ಕಾಸರಗೋಡು: : ಕೋಟಿಗಟ್ಟಲೆ ರೂ. ವಂಚಿಸಿದ ಆರೋಪವನ್ನು ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ಅವರನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಚಿನ್ನ ವ್ಯಾಪಾರ ಸಂಸ್ಥೆಯ ನೆಪದಲ್ಲಿ ಕೋಟಿಗಟ್ಟಲೆ ರೂಪಾಯಿ ವಂಚಿಸಿರುವ ಶಾಸಕರು ದೊಡ್ಡ ಅಪರಾಧವನ್ನು ಮಾಡಿದ್ದಾರೆಂದು ಶ್ರೀಕಾಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರಿಗೆ ಮಾದರಿಯಾಗಬೇಕಿದ್ದ ಶಾಸಕ ವಂಚಕರಿಗೆ ಮಾದರಿಯಾಗಿದ್ದಾರೆ ಎಂದು ಬಿಜೆಪಿ ದೂರಿದೆ. ವಂಚಕ ಶಾಸಕರನ್ನು ರಕ್ಷಿಸುವ ನಿಲುವನ್ನು ಮುಸ್ಲಿಂ ಲೀಗ್ ಕೈಗೊಂಡಿರುವುದೆಂದು ಶ್ರೀಕಾಂತ ಕಟುವಾಗಿ ಟೀಕಿಸಿದ್ದಾರೆ. ವಂಚನಾ ಪ್ರಕರಣದ ದೂರುದಾರರನ್ನು ಬೆದರಿಸುವ ಹಾಗೂ ಆಮಿಷವೊಡ್ಡಿ ಪ್ರಕರಣವನ್ನು ಬುಡಮೇಲು ಮಾಡುವ ಪ್ರಯತ್ನಗಳನ್ನು ಆರೋಪಿಗಳು ಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಯು ಡಿ ಎಫ್ ನೇತೃತ್ವ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಪಷ್ಟವಾದ ಮಾಹಿತಿ ಮತ್ತು ದಾಖಲೆಗಳು ಲಭಿಸಿದ್ದರೂ ಶಾಸಕರು ಸೇರಿ ವಂಚನಾ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೆÇಲೀಸರು ವಿಫಲರಾಗಿದ್ದಾರೆ. ಪೆÇಲೀಸರ ನಿಷ್ಕ್ರಿಯತೆ ಪ್ರತಿಭಟನಾರ್ಹವೆಂದು ಬಿಜೆಪಿ ತಿಳಿಸಿದೆ. ಮುಸ್ಲಿಂ ಲೀಗಿನ ಒತ್ತಡದಿಂದಾಗಿ ಪೆÇಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಶ್ರೀಕಾಂತ್ ದೂರಿದ್ದಾರೆ.ಪ್ರಕರಣವನ್ನು ಅಪರಾಧ ಪತ್ತೆ ವಿಭಾಗಕ್ಕೆ ನೀಡಿರುವುದು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವುದು ವಿಳಂಬಗೊಳ್ಳಲು ಕಾರಣವಾಗಲಿದೆ ಮತ್ತು ಆರೋಪಿಗಳಿಗೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ಪ್ರಕರಣವನ್ನು ಬುಡಮೇಲು ಮಾಡಲು ಸಮಯ ಅವಕಾಶ ನೀಡಿದಂತಾಗಿದೆ ಎಂದು ಶ್ರೀಕಾಂತ್ ಸಂಶಯ ವ್ಯಕ್ತಪಡಿಸಿದ್ದಾರೆ. ದೂರು ಬುಡಮೇಲು ಮಾಡುವ ಒಳಸಂಚು ನಡೆಯುತ್ತಿದೆ. ಶಾಸಕ ಖಮರುದ್ದೀನ್ ಸಹಿತ ಪ್ರಕರಣದ ಇತರ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಖಮರುದ್ದಿನ್ ರಾಜೀನಾಮೆ ಆಗ್ರಹಿಸಿ ಹಾಗೂ ಅವರನ್ನು ಬಂಧಿಸಬೇಕೆಂದು ಬೇಡಿಕೆ ಮುಂದಿಟ್ಟು ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.