HEALTH TIPS

ರಾಜ್ಯದಲ್ಲಿಂದು 7445 ಮಂದಿಗೆ ಕೋವಿಡ್ ಸೋಂಕು- 3391 ಮಂದಿ ಗುಣಮುಖ-ಕಾಸರಗೋಡಲ್ಲಿ 262 ಮಂದಿಗೆ ಸೋಂಕು

 

        ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದ್ದು, ನಿಬಂಧನೆಗಳ ಹಿಂತೆಗೆಯುವಿಕೆ ಹಂತಹಂತವಾಗಿ ಬಲಗೊಳ್ಳುವ ಮಧ್ಯೆ ಸೋಂಕಿನ ಏರುಗತಿ ಜನಸಾಮಾನ್ಯರಿಗೆ ಕಳವಳಕ್ಕೆ ಕಾರಣವಾಗಿದೆ. ಇಂದು 7445 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.  3391 ಮಂದಿ ಚಿಕಿತ್ಸೆಯ ಮೂಲಕ ಗುಣಮುಖರಾದರು. ಇಂದು ಸಂಪರ್ಕದ ಮೂಲಕ 6404 ಮಂದಿಗೆ ಸೋಂಕು ಉಂಟಾಗಿದೆ. ಇಂದು ಸೋಂಕು ದೃಢಪಟ್ಟವರಲ್ಲಿ 62 ಮಂದಿ ವಿದೇಶಗಳಿಂದ ಮತ್ತು 309 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಜೊತೆಗೆ 561 ಮಂದಿಗಳ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. 97 ಆರೋಗ್ಯ ಕಾರ್ಯಕರ್ತರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು.  ಎರ್ನಾಕುಳಂ ಜಿಲ್ಲೆಯ ಎಲ್ಲಾ 12 ಐಎನ್‍ಹೆಚ್‍ಎಸ್ ನೌಕರರು ಸೋಂಕಿಗೊಳಗಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,27,831 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು 21 ಸಾವುಗಳು ದೃಢಪಟ್ಟಿದೆ. 

         ತಿರುವನಂತಪುರ ನೆಡುಮಂಗಾಡ್ ನ ಶಿವಶಂಕರನ್ ನಾಯರ್ (87), ಮರಿಯಾಪುರದ ಧನುಜಾ (90), ವಿತುರಾದ ಶಶಿಧರನ್ ಪಿಳ್ಳೈ (64), ಕೊರಾನಿಯ ರಾಜಪ್ಪನ್ (65), ತಿರುಮಲದಿಂದ ರವೀಂದ್ರನ್ (73), ಪುತುಕುರಿಚ್ಚಿಯ  ಲಾರೆನ್ಸ್ (37)ಕೊಲ್ಲಂನ ಫಾತಿಮಾ ಕುಂಞÂ(80), ಆಲಪ್ಪುಳ  ಜಮೀಲಾ (63), ಕೊಟ್ಟಾಯಂನ ಕೊಚುಮೋಲ್ (43), ಎರ್ನಾಕುಳಂ ಆಲಟ್ಟುಚ್ಚಿರದ ಶಕುಂತಲ(67), ಎಳಮಕ್ಕರದ ಶೇಖ್ ಅಕ್ಬರ್ (65), ಕೋಟ್ಟಕಲ್ ನ ವೇಣುಗೋಪಾಲ(72), ಕೋಝಿಕ್ಕೋಡ್ ನ ಹಸನ್(90), ತಳಿಯಿಲ್ ನ ಉಂಬಿಚ್ಚ ತಂಙಳ್(65), ಓರ್ಕಟ್ಟರಿಯ ಸದಾನಂದನ್(75),  ಜಾಯ್ (57), ಕಾಸರಗೋಡು  ತಳಂಗರೆಯ  ಎಸ್.ಎಚ್.ಕೋಯ(80), ಮಾನೂರ್ ನ ಸುಹರಾ(85), ತಲಶ್ಚೇರಿಯ ಅಸೀಸ್(60), ಚೂವುಂ ನ ಇಬ್ರಾಹಿಂ(50), ಎಳಮಕ್ಕರದ ಶೇಖ್ ಅಕ್ಬರ್(65)ತೃಶೂರ್ ನ ಜೋಯ್(57)ಪಾಲಕ್ಕಾಡಿನ ಸ್ವಲ್ವಂ(65) ಮೃತರಾದವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ  ಒಟ್ಟು ಸಾವಿನ ಸಂಖ್ಯೆ 677 ಕ್ಕೆ ಏರಿಕೆಯಾಗಿದೆ. 

                ಕೋವಿಡ್ ರೋಗಿಗಳು ಮತ್ತು ಜಿಲ್ಲಾ ಆಧಾರದ ಮೇಲೆ ರೋಗ ಮುಕ್ತಿ:

       ಕೋಝಿಕ್ಕೋಡ್ 956, ಎರ್ನಾಕುಳಂ 924, ಮಲಪ್ಪುರಂ 915, ತಿರುವನಂತಪುರ 853, ಕೊಲ್ಲಂ 690, ತ್ರಿಶೂರ್ 573, ಪಾಲಕ್ಕಾಡ್ 488, ಆಲಪ್ಪುಳ 476, ಕೊಟ್ಟಾಯಂ 426, ಕಣ್ಣೂರು 332, ಪತ್ತನಂತಿಟ್ಟು 262, ಕಾಸರಗೋಡು 262, ವಯನಾಡ್ 172, ಇಡುಕ್ಕಿ 125 ಎಂಬಂತೆ ಇಂದು ಕೋವಿಡ್ ದೃಢಪಟ್ಟವರ ಜಿಲ್ಲಾವಾರು ಮಾಹಿತಿಯಾಗಿದೆ.

      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3391 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 434, ಕೊಲ್ಲಂ 269, ಪತ್ತನಂತಿಟ್ಟು 125, ಆಲಪ್ಪುಳ 306, ಕೊಟ್ಟಾಯಂ 123, ಇಡಕ್ಕಿ 94, ಎರ್ನಾಕುಳಂ 337, ತ್ರಿಶೂರ್ 215, ಪಾಲಕ್ಕಾಡ್ 206, ಮಲಪ್ಪುರಂ 399, ಕೋಝಿಕ್ಕೋಡ್ 403, ವಯನಾಡ್ 113, ಕಣ್ಣೂರು 153,ಕಾಸರಗೋಡು 210 ಮಂದಿಗಳು ಗುಣಮುಖರಾದರು. ಇದರೊಂದಿಗೆ 56,709 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 1,17,921 ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

          ಕ್ವಾರಂಟೈನ್ ವಿವರ: 

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,27,831 ಜನರು ಕ್ವಾರಂಟೈನ್ ನಲ್ಲಿರುವರು. ಈ ಪೈಕಿ 1,99,061 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 28,770 ಆಸ್ಪತ್ರೆಗಳಲ್ಲಿರುವರು. ಒಟ್ಟು 3752 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

              ದೇಶದ ಕೋವಿಡ್ ಅಂಕಿಅಂಶಗಳು:

     ಕಳೆದ 24 ಗಂಟೆಗಳಲ್ಲಿ ಕೋವಿಡ್ ದೇಶದ 88,600 ಜನರಲ್ಲಿ  ದೃಢಪಟ್ಟಿದೆ. ಒಟ್ಟು 59,92,533 ಮಂದಿಗೆ ಕೋವಿಡ್ ಸೋಂಕು ತಗಲಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.  ಭಾರತವು ಪ್ರಸ್ತುತ ವಿಶ್ವದ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದಲ್ಲಿ 9,56,402 ಸಕ್ರಿಯ ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 49,41,628 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದೇ ವೇಳೆ ದೇಶದಲ್ಲಿ ದಿನೇದಿನೇ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 1,124 ಸಾವುಗಳು ದೃಢಪಟ್ಟಿದೆ. ಇದು ದೇಶದ ಒಟ್ಟು ಕೋವಿಡ್ ಸಾವುಗಳ ಸಂಖ್ಯೆಯನ್ನು 94,503 ಕ್ಕೆ ಏರಿಸಿದೆ. ದೇಶದಲ್ಲಿ ಶನಿವಾರ ಒಟ್ಟು 1,083 ಸಾವುಗಳು ವರದಿಯಾಗಿವೆ.


       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries