ತಿರುವನಂತಪುರ: ಆತಂಕ ಮುಂದುವರಿದಂತೆ, ರಾಜ್ಯದಲ್ಲಿ ಇಂದು 5376 ಜನರಿಗೆ ಕೋವಿಡ್ -19 ಖಚಿತವಾಗಿದೆ. ಇಂದು ರೋಗನಿರ್ಣಯ ಮಾಡಿದವರಲ್ಲಿ 4,424 ಜನರಿಗೆ ಸಂಪರ್ಕದ ಮೂಲಕ ಸೋಂಕಿಗೆ ಒಳಗಾದವರು. 640 ಜನರಲ್ಲಿ ರೋಗದ ಮೂಲ ಸ್ಪಷ್ಟವಾಗಿಲ್ಲ. 42,786 ಮಂದಿ ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ ಅಂಕಿ ಅಂಶ ಇಂದು ವರದಿಯಾಗಿದೆ. 5376 ಮಂದಿ ಸೋಂಕಿಗೆ ಒಳಗಾಗಿದ್ದು, 2951 ಮಂದಿ ಗುಣಮುಖರಾಗಿದ್ದಾರೆ. ಇಂದು 20 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 592 ಕ್ಕೆ ಏರಿದೆ. ಸಂಪರ್ಕದ ಮೂಲಕ 4424 ಜನರಿಗೆ ಸೋಂಕು ತಗುಲಿತು. ಸೋಂಕಿತ ಜನರ ಸಂಖ್ಯೆ ಹೆಚ್ಚಾದಂತೆ ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 641 ಹಾಟ್‍ಸ್ಪಾಟ್‍ಗಳಿವೆ.
ಕೋವಿಡ್ ಧನಾತ್ಮಕ ಪ್ರಕರಣಗಳು ಜಿಲ್ಲಾವಾರು:
ತಿರುವನಂತಪುರದಲ್ಲಿ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ತಿರುವನಂತಪುರ 852, ಎರ್ನಾಕುಳಂ 624, ಮಲಪ್ಪುರಂ 512, ಕೋಝಿಕ್ಕೋಡ್ 504, ಕೊಲ್ಲಂ 503, ಆಲಪ್ಪುಳ 501, ತ್ರಿಶೂರ್ 478, ಕಣ್ಣೂರು 365, ಪಾಲಕ್ಕಾಡ್ 278, ಕೊಟ್ಟಾಯಂ 262, ಪತ್ತನಂತಿಟ್ಟು 223, ಕಾಸರಗೋಡು 136ಇಡುಕ್ಕಿ 79, ವಯನಾಡು 59 ಮಂದಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ.
ನೆಗೆಟಿವ್ ಆದವರ ವಿವರ:
ತಿರುವನಂತಪುರ 321, ಕೊಲ್ಲಂ 152, ಪತ್ತನಂತಿಟ್ಟು 127, ಆಲಪ್ಪುಳ 167, ಕೊಟ್ಟಾಯಂ 275, ಇಡುಕ್ಕಿ 55, ಎರ್ನಾಕುಳಂ 254, ತ್ರಿಶೂರ್ 180, ಪಾಲಕ್ಕಾಡ್ 150, ಮಲಪ್ಪುರಂ 372, ಕೋಝಿಕ್ಕೋಡ್ 427, ವಯನಾಡ್ 27, ಕಣ್ಣೂರ್ 142, ಕಾಸರಗೋಡು 302 ಮಂದಿಗಳ ಫಲಿತಾಂಶ ಋಣಾತ್ಮಕವಾಗಿದೆ.
