ತಿರುವನಂತಪುರ: ತೀವ್ರಗತಿಯ ಕೋವಿಡ್ ಏರುಗತಿಯ ಮಧ್ಯೆ ರಾಜ್ಯದಲ್ಲಿ ಇಂದು 7354 ಜನರಿಗೆ ಕೋವಿಡ್ ಖಚಿತವಾಗಿದೆ. 3420 ಜನರನ್ನು ಗುಣಪಡಿಸಲಾಗಿದೆ. ಇಂದು ಒಟ್ಟು 22 ಮಂದಿಗಳ ಸಾವಿಗೆ ಕೋವಿಡ್ ಮೂಲವೆಂದೂ ಅಧಿಕೃತರು ತಿಳಿಸಿದ್ದಾರೆ. 670 ಮಂದಿಗಳ ಸೋಂಕಿನ ಮೂಲ ಸ್ಪಷ್ಟವಾಗಿಲ್ಲ.
ಅಕ್ಟೋಬರ್‍ನಲ್ಲಿ ದೈನಂದಿನ ಕೋವಿಡ್ ಬಾಧಿತರ ಸಂಖ್ಯೆ 15,000 ದಾಟುವ ನಿರೀಕ್ಷೆ!:
ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ. ಅಕ್ಟೋಬರ್ ಮಧ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ಏಕಾಏಕಿ ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು. ಪ್ರಕರಣಗಳ ಸಂಖ್ಯೆ ದಿನಕ್ಕೆ 15,000 ಕ್ಕೆ ಏರಿಕೆಯಾಗಲಿದೆ ಎಂದು ಸಿಎಂ ಹೇಳಿದರು. ಕೋವಿಡ್ ಹರಡುವಿಕೆ ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯತ್ತ ರಾಜ್ಯ ಸಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಜನಸೇರುವಂತಹ ಪ್ರತಿಭಟನೆಗಳನ್ನು ನಿಲ್ಲಿಸಬೇಕು ಎಂದು ಕರೆನೀಡಿರುವರು.
ಸಂಪೂರ್ಣ ಲಾಕ್ ಡೌನ್ ಇಲ್ಲ- ಎಲ್ಡಿಎಫ್:
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಂಪೂರ್ಣ ಲಾಕ್‍ಡೌನ್ ಈಗ ಅಗತ್ಯ ಇಲ್ಲ ಎಂದು ಎಲ್‍ಡಿಎಫ್ ಪಕ್ಷ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪರಿಸ್ಥಿತಿ ಭೀಕರವಾಗಿದ್ದರೂ, ಮುಂದಿನ ಎರಡು ವಾರಗಳ ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್‍ಡೌನ್ ವಿಧಿಸುವುದನ್ನು ಪರಿಗಣಿಸಲು ಎಲ್‍ಡಿಎಫ್ ನಿರ್ಧರಿಸಿದೆ. ಎಲ್ಡಿಎಫ್ ಕನ್ವೀನರ್ ಎ.ಎಸ್. ವಿಜಯರಾಘವನ್ ಮಾಹಿತಿ ನೀಡಿದರು.
ಇಂದು 3420 ಮಂದಿ ಸೋಂಕು ಬಾಧಿತರು ಗುಣಮುಖರಾದರು. ಪ್ರಸ್ತುತ 61791 ಜನರು ಚಿಕಿತ್ಸೆಯಲ್ಲಿದ್ದಾರೆ. ಇಂದು 130 ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾದರು.
ಸೆಪ್ಟೆಂಬರ್ ನಲ್ಲಿ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಸುಮಾರು ಶೇ.96 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಈ ಮಟ್ಟವು ಮುಂದುವರಿದರೆ, ದೊಡ್ಡ ಅಪಾಯವಿದೆ ಎಂದು ಸಿಎಂ ಎಚ್ಚರಿಸಿರುವರು. ಪ್ರಸ್ತುತ ಪರಿಸ್ಥಿತಿಯ ವಿಕೋಪಗೊಳ್ಳಲು ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಪಾಲಿಸದಿರುವುದು ಸೋಂಕು ಹೆಚ್ಚಳಗೊಳ್ಳಲು ಕಾರಣ ಎಂದು ಸಿಎಂ ವಿಶ್ಲೇಶಿಸಿದರು. ಇನ್ನು ತುರ್ತು ಅಗತ್ಯದ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಿಎಂ ಹೇಳಿದರು.
ಸೋಂಕು ಬಾಧಿತರ ಜಿಲ್ಲಾವಾರು ವಿವರ:
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಲಪ್ಪುರಂ 1040, ತಿರುವನಂತಪುರ 935, ಎರ್ನಾಕುಳಂ 859, ಕೋಝಿಕ್ಕೋಡ್ 837, ಕೊಲ್ಲಂ 583, ಆಲಪ್ಪುಳ 524, ತ್ರಿಶೂರ್ 484, ಕಾಸರಗೋಡು 453, ಕಣ್ಣೂರು 432, ಪಾಲಕ್ಕಾಡ್ 374, ಕೊಟ್ಟಾಯಂ 336, ಪತ್ತನಂತಿಟ್ಟು 271,ವಯನಾಡ್ 169, ಇಡುಕ್ಕಿ 57 ಮಂದಿಗಳಂತೆ ಸೋಂಕು ಬಾಧಿಸಿದೆ.
ಸಂಪರ್ಕದ ಮೂಲಕ ಕೋವಿಡ್ ಪೀಡಿತರಾದವರು:
ಸಂಪರ್ಕದ ಮೂಲಕ 6,364 ಜನರಿಗೆ ಸೋಂಕು ತಗಲಿತು. 672 ರ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಇವೆರಡೂ ಒಟ್ಟಾಗಿ ಒಟ್ಟು 7036 ಸಂಪರ್ಕ ರೋಗಿಗಳನ್ನು ಹೊಂದಿವೆ. ಮಲಪ್ಪುರಂ 1024, ತಿರುವನಂತಪುರಂ 898, ಎರ್ನಾಕುಳಂ 843, ಕೋಝಿಕ್ಕೋಡ್ 827, ಕೊಲ್ಲಂ 566, ಆಲಪ್ಪುಳ 499, ತ್ರಿಶೂರ್ 476, ಕಾಸರಗೋಡು 400, ಕಣ್ಣೂರು 387, ಪಾಲಕ್ಕಾಡ್ 365, ಕೊಟ್ಟಾಯಂ 324, ಪತ್ತನಂತಿಟ್ಟು 224, ವಯನಾಡ್ 157, ಇಡುಕ್ಕಿ 46 ಮಂದಿಗಳಿಗೆ ಸಂಪರ್ಕದ ಮೂಲಕ ಸೋಂಕು ಹರಡಿರುವುದು ದೃಢಪಟ್ಟಿದೆ.
24 ಗಂಟೆಗಳಲ್ಲಿ 22 ಸಾವುಗಳು:
ಇಂದು, ಕೋವಿಡ್ ಕಾರಣದಿಂದಾಗಿ ರಾಜ್ಯದಲ್ಲಿ 22 ಸಾವುಗಳು ದೃಢಪಡಿಸಲಾಗಿದೆ. ನೆಡುವಂಗಾಡ್ ನ ರವೀಂದ್ರನ್ (61), ಪೆಟ್ಟಾದ ವಿಕ್ರಮನ್ (70), ಕೊಲ್ಲಂ ತೆಕ್ಕಮುರಿಯಿಂದ ಕುಂಜುಮೊನ್ ಡೇನಿಯಲ್ (55), ಪೆರುಂಪುಳದಿಂದ ಮುರಲೀಧರನ್ ಪಿಳ್ಳೈ (62), ಅಂಚಲ್‍ನಿಂದ ಐಷಾ ಬೀವಿ (80),ಕೋಟ್ಟಯಂ ನ ಸಾರಮ್ಮ(75), ವಾಯಿಪ್ಪೇಟದ ಕೆ.ಕೆ.ರಾಜ (53), ತ್ರಿಶೂರ್ ಉತ್ತರದ ಕುಂಜುಮೊನ್ (72), ಪುರಾನಾಟ್ಟುಕರದ ಕುಮಾರನ್ (78), ಒಲೂರಿನಿಂದ ಜಯ (57), ಮಲಪ್ಪುರ ವಟ್ಟತೂರಿನ ಜಾಯ್ (64), ವೆಂಗರದ ಫಾತಿಮಾ (63), ಅಬೂಬಕರ್ (67). , ನೇನ್ಮರದ ಮುಹಮ್ಮದ್ (77), ಪಾಲಕ್ಕಾಡ್ ನ ಕುಮಾರನಲ್ಲೂರಿನ ಶೇಖರನ್ (79), ಕಂಬಾ ನಿವಾಸಿ ದಾಸನ್ (62), ಕಣ್ಣೂರು ಟಾಣಾದ ಎ.ಕೆ. ಕುಂಞಲಿ (73), ಕರಿಯಾಟನ ಕುಂಞಲಿಮಾ (60), ಪಳೆಯಂಗಾಡಿಯ ಕುಂಞÂ ಕಣ್ಣನ್ (65) ಮತ್ತು ಪಯ್ಯನೂರಿನ ಆರ್.ವಿ.ನಾರಾಯಣನ್ (70), ಚೆರುಕ್ಕುನ್ನುವಿನ ಜಮೀಲಾ(66), ಕರ್ನಾಟಕ ಕೊಡಗು ನಿವಾಸಿ, ಬಿಎಸ್.ಎಫ್.ಮುಡಂಗರದ ಉದ್ಯೋಗಿ ಮಜೀದ್(51) ಕೋವಿಡ್ ನಿಂದ ಮರಣಪಟ್ಟವರಾಗಿದ್ದಾರೆ. ರಾಜ್ಯಾದ್ಯಂತ ಈವರೆಗೆ ಕೋವಿಡ್ ಬಾಧಿಸಿ 719 ಕ್ಕೆ ಏರಿಕೆಯಾಗಿದೆ.
