ಮಂಜೇಶ್ವರ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನುಮ ದಿನಾಚರಣೆಯ ಸಂಭ್ರಮದ ಅಂಗವಾಗಿ ಮಂಜೇಶ್ವರದ ಯುವ ನ್ಯಾಯವಾದಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನವೀನ್ ರಾಜ್ ಕೆ.ಜೆ. ಅವರು ನೀರ್ಚಾಲು ಕನ್ನೆಪ್ಪಾಡಿಯ ಆಶ್ರಯ ವೃದ್ಧಾಶ್ರಮಕ್ಕೆ ಕೊಡುಗೆ ನೀಡಿ ಮಾದರಿಯಾದರು.
ನವೀನ್ ರಾಜ್ ಅವರ 45ನೇ ಜನ್ಮದಿನಾಚರಣೆಯೂ ಗುರುವಾರವೇ ಆಗಿದ್ದು, ಬಂಧು ಬಾಂಧವರೊಡಗೂಡುವ ಈ ಸಂಭ್ರಮವನ್ನು ತ್ಯಜಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾದ ಅವರು ಮೋದಿಜೀ 70ನೇ ಹುಟ್ಟು ಹಬ್ಬದ ಕೊಡುಗೆಯಾಗಿ ಆಶ್ರಯದ ಆಸೆರೆಯಾದರು. ಆಶ್ರಮದ ಸಂಚಾಲಕ ಗಣೇಶ್ ಕೃಷ್ಣ ಅಳಕೆ ಅವರಿಗೆ ಧವಸ ಧಾನ್ಯ ಹಾಗೂ ಪ್ರಧಾನಿಯವರ ಭಾವಚಿತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ - ಪತ್ನಿ ಅನುಪಮ ನವೀನ್ ರಾಜ್, ಓಬಿಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಭಂಡಾರಮನೆ,ಪ್ರಧಾನ ಕಾರ್ಯದರ್ಶಿ ಕೆ.ಪಿ.ಆನಿಲ್ ಕುಮಾರ್, ಓಬಿಸಿ ಮೋರ್ಚಾ ಮೀಡಿಯಾ ಸೆಲ್ ಸಂಚಾಲಕ ರತನ್ ಕುಮಾರ್ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು.