ಕಾಸರಗೋಡು: ಕೂಡ್ಲು ಸಮೀಪದ ಬಾದಾರದಲ್ಲಿರುವ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ನಾಂಗುರಿ ಸಮೀಪದ ಪ್ರಸನ್ನ ಶಾನುಭೋಗ್ ಅವರಿಗೆ ಸೇರಿದ ಬಯಲಲ್ಲಿ ಭತ್ತದ ಕೃಷಿಯನ್ನು ಮಾಡಲಾಗಿದ್ದು ಭತ್ತದ ಪೈರಿನ ಕೊಯ್ಲು ಉತ್ಸವ ಇತ್ತೀಚೆಗೆ ನಡೆಯಿತು.
ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಯಶೋಧ ಮತ್ತು ಮಧೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್ ಅವರು ಜಂಟಿಯಾಗಿ ಕೊಯ್ಲು ಉತ್ಸವ ಉದ್ಘಾಟಿಸಿದರು.
ಸಮಾರಂಭದಲ್ಲಿ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ ಸುರೇಶ್ ನಾಯ್ಕ್, ಸದಸ್ಯರಾದ ಗೋಪಾಲಕೃಷ್ಣ ಪಾಂಚಜನ್ಯ, ಸುರೇಶ್ ಅಭಿನಂದನ್, ಶರತ್ ನಾಯ್ಕ್, ಸುನಂದ ಹಾಗು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾಸಂಘದ ಅಧ್ಯಕ್ಷೆ ಉಮಾವತಿ, ಕಾರ್ಯದರ್ಶಿ ಮೀರಾ ಗಣೇಶ್, ಕೋಶಾಧಿಕಾರಿ ಗಿರಿಜಾ, ಮತ್ತು ಸದಸ್ಯರು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದ ಅಧ್ಯಕ್ಷ ರಮೇಶ್ ಕಾಞÂ ರತ್ತಡಿ, ಭತ್ತದ ಕೃಷಿಯ ಸಂಚಾಲಕ ರವಿ ಮಣಿಯಾಣಿ ಪಾಯಿಚ್ಚಾಲು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ, ಕಾರ್ಯದರ್ಶಿ ವಸಂತ ನಾಂಗುರಿ ವಂದಿಸಿದರು.