ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 88 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 86 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಒಬ್ಬರು ವಿದೇಶದಿಂದ, ಒಬ್ಬರು ಇತರ ರಾಜ್ಯದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆ ಮಟ್ಟದ ಗಣನೆ : ಕುಂಬಳೆ ಪಂಚಾಯತ್-2, ಚೆಮ್ನಾಡ್-5, ವರ್ಕಾಡಿ-1, ಎಣ್ಮಕಜೆ-1, ಮೊಗ್ರಾಲ್ ಪುತ್ತೂರು-1, ಮಂಜೇಶ್ವರ-1, ಮಂಗಲ್ಪಾಡಿ-4, ಚೆಂಗಳ-12, ಕುತ್ತಿಕೋಲು-1, ಕಾಂಞಂಗಾಡ್ ನಗರಸಭೆ-6, ಅಜಾನೂರು-21, ಪಳ್ಳಿಕ್ಕರೆ-14, ಪಡನ್ನ-2, ಉದುಮ-1, ಮಡಿಕೈ-3, ಪಿಲಿಕೋಡ್-1, ನೀಲೇಶ್ವರ ನಗರಸಭೆ-1, ತ್ರಿಕರಿಪುರ-1, ಪುಲ್ಲೂರು-ಪೆರಿಯ-1, ಕೋಡೋಂ-ಬೇಳೂರು-4, ಕಿನಾನೂರು-ಕರಿಂದಳಂ-3 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ವಿದೇಶ : ಯು.ಎ.ಇ.ಯಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‍ನ 32 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಇತರ ರಾಜ್ಯ : ಕರ್ನಾಟಕದಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆಯ 23 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
158 ಮಂದಿಗೆ ನೆಗೆಟಿವ್ ಆಗಿದೆ : ಕಾಸರಗೋಡು ಜಿಲ್ಲೆಯಲ್ಲಿ 158 ಮಂದಿಗೆ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
6388 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ 6388 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 5392 ಮಂದಿ ಮನೆಗಳಲ್ಲಿ, 996 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತನವಾಗಿ 324 ಮಂದಿ ನಿಗಾ ಪ್ರವೇಶಿಸಿದ್ದಾರೆ. 322 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1171 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 403 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5245 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 4287 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 557 ಮಂದಿ ವಿದೇಶದಿಂದ, 401 ಮಂದಿ ಇತರ ರಾಜ್ಯಗಳಿಂದ ಬಂದವರು. 1331 ಮಂದಿ ಈಗ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. 3847 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 40 ಆಗಿದೆ.