ಗುಣಮುಖರಾದವರು:
ಇಂದು, ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3420 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 433, ಕೊಲ್ಲಂ 262, ಪತ್ತನಂತಿಟ್ಟು 137, ಆಲಪ್ಪುಳ 273, ಕೊಟ್ಟಾಯಂ 157, ಇಡುಕ್ಕಿ 84, ಎರ್ನಾಕುಳಂ 216, ತ್ರಿಶೂರ್ 236, ಪಾಲಕ್ಕಾಡ್ 269, ಮಲಪ್ಪುರಂ 519, ಕೋಝಿಕ್ಕೋಡ್ 465, ವಯನಾಡ್ 119, ಕಣ್ಣೂರು 197, ಕಾಸರಗೋಡು 119 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಇದರೊಂದಿಗೆ 61,791 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 1,24,688 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
130 ಆರೋಗ್ಯ ಕಾರ್ಯಕರ್ತರು:
130 ಆರೋಗ್ಯ ಕಾರ್ಯಕರ್ತರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು. ಕಣ್ಣೂರು 32, ತಿರುವನಂತಪುರ 30, ಕಾಸರಗೋಡು 24, ಎರ್ನಾಕುಳಂ 10, ಆಲಪ್ಪುಳ, ತ್ರಿಶೂರ್, ವಯನಾಡ್ ತಲಾ 5, ಪತ್ತನಂತಿಟ್ಟು , ಕೊಟ್ಟಾಯಂ, ಮಲಪ್ಪುರಂ ತಲಾ 4, ಕೊಲ್ಲಂ 3, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ತಲಾ 2 ಎಂಬಂತೆ ಇಂದು ಸೋಂಕಿಗೊಳಗಾಗಿರುವರು.
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 70,589 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಇದು ಕೋವಿಡ್ ಬಲಿಪಶುಗಳ ಒಟ್ಟು ಸಂಖ್ಯೆಯನ್ನು 61,45,292 ಕ್ಕೆ ಏರಿಸಿದೆ. ಭಾರತವು ಪ್ರಸ್ತುತ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳನ್ನು ಹೊಂದಿದೆ. ದೇಶದಲ್ಲಿ ಪ್ರಸ್ತುತ 9,47,576 ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ 51,01,398 ಜನರನ್ನು ಗುಣಪಡಿಸಲಾಗಿದೆ. ಈ ಅವಧಿಯಲ್ಲಿ 11 ಲಕ್ಷಕ್ಕೂ ಹೆಚ್ಚು ತಪಾಸಣೆ ನಡೆಸಲಾಗಿದೆ. ದೇಶದ ಒಂದು ಹಂತದಲ್ಲಿ ಅದು 96,000 ಕ್ಕಿಂತ ಹೆಚ್ಚು ತಲುಪಿದೆ.
ವಿಶ್ವಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಸಾವುಗಳು:
ಚೀನಾದಿಂದ ಹರಡಿದ ಕೋವಿಡ್ ಏಕಾಏಕಿ ವಿಶ್ವದಾದ್ಯಂತ ಇದುವರೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಾನ್ ಹಾಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ಪ್ರಸ್ತುತ ಅಂಕಿಅಂಶಗಳನ್ನು ಹೊರಡಿಸಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಈವರೆಗೆ 3.3 ಕೋಟಿ ಜನರು ಸೋಂಕಿಗೊಳಗಾಗಿದ್ದಾರೆ. ಕೋವಿಡ್ ಪ್ರಸ್ತುತ 210 ದೇಶಗಳಲ್ಲಿ ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಸಾವಿನ ಸಂಖ್ಯೆ ಎರಡು ಮಿಲಿಯನ್ ದಾಟಿದೆ.