ಕಾಸರಗೋಡು: ಮುಖ್ಯಮಂತ್ರಿಯ ಸ್ಥಳೀಯಾಡಳಿತ ರಸ್ತೆ ಪುನಶ್ಚೇತನ ಯೋಜನೆ ಮೂಲಕ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನ 5 ಗ್ರಾಮೀಣ ರಸ್ತೆಗಳಿಗೆ ಪುನರುಜ್ಜೀವನ ಲಭಿಸಲಿದೆ.
ರಾಜ್ಯದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚುರುಕುತನ ನೀಡಿರುವ ಯೋಜನೆ ಇದಾಗಿದೆ. ದೇವಿ ಹೌಸ್ ಪಳ್ಳಿಪ್ಪುಳ ದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ನವೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇಲ್ಲಿ 10 ಲಕ್ಷ ರೂ.ನ ನವೀಕರಣ ಚಟುವಟಿಕೆಗಳು ನಡೆಯಲಿವೆ. ಪಾಕಂ ಚಾರಲ್ ಕಡವು ಮೌವ್ವಲ್ ರಸ್ತೆಯ ಪುನರ್ ನಿರ್ಮಾಣ ಚಟುವಟಿಕೆಗಳಿಗೆ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಚಾಲನೆ ನೀಡಿದರು. ಇಲ್ಲಿ 10 ಲಕ್ಷ ರೂ.ನ ಮರುಡಾಮರೀಕರಣ ನಡೆಯಲಿದೆ. ಪಾಕಂ ಕೂಟ್ಟಕ್ಕನಿಮೂಕೂಡ್ ರಸ್ತೆ ಮರುಡಾಮರೀಕರಣ ಕಾಮಗಾರಿಕೆ ತಚ್ಚಂಗಾಡಿನಲ್ಲಿ ಶಾಸಕ ಕೆ.ಕುಂಞÂ ರಾಮನ್ ಚಾಲನೆ ನೀಡಿದರು. ಇಲ್ಲಿ 45 ಲಕ್ಷ ರೂ.ನ ವೆಚ್ಚದ ಕಾಮಗಾರಿ ನಡೆಯಲಿದೆ. ತಚ್ಚಂಗಾಡ್ ಕಾನತ್ತುಕೈ ರಸ್ತೆ ಪುನರ್ ನಿರ್ಮಾಣ ಚಟುವಟಿಕೆಗೆ ಜ್ವಾಲಾ ಕ್ಲಬ್ ಆವರಣದಲ್ಲಿ ಶಾಸಕ ಕೆ.ಕುಞÂ ರಾಮನ್ ಚಾಲನೆ ನೀಡಿದರು. ಇಲ್ಲಿ 3,40.000 ರೂ.ನ ಮರು ಡಾಮರೀಕರಣ ನಡೆಯಲಿದೆ. ಮುನಿಕ್ಕಲ್ ಕಾಯಕ್ಕುನ್ನು ಕಾಪ್ಪಿಕಡವು ರಸ್ತೆ ಪುನರ್ ನಿರ್ಮಾಣ ಚಟುವಟಿಕೆಗೆ ಬಾಂಗಾಡ್ ನಲ್ಲಿ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಚಾಲನೆ ನೀಡಿದರು. ಇಲ್ಲಿ 23 ಲಕ್ಷ ರೂ. ಮೌಲ್ಯದ ಚಟುವಟಿಕೆ ನಡೆಯಲಿದೆ. ಎಲ್ಲ ಸಮಾರಂಭಗಳಲ್ಲೂ ಗ್ರಾಮ ಪಂಚಾಯತ್ ಅರ್ಧಯಕ್ಷೆ ಪಿ.ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಕೋವಿಡ್ ಅವಧಿಯಲ್ಲಿ ರಸ್ತೆ ನವೀಕರಣಕ್ಕೆ ನಿಧಿ ಮೀಸಲಿರಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಳೀಯಾಡಳಿತ ಯೋಜನೆಯಲ್ಲಿ ಅಳವಡಿಸಿ ಕಾಮಗಾರಿ ನಡೆಸಲಾಗುವುದು. ಈ ಮೂಲಕ ಅನೇಕ ವರ್ಷಗಳ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು. ಆಯಾ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು. ಕೋವಿಡ್ ಪ್ರತಿರೋಧ ಸಂಹಿತೆ ಪಾಲನೆಯೊಂದಿಗೆ ಸಮಾರಂಭ ನಡೆಯಿತು.