ಇಂದು 20 ಕೋವಿಡ್ ಸಾವುಗಳು!:
ಕೋವಿಡ್ ಕಾರಣ 20 ಮಂದಿಗಳು ಸಾವನ್ನಪ್ಪಿರುವುದಾಗಿ ಸರ್ಕಾರ ದೃಢಪಡಿಸಿದೆ. ಕೊಲ್ಲಂನ ಆಯುರ್ ಮೂಲದ ರಾಜೇಶ್ (37), ತಿರುವನಂತಪುರ ಪುತ್ತುಕುರಿಚಿ ಮೂಲದ ಪೌಲಸನ್ (68), ತಿರುವನಂತಪುರ ಪೆರೂರ್ಕಾಡ ಮೂಲದ ಸಲಿಲಾ (49), ಕೋಝಿಕ್ಕೋಡ್ ಸಲ್ಫತ್ (57), ಇಶಾದ್ ಬಾಬು (40), ಪಿ. ಶ್ರೀಮತಿ., ಕೋಝಿಕ್ಕೋಡಿನ ಕೋಯ(83), ಕೋಝಿಕ್ಕೋಡಿನ ನಫೀಸ(78), ಕೋಝಿಕ್ಕೋಡ್ ಮಟ್ಟಂಚೇರಿಯ ಅಬ್ದುಲ್ಲ( 74), ಕೋಝಿಕ್ಕೋಡ್ ವಡಗರದ ಮೆಹಮ್ಮೂದ್(70), ಕೋಝಿಕ್ಕೋಡ್ ಪುತುಪ್ಪಡಿಯಿಂದ ರವೀಂದ್ರನ್ (84), ಪುತ್ತುಪ್ಪಾಡಿಯ ಮೊಹಮ್ಮದ್ (68), ಕೋಝಿಕ್ಖೋಡ್ ಕೋರನ್ (68), ಮುಥೋರನ್ (86), ತಿರುವನಂತಪುರದ ಮೋಹನನ್ (64), ಕೋಝಿಕ್ಕೋಡ್ ನ ಐಶಾಬಿ (81), ಮಲಪ್ಪುರಂ ನ ಶಣ್ ಬುಕರ್(71), ಕೊಲ್ಲಂ ನ ರಾಜು(62), ಮಲಪ್ಪುರಂ ನ ಅಬ್ದುಲ್ ಸಲಾಂ(45) ಎಂಬವರು ಮರಣಪಟ್ಟವರಾಗಿದ್ದಾರೆ. ಇದರೊಂದಿಗೆ ರಾಜ್ಯಾದ್ಯಂತ ಕೋವಿಡ್ ಮರಣ ಸಂಖ್ಯೆ 592 ಕ್ಕೆ ಏರಿಕೆಯಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ತಿರುವನಂತಪುರದಲ್ಲಿ ಇಂದು ಇನ್ನೂ 20 ಪೆÇಲೀಸ್ ಅಧಿಕಾರಿಗಳಿಗೆ ಕೋವಿಡ್ ದೃಢಪಟ್ಟಿದೆ. ತಿರುವನಂತಪುರ ನಗರದ 14 ಪೆÇಲೀಸರು ಮತ್ತು ತುಂಪಾ ನಿಲ್ದಾಣದ ಆರು ಪೆÇಲೀಸರಿಗೆ ಕೋವಿಡ್ ಇಂದು ದೃಢ#ಪಟ್ಟಿದೆ. ಇದರೊಂದಿಗೆ ತುಂಪಾ ಪೆÇಲೀಸ್ ಠಾಣೆಯಲ್ಲಿ ರೋಗಿಗಳ ಸಂಖ್ಯೆ 17 ಕ್ಕೆ ಏರಿದೆ. ನಿನ್ನೆ ನಗರದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ಎದುರಿಸುವಲ್ಲಿ ಸಕ್ರಿಯರಾಗಿದ್ದ ಪೋಲೀಸರು ಇದೀಗ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ತಿರುವನಂತಪುರ ನಗರ ಪೆÇಲೀಸ್ ಆಯುಕ್ತರ ಗನ್ ಮ್ಯಾನ್ ರಿಗೂ ಕೋವಿಡ್ ಖಚಿತಪಡಿಸಲಾಗಿದೆ.