ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 224 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 207 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ 6 ಮತ್ತು ವಿದೇಶದಿಂದ ಬಂದ 11 ಮಂದಿಗೆ ರೋಗ ಬಾಧಿಸಿದೆ. 78 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಸೋಂಕು ಬಾಧಿತರ ಪಂಚಾಯತಿವಾರು ವಿವರ:
ವಲಿಯಪರಂಬ-12, ಅಜಾನೂರು-24, ಮಂಗಲ್ಪಾಡಿ-13, ಕುತ್ತಿಕ್ಕೋಲು-9, ಉದುಮ-21, ಚೆಂಗಳ-8, ಮಧೂರು-5, ಎಣ್ಮಕಜೆ-5, ಚೆಮ್ನಾಡ್-11, ಕುಂಬಳೆ-5, ಈಸ್ಟ್ ಎಳೇರಿ-2, ಪುಲ್ಲೂರು-8, ಕಾಂಞಂಗಾಡ್-14, ಮೊಗ್ರಾಲ್ ಪುತ್ತೂರು-3, ಚೆರ್ವತ್ತೂರು-12, ಪಳ್ಳಿಕೆರೆ-11, ದೇಲಂಪಾಡಿ-3, ಕಾಸರಗೋಡು-16, ಪಡನ್ನ-11, ಕಯ್ಯಾರು-2, ತೃಕ್ಕರಿಪುರ-5, ಕಳ್ಳಾರ್-2, ಪಿಲಿಕ್ಕೋಡು-3, ಕೋಡೋಂ ಬೇಳೂರು-1, ಮಡಿಕೈ-11, ಪೈವಳಿಕೆ-1, ಮುಳಿಯಾರು-1, ಪುತ್ತಿಗೆ-2, ಬಳಾಲ್-1, ನೀಲೇಶ್ವರ-1, ಮಂಜೇಶ್ವರ-1 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ 4359 ಮಂದಿ ನಿರೀಕ್ಷಣೆಯಲ್ಲಿ:
ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ 4359 ಮಂದಿ ಈಗಿದ್ದಾರೆ. ಇದರಲ್ಲಿ ಮನೆಗಳಲ್ಲಿ 3382 ಮತ್ತು ವಿವಿಧ ಕೇಂದ್ರಗಳಲ್ಲಿ 977 ಸೇರಿವೆ. ಹೊಸದಾಗಿ ಸೇರಿಸಲಾದ 670 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಇನ್ನೂ 1270 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 319 ಜನರ ಪರೀಕ್ಷಾ ಫಲಿತಾಂಶ ಇನ್ನೂ ಲಭ್ಯವಾಗಲಿದೆ. 259 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 295 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ 118 ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 9639 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 697 ಮಂದಿ ವಿದೇಶದಿಂದ ಬಂದವರು, 526 ಮಂದಿ ಇತರ ರಾಜ್ಯಗಳಿಂದ ಬಂದವರು. ಮತ್ತು 8413 ಮಂದಿ ಸಂಪರ್ಕದ ಮೂಲಕ ಸೋಂಕಿಗೊಳಗಾದವರಾಗಿದ್ದಾರೆ. 7356 ಜನರಿಗೆ ಕೋವಿಡ್ ಇದುವರೆಗೆ ನಕಾರಾತ್ಮಕವಾಗಿದೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 78 ಕ್ಕೆ ಏರಿದೆ. ಜಿಲ್ಲೆಯಲ್ಲಿ ಪ್ರಸ್ತುತ 2205 ಕೋವಿಡ್ ರೋಗಿಗಳಿದ್ದಾರೆ. ಈ ಪೈಕಿ 1130 ಮಂದಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳದಲ್ಲಿ 7006 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶನಿವಾರ 7006 ಮಂದಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. 21 ಮಂದಿ ಸಾವು ದೃಢೀಕರಿಸಲಾಗಿದ್ದು ಒಟ್ಟು ಸತ್ತವರ ಸಂಖ್ಯೆ 656 ಕ್ಕೇರಿತು. ರೋಗ ಬಾಧಿತರಲ್ಲಿ 68 ಮಂದಿ ವಿದೇಶದಿಂದ ಹಾಗು 177 ಮಂದಿ ಇತರ ರಾಜ್ಯಗಳಿಂದ ಬಂದವರು. 6668 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 93 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ಇದೇ ಸಂದರ್ಭದಲ್ಲಿ 3199 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲಾವಾರು ವಿವರ: ತಿರುವನಂತಪುರ-1050, ಮಲಪ್ಪುರಂ-826, ಎರ್ನಾಕುಳಂ-729, ಕಲ್ಲಿಕೋಟೆ-684, ತೃಶ್ಶೂರು-594, ಕೊಲ್ಲಂ-589, ಪಾಲ್ಘಾಟ್-547, ಕಣ್ಣೂರು-435, ಆಲಪ್ಪುಳ-414, ಕೋಟ್ಟಯಂ-389, ಪತ್ತನಂತಿಟ್ಟ-329, ಕಾಸರಗೋಡು-224, ಇಡುಕ್ಕಿ-107, ವಯನಾಡು-89 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತ : ತಿರುವನಂತಪುರ-373, ಕೊಲ್ಲಂ-188, ಪತ್ತನಂತಿಟ್ಟ-149, ಆಲಪ್ಪುಳ-335, ಕೋಟ್ಟಯಂ-163, ಇಡುಕ್ಕಿ-64, ಎರ್ನಾಕುಳಂ-246, ತೃಶ್ಶೂರು-240, ಪಾಲ್ಘಾಟ್-223, ಮಲಪ್ಪುರಂ-486, ಕಲ್ಲಿಕೋಟೆ-414, ವಯನಾಡು-94, ಕಣ್ಣೂರು-147, ಕಾಸರಗೋಡು-77 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 52,678 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,14,530 ಮಂದಿ ಗುಣಮುಖರಾಗಿದ್ದಾರೆ.