ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ 6ನೇ ವಾರ್ಡ್ ನೆಕ್ಕರೆಕಳೆಯ, ಅಣ್ಣಡ್ಕ ಕಾಂಕ್ರೀಟ್ ರಸ್ತೆ ಮತ್ತು ಕೆಡೆಂಜಿ ಕಾಲನಿ ಕಾಂಕ್ರೀಟು ರಸ್ತೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು. ವಾರ್ಡು ಜನಪ್ರತಿನಿಧಿ ವಿಶ್ವನಾಥ ಪ್ರಭು ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೆಕ್ಕರೆಕಳೆಯ, ಕಾಡಮನೆ ಪರಿಸರದವರು, ಊರವರು ವಾರ್ಡು ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿ ಸನ್ಮಾನಿಸಿದರು.