ಬೆಂಗಳೂರು: ಕೆಎಸ್ಆರ್‌ಟಿಸಿ ಓಣಂ ಹಬ್ಬದ ಪ್ರಯುಕ್ತ ಕೇರಳಕ್ಕೆ ವಿಶೇಷ ಬಸ್ ಸೌಲಭ್ಯಗಳನ್ನು ಆರಂಭಿಸಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಬಸ್‌ಗಳ ಸಂಚಾರವನ್ನು ಸೆಪ್ಟೆಂಬರ್ 8ರ ತನಕ ವಿಸ್ತರಣೆ ಮಾಡಲಾಗಿದೆ.
ಗುರುವಾರ ಕೆಎಸ್ಆರ್‌ಟಿಸಿ ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಓಣಂ ಹಬ್ಬದ ಪ್ರಯುಕ್ತ ಆಗಸ್ಟ್ 24ರಿಂದ ಸೆಪ್ಟೆಂಬರ್ 6ರ ತನಕ ಬಸ್ ಸಂಚಾರ ನಡೆಸಲಾಗುತ್ತದೆ ಎಂದು ಹೇಳಿತ್ತು.
ಜನರ ಅನುಕೂಲಕ್ಕಾಗಿ ಬಸ್ ಸಂಚಾರವನ್ನು ಸೆಪ್ಟೆಂಬರ್ 8ರ ತನಕ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದೆ. ಸೆಪ್ಟೆಂಬರ್ 7ರಂದು ಬೆಂಗಳೂರು, ಮೈಸೂರಿನಿಂದ ಸೆ.8ರಂದು ಕೊನೆ ಬಸ್ ಕೇರಳಕ್ಕೆ ಸಂಚಾರ ನಡೆಸಲಿದೆ.ಕೇರಳ ರಾಜ್ಯ ಸರ್ಕಾರದ ಆದೇಶದ ಅನ್ವಯ ಬೇರೆ ರಾಜ್ಯದಿಂದ ಕೇರಳಕ್ಕೆ ಬರುವವರು ಕೇರಳ ಸರ್ಕಾರದ ಕೋವಿಡ್ 19 ಜಾಗೃತ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಬೆಂಗಳೂರಿನಿಂದ ಬಸ್ : ಬೆಂಗಳೂರು ನಗರದಿಂದ ಕೇರಳಕ್ಕೆ ಸೆಪ್ಟೆಂಬರ್ 7ರ ತನಕ ಬಸ್ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಕೇರಳದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಫಾಲಘಾಟ್, ತ್ರಿಶೂರು, ತಿರುವನಂತಪುರಂ, ವಡಕಾರಾಕ್ಕೆ ಬಸ್ ಸಂಚಾರ ನಡೆಸಲಿದೆ.
ಮೈಸೂರಿನಿಂದ ಕೇರಳಕ್ಕೆ ಬಸ್ : ಮೈಸೂರಿನಿಂದ ಕೇರಳದ ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂ ಮತ್ತು ಈ ಸ್ಥಳಗಳಿಂದ ಮೈಸೂರಿಗೆ ಬಸ್ ಸೆಪ್ಟೆಂಬರ್ 8ರ ತನಕ ಸಂಚಾರ ನಡೆಸಲಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಸೂಚನೆ :ಬೇರೆ ರಾಜ್ಯದಿಂದ ಕೇರಳಕ್ಕೆ ಆಗಮಿಸುವವರು ಕೇರಳ ಸರ್ಕಾರದ ಕೋವಿಡ್ 19 ಜಾಗೃತ್ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಪ್ರಯಾಣಿಕರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.
ಬಸ್ ಪ್ರಯಾಣಿಕರಿಗೆ ಮಾಹಿತಿ : ಕೇರಳಕ್ಕೆ ಹೋಗುವ ಬಸ್ ಹತ್ತುವ ಮೊದಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಪುರಾವೆಯನ್ನು ಬಸ್ ಸಿಬ್ಬಂದಿಗೆ ತೋರಿಸಬೇಕು. ಇಲ್ಲವಾದಲ್ಲಿ ಬಸ್ ಹತ್ತಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.