ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 268 ಮಂದಿಗೆ ಕೊರೊನಾ ವೈರಸ್ ಪಾಸಿಟವ್ ಆಗಿದೆ. ಇದೇ ಸಂದರ್ಭದಲ್ಲಿ 107 ಮಂದಿ ಗುಣಮುಖರಾಗಿದ್ದಾರೆ. 257 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 4 ಮಂದಿ ವಿದೇಶದಿಂದ ಹಾಗು 7 ಮಂದಿ ಇತರ ರಾಜ್ಯಗಳಿಂದ ಬಂದವರು. 107 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರಾದವರ ಪಂಚಾಯತಿವಾರು ಮಾಹಿತಿ:
ಪಡನ್ನ-8, ಚೆಂಗಳ-26, ಕಾಸರಗೋಡು-15, ಚೆಮ್ನಾಡ್-13, ಮೊಗ್ರಾಲ್ ಪುತ್ತೂರು-8, ದೇಲಂಪಾಡಿ-5, ಮುಳಿಯಾರು-4, ನೀಲೇಶ್ವರ-8, ಉದುಮ-5, ಅಜಾನೂರು-14, ಕುಂಬಳೆ-10, ಮಂಗಲ್ಪಾಡಿ-17, ಪೈವಳಿಕೆ-1, ಪಳ್ಳಿಕೆರೆ-11, ಕಾಂಞಂಗಾಡ್-28, ಕಯ್ಯೂರು-13, ಚೆರ್ವತ್ತೂರು-14, ವಲಿಯಪರಂಬ-7, ತೃಕ್ಕರಿಪುರ-3, ಈಸ್ಟ್ ಎಳೇರಿ-2, ಕೋಡೋಂ ಬೇಳೂರು-3, ಮಂಜೇಶ್ವರ-7, ಮೀಂಜ-3, ಮಧೂರು-8, ಕಾರಡ್ಕ-1, ಬಳಾಲ್-5, ಕಳ್ಳಾರ್-5, ಮಡಿಕೈ-6, ಪುಲ್ಲೂರು-4, ಬೇಡಡ್ಕ-9, ಪುತ್ತಿಗೆ-2, ಕಿನಾನೂರು-1, ಪಿಲಿಕೋಡು-1, ವೆಸ್ಟ್ ಎಳೇರಿ-1 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಮತ್ತೆ ನಾಲ್ವರ ಸಾವು : ಕೋವಿಡ್ ಬಾಧಿಸಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಸಾವಿಗೀಡಾಗಿದ್ದಾರೆ. ಕಾಸರಗೋಡು ನಗರಸಭಾ ವ್ಯಾಪ್ತಿಯ 83 ವರ್ಷದ ಮಹಿಳೆ, 85 ವರ್ಷದ ವ್ಯಕ್ತಿ, ಪಡನ್ನದ 65 ವರ್ಷದ ವ್ಯಕ್ತಿ, ವೆಳ್ಳಿಕೋತ್ ನ 59 ವರ್ಷದ ವ್ಯಕ್ತಿ ಸಾವಿಗೀಡಾದರು. ಇದು ವರೆಗೆ ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವಿಗೀಡಾದವರ ಸಂಖ್ಯೆ 72ಕ್ಕೇರಿದೆ.
ಕೇರಳ ರಾಜ್ಯದಲ್ಲಿ 6477ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 6477 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದ್ದಾರೆ. 22 ಮಂದಿ ಸಾವಿಗೆ ಕೊರೊನಾ ವೈರಸ್ ಕಾರಣವೆಂದು ಖಚಿತಗೊಂಡಿದೆ. ರೋಗ ಬಾಧಿತರಲ್ಲಿ 58 ಮಂದಿ ವಿದೇಶದಿಂದ ಹಾಗು 198 ಮಂದಿ ಇತರ ರಾಜ್ಯಗಳಿಂದ ಬಂದವರು. 6131 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 80 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗು 10 ಮಂದಿ ಐ.ಎನ್.ಎಚ್.ಎಸ್. ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 3481 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಜಿಲ್ಲಾವಾರು ವಿವರ: ತಿರುವನಂತಪುರ-814, ಮಲಪ್ಪುರಂ-784, ಕಲ್ಲಿಕೋಟೆ-690, ಎರ್ನಾಕುಳಂ-655, ತೃಶ್ಶೂರು-607, ಕೊಲ್ಲಂ-569, ಆಲಪ್ಪುಳ-551, ಕಣ್ಣೂರು-419, ಪಾಲ್ಘಾಟ್-419, ಕೋಟ್ಟಯಂ-322, ಕಾಸರಗೋಡು-268, ಪತ್ತನಂತಿಟ್ಟ-191, ಇಡುಕ್ಕಿ-114, ವಯನಾಡು-74 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತ : ತಿರುವನಂತಪುರ-411, ಕೊಲ್ಲಂ-207, ಪತ್ತನಂತಿಟ್ಟ-120, ಆಲಪ್ಪುಳ-218, ಕೋಟ್ಟಯಂ-193, ಇಡುಕ್ಕಿ-69, ಎರ್ನಾಕುಳಂ-325, ತೃಶ್ಶೂರು-252, ಪಾಲ್ಘಾಟ್-223, ಮಲಪ್ಪುರಂ-588, ಕಲ್ಲಿಕೋಟೆ-472, ವಯನಾಡು-79, ಕಣ್ಣೂರು-217, ಕಾಸರಗೋಡು-107 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 48,892 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,11,331 ಮಂದಿ ಗುಣಮುಖರಾಗಿದ್ದಾರೆ.
ಸೋಂಕು ಬಾಧಿಸಿ 22 ಮಂದಿ ಮೃತ್ಯು:
ರಾಜ್ಯಾದ್ಯಂತ ಕೋವಿಡ್ ಬಾಧಿಸಿ ಇಂದು 22 ಮಂದಿ ಮೃತಪಟ್ಟರು. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಮರಣ ಸಂಖ್ಯೆ 635ಕ್ಕೆ ಏರಿಕೆಯಾಗಿದೆ.
ಕೊಲ್ಲಂನ ವಾಜತೊಪ್ಪು ಮೂಲದ ಜಾರ್ಜ್ (69), ಅಲಪ್ಪುಳದ ತಾಯಿಂಗಲ್ ನ ಎ.ಎಲ್.ಮುಕುಂದನ್ (57), ಆಲಪ್ಪುಳದ ಅದಿಕಟ್ಟಕ್ಕುಳಂಗರದ ಜಾಸ್ಮಿನ್ ಸಕಿರ್(39), ಕೊಲ್ಲಂ ನ ಸದಾಶಿವನ್(90), ಆಲಪ್ಪುಳದ ಕ್ಲಿಟಸ್(82), ತೃಶೂರ್ ಪಟ್ಟೂರ್ಕ್ಕರದ ಮೊಹಮ್ಮದ್ ಸುನೀರ್(45), ಕೋಝಿಕ್ಕೋಡ್ ನ ಅಕ್ಬರ್ ಪಾಶಾ(40), ಮಲಪ್ಪುರಂನ ಸೈನುದ್ದೀನ್(58), ತಿರುವನಂತಪುರ ತೆಟ್ಟುಮಾಂಗಾಡ್ ನ ರಾಜೇಶ(45), ಕೋಟ್ಟಯಂ ವೈಕ್ಕಂ ನ ಆಕಾಶ(18), ತೃಶೂರ್ ಕನ್ನಂಕುಳ ದ ವಿ.ವಿ.ದೇವೀಸ್(65), ಪತ್ತನಂತಿಟ್ಟು ನಿವಾಸಿ ಡೋಲ್ಪಿನ್(50), ತಿರುವನಂತಪುರದ ಕಲಾಮಣಿ (58), ತಿರುವನಂತಪುರ ಕರಮನದ ವಿಜಯನ್ (59), ತೃಶೂರ್ ನ ಚಂದ್ರಶೇಖರನ್ (90), ಕೊಟ್ಟಾಯಂನ ಮನೋಜ್ ಸ್ಟೀಫನ್ ಥಾಮಸ್ (57), ಚಡಯಮಂಗಲಂನ ವವಾಕುಂಜು (68), ವೆಲ್ಲಾರಾದ ಥಾಮಸ್ ಕಾರ್ನೆಲ್ಲೆಸ್ (60), ತಿರುವನಂತಪುರಂನ ಪದ್ಮಾವತಿ (67) ಮತ್ತು ಕೊಟ್ಟಾಯಂನ ಪನಚಿಕಾಡು ಮೂಲದ ಸಿಜೆ. ಜೋಸೆಫ್(65) ಮೃತಪಟ್ಟವರಾಗಿದ್ದಾರೆ.
ರಾಜ್ಯದಲ್ಲಿ ಹೆಚ್ಚಿದ ಆತಂಕ:
ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚಾದಂತೆ ರಾಜ್ಯದಲ್ಲಿ ಆತಂಕ ಹೆಚ್ಚುತ್ತಿದೆ. ರಾಜ್ಯದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚು ದೈನಂದಿನ ಸಂಖ್ಯೆ ಗುರುವಾರ ವರದಿಯಾಗಿತ್ತು. ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳದ ಹೊರತಾಗಿಯೂ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ತಡೆಗಟ್ಟುವ ಕ್ರಮಗಳಿಗೆ ಹಿನ್ನಡೆಯಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದೂ ಗಮನಾರ್ಹವಾಗುತ್ತಿದೆ. ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ.