಮಿತಿ ವರ್ಷಕ್ಕೆ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.
* ನೀವು ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಪಿಪಿಎಫ್‌ನಲ್ಲಿ ಹಣ ಠೇವಣಿ ಮಾಡಬಹುದು. ಆದ್ರೆ, ಮೊದಲಿದ್ದ ನಿಯಮದಲ್ಲಿ ಈ ಅನುಕೂಲ ಇರ್ಲಿಲ್ಲ. ವರ್ಷದಲ್ಲಿ 12 ಬಾರಿ ಮಾತ್ರ ಠೇವಣಿಯಿಡಲು ಅವಕಾಶವಿತ್ತು. ಸಧ್ಯ ಈ ನಿಯಮವನ್ನ ರದ್ದು ಪಡಿಸಲಾಗಿದೆ.
ಮ್ಯಾಚ್ಯೂರಿಟಿ ಆಗಲು ಎಷ್ಟು ವರ್ಷ ಬೇಕು..?
* ಪಿಪಿಎಫ್ ಖಾತೆ 15 ವರ್ಷಗಳ ನಂತರ ಮ್ಯಾಚ್ಯೂರ್ ಆಗುತ್ತದೆ. ಆದರೆ, ಖಾತೆ ಮ್ಯಾಚ್ಯೂರ ಆಗುವ ಒಂದು ವರ್ಷ ಮೊದಲು ನೀವು 5-5 ವರ್ಷಗಳ ಎಕ್ಸಟೆನ್ಶನ್ ಪಡೆಯಬಹುದಾಗಿದೆ.
* ಆದ್ರೆ, ಇದಕ್ಕಾಗಿ ನೀವು ಖಾತೆ ಮ್ಯಾಚ್ಯೂರ್ ಆಗುವ ಒಂದು ವರ್ಷದ ಮೊದಲು ಅರ್ಜಿ ಸಲ್ಲಿಸಬೇಕು.
ನೀವು ಹಣ ಯಾವಾಗ ಹಿಂಪಡೆಯಬಹುದು..?
* ಪಿಪಿಎಫ್ ಖಾತೆ ತೆರೆದ ಬಳಿಕ 5 ವರ್ಷಗಳ ಕಾಲ ಈ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಿಲ್ಲ.
* 5 ವರ್ಷ ಪೂರ್ಣಗೊಂಡ ನಂತರ, ಫಾರ್ಮ್ 2 ಅನ್ನು ಭರ್ತಿ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದು.
* 5 ವರ್ಷಗಳ ನಂತರವೂ ಪಿಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಹಣದ ಶೇಕಡಾ 50ರಷ್ಟು ಅಥ್ವಾ ಅರ್ಧದಷ್ಟು ಹಣವನ್ನ ಹಿಂಪಡೆಯಬಹುದು.
ಯಾರಿಗೆ ಖಾತೆ ತೆರೆಯಲು ಅವಕಾಶವಿದೆ..?
* ಪಿಪಿಎಫ್ ಸ್ಕೀಮ್ ನಲ್ಲಿ ನೀವು ಜಂಟಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
* ಯಾವುದೇ ವ್ಯಕ್ತಿ ಫಾರ್ಮ್ -1 ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಖಾತೆ ತೆರೆಯಬಹುದು.
* ಅಪ್ರಾಪ್ತ ಅಥವಾ ಮಾನಸಿಕ ವಿಕಲಚೇತನರ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು.
* ಒಬ್ಬ ವ್ಯಕ್ತಿಗೆ ಒಂದು ಖಾತೆಯನ್ನ ಮಾತ್ರ ತೆರಯಲು ಅವಕಾಶವಿದೆ.
ಈ ಪಿಪಿಎಫ್ ಖಾತೆಯನ್ನ ವರ್ಗಾಯಿಸಬಹುದೇ..?
* ಖಾತೆದಾರರ ಕೋರಿಕೆಯ ಮೇರೆಗೆ, ಪಿಪಿಎಫ್ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಅಥವಾ ಅಂಚೆ ಕಚೇರಿಗೆ ವರ್ಗಾಹಿಸಬಹುದು.
* ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಬಹುದು.
* ಈ ಸೇವೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ವ್ಯವಸ್ಥೆ ಇದ್ಯಾ..?
* ಖಂಡಿತಾ, ಪಿಪಿಎಫ್ ಖಾತೆಯಲ್ಲಿನ ಠೇವಣಿಯ ಮೇಲೆ ನೀವು ಸಾಲವನ್ನ ಕೂಡ ಪಡೆದುಕೊಳ್ಳಬಹುದು.
* ಖಾತೆ ತೆರೆದ 1 ವರ್ಷದ ನಂತರ ಹಾಗೂ 5 ವರ್ಷಗಳ ಕಾಲ ಪಿಪಿಎಫ್ ಹೂಡಿಕೆಯ ಮೇಲೆ ನೀವು ಸಾಲ ತೆಗೆದುಕೊಳ್ಳಬಹುದು.
* ಒಂದ್ವೇಳೆ ನೀವು ಜನವರಿ 2020 ರಲ್ಲಿ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ, ನೀವು 1 ಏಪ್ರಿಲ್ 2021 ರಿಂದ 31 ಮಾರ್ಚ್ 2025 ರವರೆಗೆ ಸಾಲ ತೆಗೆದುಕೊಳ್ಳಬಹುದು.
* ನಿಮ್ಮ ಒಟ್ಟು ಠೇವಣಿಯ ಗರಿಷ್ಠ 25 ಪ್ರತಿಶತದಷ್ಟು ಸಾಲವನ್ನ ಪಡೆದುಕೊಳ್ಳಬಹುದು.
ತೆರಿಗೆ ವಿನಾಯ್ತಿಯ ಲಾಭ ಪಡೆಯಬಹುದು..!
* ಪಿಪಿಎಫ್ ಯೋಜನೆಯಲ್ಲಿ ಸಂಪೂರ್ಣ ಹೂಡಿಕೆಯ ನಂತ್ರ ನೀವು ತೆರಿಗೆ ವಿನಾಯ್ತಿಯ ಲಾಭವನ್ನ ಪಡೆಯಬಹುದು.
* ಯೋಜನೆಯಡಿಯಲ್ಲಿನ ಸಂಪೂರ್ಣ ಹೂಡಿಕೆ ಹಾಗೂ ಅದರಿಂದ ಸಿಗುವ ಬಡ್ಡಿಯ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
* ಇನ್ನು ಪಿಪಿಎಫ್ ಹೂಡಿಕೆಯ ಮೇಲಿನ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ.