ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿದ ಬಳಿಕ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯದಲ್ಲಿ ಪ್ರಸ್ತುತ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರ ದಾಟಿದೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಸಂಪರ್ಕದ ಮೂಲಕ ಅತಿ ಹೆಚ್ಚಿನ ಸೋಂಕಿತರಿರುವುದು ಕಳವಳಕಾರಿಯಾಗಿದೆ. ಕೋವಿಡ್ ಮರಣದ ಸಂಖ್ಯೆಯೂ ಹೆಚ್ಚುತ್ತಿದೆ.
ಆರೋಗ್ಯ ತಜ್ಞರು ಮತ್ತು ಪೆÇಲೀಸ್ ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಹೊಸ ದಿನಾಂಕವನ್ನು ನಿರ್ಧರಿಸುವ ಸಾಧ್ಯತೆಯಿದೆ. ಮತದಾನವನ್ನು ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‍ನಲ್ಲಿ ನಿಗದಿಪಡಿಸಲಾಗಿದೆ. ಆದರೆ, ಚುನಾವಣಾ ಆಯೋಗವು ಕರೆಯುವ ಸರ್ವಪಕ್ಷ ಸಭೆಯ ಶಿಫಾರಸುಗಳನ್ನು ಪರಿಗಣಿಸಿ ಅನೌಪಚಾರಿಕ ಸಮಾಲೋಚನೆ ಮತ್ತು ಸರ್ಕಾರದೊಂದಿಗೆ ಚರ್ಚೆ ನಡೆಸಿದ ನಂತರ ದಿನಾಂಕದ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಕೋವಿಡ್ ಸೋಂಕು ಮುಂದಿನ ದಿನಗಳಲ್ಲಿ ಐದು ಸಾವಿರವನ್ನು ದಾಟುವ ಸಾಧ್ಯತೆಯಿದ್ದು ಹಾಗಾದಲ್ಲಿ ದಿನಾಂಕ ಮತ್ತೆ ವಿಸ್ತರಿಸಬಹುದು. ರಾಜ್ಯದಲ್ಲಿ ಕೋವಿಡ್ ಸೋಂಕು ಯಾವ ಗತಿಯಲ್ಲಿ ಸಾಗಲಿದೆ ಎಂಬುದೂ ಅಸ್ಪಷ್ಟವಾಗಿಯೇ ಕಳವಳಕ್ಕೆ ಕಾರಣವಾಗಿದೆ.