HEALTH TIPS

ಕರೋನ ಮಹಾಮಾರಿ ಮಾರ್ಗ ನಿರ್ದೇಶನ ಪಾಲಿಸಿಕೊಂಡು ಗೆಜ್ಜೆ ಕಟ್ಟಿ ತಿರುಗಾಟಕ್ಕೆ ಹೊರಡಲಿದೆ "ಚಿಕ್ಕಮೇಳ"


       ಮಂಜೇಶ್ವರ: ಕೋವಿಡ್ 19 ಮಹಾಮಾರಿಯಿಂದಾಗಿ ಕಲೆ ಸಾಹಿತ್ಯ ಸಂಸ್ಕøತಿಗಳು ಮೂಲೆ ಗುಂಪಾಗುವ ಭೀತಿಯಲ್ಲಿವೆ. ಈ ಜಡತ್ವವನ್ನು ಹೊಡೆದೊಡಿಸಲು ಕರೋನ ತೊಲಗಿಸಬೇಕೆಂಬ ಪ್ರಾರ್ಥನೆಯೊಂದಿಗೆ ಚಿಕ್ಕಮೇಳವೊಂದು ಗೆಜ್ಜೆ ಕಟ್ಟಿ ತಿರುಗಾಟಕ್ಕೆ ಇಳಿಯಲಿದೆ. 

      ಕಳೆದ ವರ್ಷ ಮನೆ ಮನೆ ಸಂದರ್ಶಿಸಿ ಕಲಾ ಮಾತೆಯ ಆರಾಧನೆಗೈದ ಪ್ರಬುದ್ಧ ಕಲಾವಿದರನ್ನೊಳಗೊಂಡ ಚಿಕ್ಕ ಮೇಳದ ತಂಡ ಈ ಬಾರಿ ಕೋವಿಡ್ 19 ಸರ್ಕಾರದ ಮಾರ್ಗದರ್ಶನ ಪಾಲಿಸಿಕೊಂಡು ಸೆ.16ರ ಬಳಿಕ ತಿರುಗಾಟ ನಡೆಸಲಿದೆ. ಯಕ್ಷಗಾನ ಕಲಾವಿದ ಕೃಷ್ಣ ರೈ ನೀರ್ಚಾಲು ಅವರ ನೇತೃತ್ವದಲ್ಲಿ  ಈ ಬಾರಿ ಕಂಬಾರು ಶ್ರೀ ದುರ್ಗಾಪರಮೇಶ್ವರಿ ಚಿಕ್ಕ ಮೇಳ ತಂಡವು ಮಂಜೇಶ್ವರ, ಮೀಯಪದವು, ಪೈವಳಿಕೆ,ಪೆರ್ಮುದೆ, ಧರ್ಮತ್ತಡ್ಕ, ಕಯ್ಯಾರ್, ಸೀತಾಂಗೋಳಿ, ಬೇಳ, ನೀರ್ಚಾಲು, ಬದಿಯಡ್ಕ ಮೊದಲಾದೆಡೆ ತಿರುಗಾಟ ನಡೆಸಲಿದ್ದು ಯಕ್ಷ ಸೇವೆ ಆಗ್ರಹಿಸುವವರು +91 97453 21269 ಈ ನಂಬ್ರದಲ್ಲಿ ಸಂಪರ್ಕಿಸಬಹುದೆಂದು ಸಂಬಂದಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries