HEALTH TIPS

ದೇವರ ನಾಡಲ್ಲಿ ಕೋವಿಡ್ ನ ಕರಿ ನೆರಳಾಟ-ಇಂದು ಕೇರಳದಲ್ಲಿ 8830 ಮಂದಿ ಸೋಂಕಿತರು-

            ತಿರುವನಂತಪುರ: ದೇವರ ಸ್ವಂತ ನಾಡು ಎಂಬ ಖ್ಯಾತಿಯ ಕೇರಳ ನಿಧಾನವಾಗಿ ಕೋವಿಡ್ ಕರಾಳತೆಗೆ ಜಾರಿ ಕೊಳ್ಳುತ್ತಿದ್ದು ತೀವ್ರ ಸಂಕಷ್ಟದತ್ತ ಮುಂದಿನ ದಿನಗಳು ಬದಲಾಗುವ ಸೂಚನೆ ಲಭ್ಯವಾಗಿದೆ. ಕೇರಳದಲ್ಲಿ ಇಂದು 8830 ಜನರಿಗೆ ಕೋವಿಡ್ ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ವಿವರಗಳು ಲಭ್ಯವಾಗಿದೆ. 

                      ನಿರ್ಣಾಯಕ ಪರಿಸ್ಥಿತಿಯ ಅಂಕಿ ಅಂಶಗಳು:

          ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಪರಿಸ್ಥಿತಿ ನಿರ್ಣಾಯಕವಾಗಿದೆ. ಇಂದು, ಕೋವಿಡ್ 8830 ಪ್ರಕರಣಗಳು ದೃಢಪಟ್ಟಿದೆ.  3536 ಮಂದಿ ಸೋಂಕಿನಿಂದ ಗುಣಮುಖರಾಗಿರುವರು. ಸಂಪರ್ಕದ ಮೂಲಕ 7695 ಜನರಿಗೆ ಸೋಂಕು ತಗಲಿತು. 784 ಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 23 ಸಾವುಗಳು ದೃಢ ಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 742 ಕ್ಕೆ ಏರಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಹಾಟ್‍ಸ್ಪಾಟ್‍ಗಳ ಸಂಖ್ಯೆ ಹೆಚ್ಚಾಗಿದೆ. ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 63,682 ಮಾದರಿಗಳನ್ನು ಪರೀಕ್ಷಿಸಲಾಯಿತು.

                ಕೋವಿಡ್ ಧನಾತ್ಮಕ ಪ್ರಕರಣಗಳ ಜಿಲ್ಲಾವಾರು ವಿವರ: 

    ಹೆಚ್ಚಿನ ಸೋಂಕು ಪ್ರಕರಣಗಳು ಇಂದು ಎರ್ನಾಕುಳಂ ಜಿಲ್ಲೆಯಲ್ಲಿವೆ. ಎರ್ನಾಕುಳಂ 1056, ತಿರುವನಂತಪುರ 986, ಮಲಪ್ಪುರಂ 977, ಕೋಝಿಕ್ಕೋಡ್ 942, ಕೊಲ್ಲಂ 812, ತ್ರಿಶೂರ್ 808, ಆಲಪ್ಪುಳ 679, ಪಾಲಕ್ಕಾಡ್ 631, ಕಣ್ಣೂರು 519, ಕೊಟ್ಟಾಯಂ 442, ಕಾಸರಗೋಡು 321, ಪತ್ತನಂತಿಟ್ಟು 286, ವಯನಾಡ್ 214, ಇಡುಕ್ಕಿ 157 ಎಂಬಂತೆ ಸೋಂಕು ಬಾಧಿಸಿದೆ.

       ಗುಣಮುಖರಾದವರ ವಿವರ: 

     ಚಿಕಿತ್ಸೆಗೆ ಒಳಗಾಗಿರುವ 3536 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ಸರ್ಕಾರ ತಿಳಿಸಿದೆ. ತಿರುವನಂತಪುರ 379, ಕೊಲ್ಲಂ 295, ಪತ್ತನಂತಿಟ್ಟು 204, ಆಲಪ್ಪುಳ 302, ಕೊಟ್ಟಾಯಂ 128, ಇಡುಕ್ಕಿ 21, ಎರ್ನಾಕುಳಂ 263, ತ್ರಿಶೂರ್ 155, ಪಾಲಕ್ಕಾಡ್ 206, ಮಲಪ್ಪುರಂ 601, ಕೋಝಿಕ್ಕೋಡ್ 589, ವಯನಾಡ್ 51, ಕಣ್ಣೂರು 182, ಕಾಸರಗೋಡು 160 ಎಂಬಂತೆ ಸೋಂಕಿನಿಂದ ಗುಣಮುಖರಾದರು.  

