ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಹೆಚ್ಚುವರಿ ಪ್ರಬಲಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮೂಲಕ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಪೂರ್ಣಪ್ರಮಾಣದ ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಒಗ್ಗಟ್ಟಿನ ಯತ್ನದಿಂದ ಮಾತ್ರ ರೋಗನಿಯಂತ್ರಣ ಸಾಧ್ಯ. ಪೆÇಲೀಸರು ಮತ್ತು ಮಾಸ್ಟರ್ ಯೋಜನೆ ಅಂಗವಾಗಿ ಶಿಕ್ಷಕರೂ ತಪಾಸಣೆ ನಡೆಸುವರು ಎಂದು ಸಭೆ ತಿಳಿಸಿದೆ.
ವಿವಾಹಕ್ಕೆ 50 ಮಂದಿ ಇತರ ಸಮಾರಂಭಗಳಿಗೆ 20 ಮಂದಿಗೆ ಮಾತ್ರ ಅನುಮತಿ:
ಗುರುವಾರದಿಂದ ವಿವಾಹ ಸಮಾರಂಭಗಳಿಗೆ ಗರಿಷ್ಠ 50 ಮಂದಿ, ಇತರ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿ ಮಾತ್ರ ಭಾಗವಹಿಸಲು ಅನುಮತಿಯಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಆದೇಶ ಉಲ್ಲಂಘಿಸುವ ವ್ಯಾಪಾರ ಸಂಸ್ಥೆಗಳ ವಿರುದ್ಧ ಕ್ರಮ:
ಸಿಬ್ಬಂದಿ ಮಾಸ್ಕ್, ಗ್ಲೌಸ್ ಧರಿಸಬೇಕು ಎಂಬ ಆದೇಶ ಉಲ್ಲಂಘಿಸಿದ ಅಂಗಡಿಗಳನ್ನು 7 ದಿನಗಳ ಕಾಲ ಮುಚ್ಚುಗಡೆ ಮಾಡಲಾಗುವುದು. ಆದೇಶ ಉಲ್ಲಂಘಿಸುವ ವ್ಯಾಪಾರ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದಾಗಿ ಸಭೆ ತಿಳಿಸಿದೆ.
ಆಟಕ್ಕೆ 20 ಮಂದಿಗೆ ಅನುಮತಿ:
ಪ್ರೇಕ್ಷಕರು, ಆಟಗಾರರು ಸೇರಿ ಕ್ರೀಡೆಗೆ 20 ಮಂದಿಗೆ ಮಾತ್ರ ಅನುಮತಿ ಇದೆ. ಎಲ್ಲರೂ ಮಾಸ್ಕ್ ಧರಿಸಿ, ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಬೇಕು ಎಂದು ಸಭೆ ಹೇಳಿದೆ.
ಅ.1ರಿಂದ ಜಿಲ್ಲಾ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಟು:
ನಾಳೆಯಿಂದ ಕಾಞಂಗಾಡಿನ ಜಿಲ್ಲಾ ಅಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳ್ಳಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಸಭೆಯಲ್ಲಿ ತಿಳಿಸಿದರು. ಬಲ್ಲ ಪ್ರೀಮೆಟ್ರಿಕ್ ಹಾಸ್ಟೆಲ್ ಕೋವಿಡ್ ಆಸ್ಪತ್ರೆಗೆ ತತ್ಸಂಬಂಧಿಯಾಗಿ ಚಟುವಟಿಕೆ ನಡೆಸಲು ಸಭೆ ತಿಳಿಸಿದೆ.
ತಲಪ್ಪಾಡಿಯಲ್ಲಿ ಸಮವಸ್ತ್ರಧಾರಿ ಸಿಬ್ಬಂದಿ ಕರ್ತವ್ಯದಲ್ಲಿ
ತಲಪ್ಪಾಡಿ ಚೆಕ್ ಪೆÇೀಸ್ಟ್ ನಲ್ಲಿ ಸಮವಸ್ತ್ರಧಾರಿ ಸಿಬ್ಬಂದಿಯನ್ನು ಕರ್ತವ್ಯದಲ್ಲಿ ನೇಮಿಸಲು ಸಭೆ ತೀರ್ಮಾನಿಸಿದೆ. ಮೋಟಾರು ವಾಹನ, ಅಗ್ನಿಶಾಮಕ, ಅಬಕಾರಿ, ಅರಣ್ಯ ಇಲಾಖೆಗಳ ಸಿಬ್ಬಂದಿ ಕರ್ತವ್ಯದಲ್ಲಿರುವರು.
ಸಂಚಾರ ವ್ಯವಸ್ಥೆಗೆ ಸಹಕಾರ ಬೇಕು
ರೋಗ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವ್ಯವಸ್ಥೆಯಲ್ಲಿ ಬಸ್ ಆನ್ ಡಿಮಾಂಡ್ ಯೋಜನೆ ಜಾರಿಗೆ ಬಂದಿದ್ದು, ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಟಾಟಾ ಆಸ್ಪತ್ರೆ ಚಟುವಟಿಕೆ ಆರಂಭಕ್ಕೆ ಕ್ರಮ
ತೆಕ್ಕಿಲ್ ಟಾಟಾ ಆಸ್ಪತ್ರೆ ಚಟುವಟಿಕೆ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಿದರು. ಈ ಸಂಬಮಧ ಎಲ್ಲ ವ್ಯವಸ್ಥೆಗಳೂ ಪೂರ್ಣಗೊಂಡಿರುವ ಬಗ್ಗೆ ಖಚಿತತೆ ಮೂಡಿಸುವಂತೆ ಆಯಾ ಇಲಾಖೆಗಳ ಕಾರ್ಯಕಾರಿ ಇಂಜಿನಿಯರರಿಗೆ ಆದೇಶ ನೀಡಲಾಗಿದೆ.