             23 ಕೋವಿಡ್ ಸಾವುಗಳು: 

     ಇಂದು ಕೋವಿಡ್ ಸೋಂಕಿನಿಂದ 23 ಮಂದಿ ಸಾವಿಗೀಡಾದರು. ತಿರುವನಂತಪುರ  ತಂಪನೂರಿನ ವಸಂತ (68),ಪಳ್ಳಿಚ್ಚಾಲ್  ಮುರಳಿ (55), ಶ್ರೀಕಾಂಟೇಶ್ವರಂನ ನಟರಾಜ ಸುಂದರಂ (91), ನೆಡುಮಂಗಾಡಿನ ಶಶಿಧರನ್ ನಾಯರ್ (77), ವಳ್ಳಕ್ಕಡವ್ ನ  ಅಬು ತಾಹಿರ್ (68), ವೆಯೋಟ್ ನ ಪದ್ಮಕುಮಾರ್(49), ಆಲಪ್ಪುಳ ಮೇಳಪ್ಪಾಲ್ ನ ತಂಗಮ್ಮ ವರ್ಗೀಸ್ (75), ಮಾವೇಲಿಕ್ಕರದ ಶಾರಿ ರಾಜನ್ (47), ಆಲಪ್ಪುಳ ನಿವಾಸಿ ಪಿ.ವಾಮನ(63), ಪತ್ತನತಿಟ್ಟು ತಿರುವಲ್ಲದ ಶಶಿಧರನ್ (65), ಕೋಟ್ಟಯಂ ಕಣಿಚ್ಚಿಕುಳಂ ನ ಅನಮ್ಮ (65), ಎರ್ನಾಕುಳಂ ಪನಂಗಾಡ್ ನ ಲೀಲಾ (82), ಪಾಲಕ್ಕಾಡ್ ನ ಲಕ್ಷ್ಮಿ (75), ಮೇಲಟ್ಟೂರ್ ನ  ಅಮ್ಮಿಣಿ (58), ಆಮಯೂರ್ ನ  ಗೋಪಾಲಕೃಷ್ಣನ್(78), ನಕ್ಷತ್ರ ನಗರದ ಬಿ.ಸಿ. ಕೃಷ್ಣದಾಸ್ (55), ಕುಂಡಲಸ್ಸೆರಿಯ ತಂಕಪ್ಪನ್ (68), ಕಡಂಬಳಿಪ್ಪುರದ ರಫೀಕ್ (35), ಕೊಟ್ಟವಾಯೂರಿನ ರಾಮಂಕುಟ್ಟಿ (80), ಕಡಕ್ಕಂಕುನ್ನಿನ ಮೋಹನನ್ (61),ಮಲಪ್ಪುರ  ವೆಟ್ಟಂನಿಂದ ಪ್ರೇಮಾ (51), ಮೀನಾಡುತ್ತೂರ್ ನ  ಸೈನುದ್ದೀನ್(63), ಕಾಸರಗೋಡು ಚಿಪ್ಪಾರು ನಿವಾಸಿ ಪರಮೇಶ್ವರ ಆಚಾರ್ಯ (68) ಎಂಬವರು ಕೋವಿಡ್ ಸೋಂಕಿನ ಕಾರಣ ಮೃತರಾದವರಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು ಸಾವಿನ ಸಂಖ್ಯೆ 742 ಕ್ಕೆ ಏರಿಕೆಯಾಗಿದೆ. 

           ಕೋವಿಡ್ ಮಹಾ ಜಿಗಿತ: 

    ರಾಜ್ಯದಲ್ಲಿ ಕೋವಿಡ್ ಬಾಧಿತರ  ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕಳವಳಗಳು ಮುಂದುವರೆದಿದೆ. ದಿನನಿತ್ಯದ ಅಂಕಿ ಅಂಶಗಳು ಹೆಚ್ಚುತ್ತಿದೆ. ಸಂಪರ್ಕ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿವೆ. ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ತಡೆಗಟ್ಟುವ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಜನರ ಸಂಖ್ಯೆಯೂ ಹೆಚ್ಚಿದೆ. ತಿರುವನಂತಪುರ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಕೊಟ್ಟಾಯಂ ಜಿಲ್ಲೆಯಲ್ಲೂ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಬದಲಾಗುತ್ತಲೇ ಇದೆ.


    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries